ಎಟಿಎಂ ನಗದು ಡ್ರಾ ಮಿತಿಯನ್ನು ಕಡಿತಗೊಳಿಸಿದ ಎಸ್​ಬಿಐ

ನವದೆಹಲಿ: ದೇಶದ ಅತಿದೊಡ್ಡ ಬ್ಯಾಂಕ್ ಎಂಬ ಹೆಗ್ಗಳಿಕೆಯ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್​ಬಿಐ) ತನ್ನ ಗ್ರಾಹಕರ ಎಟಿಎಂ ಡ್ರಾ ಮಿತಿಯನ್ನು ಕಡಿತಗೊಳಿಸಿದೆ. ಈ ಹೊಸ ನಿಯಮ ಅಕ್ಟೋಬರ್​​ 31 ರಿಂದ ಜಾರಿಗೆ ಬರಲಿದೆ.

ಈ ಹಿಂದೆ ಇದ್ದ ಒಂದು ದಿನದ ಡ್ರಾ ಮಿತಿಯನ್ನು 40,000 ದಿಂದ 20,000ಕ್ಕೆ ಇಳಿಸಲಾಗಿದೆ. ಎಟಿಎಂ ವಹಿವಾಟುಗಳಲ್ಲಿನ ವಂಚನೆ ಕುರಿತಾದ ಅನೇಕ ದೂರುಗಳು ಬಂದ ಹಿನ್ನೆಲೆಯಲ್ಲಿ ಎಸ್​ಬಿಐ ಈ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಅಲ್ಲದೆ, ನಗದು ರಹಿತ ವಹಿವಾಟನ್ನು ಉತ್ತೇಜಿಸುವ ಉದ್ದೇಶವನ್ನು ಹೊಂದಿದೆ.

ಎಸ್​ಬಿಐ ಅಧೀನದಲ್ಲಿ ಬರುವ ಎಲ್ಲ ಬ್ಯಾಂಕ್​ಗಳು ಈ ಬಗ್ಗೆ ಗ್ರಾಹಕರಿಗೆ ತಿಳಿಸಲು ಸೂಚನಾ ಫಲಕವನ್ನು ಅಳವಡಿಸುವಂತೆ ಹೇಳಿದೆ. (ಏಜೆನ್ಸೀಸ್​)