ಎಸ್​ಬಿಐ ಶಾಖೆಗೆ ಬೆಂಕಿ: ಹಲವು ವಸ್ತುಗಳು ಸುಟ್ಟು ಕರಕಲು

ತುಮಕೂರು: ಸಿ.ಎಸ್​.ಪುರದ ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ ಶಾಖೆಗೆ ಬೆಂಕಿ ಬಿದ್ದು ಹಲವು ವಸ್ತುಗಳು ನಾಶವಾಗಿವೆ.

ಗುಬ್ಬಿ ತಾಲೂಕಿನ ಸಿ.ಎಸ್​.ಪುರದ ಎನ್​ಎಸ್​ಆರ್​ ಕಾಂಪ್ಲೆಕ್ಸ್​ನಲ್ಲಿರುವ ಎಸ್​ಬಿಐ ಶಾಖೆಯಲ್ಲಿ ಗುರುವಾರ ಮುಂಜಾನೆ 6 ಗಂಟೆಗೆ ವಿದ್ಯುತ್​ ಶಾರ್ಟ್​ ಸರ್ಕ್ಯೂಟ್​ನಿಂದ ಬೆಂಕಿ ಕಾಣಿಸಿಕೊಂಡಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಅವಘಡದಲ್ಲಿ ಆದರೆ ಹಲವು ವಸ್ತುಗಳು ಸುಟ್ಟು ಕರಕಲಾಗಿವೆ.

ಸ್ಥಳಕ್ಕೆ ಭೇಟಿ ಕೊಟ್ಟಿರುವ ಪೊಲೀಸರು ಬೆಂಕಿಗೆ ಕಾರಣವೇನು ಎಂಬುದನ್ನು ಪರಿಶೀಲನೆ ನಡೆಸಿದ್ದಾರೆ. (ದಿಗ್ವಿಜಯ ನ್ಯೂಸ್​)