ಭಾಷೆ ಮತ್ತು ವರ್ತನೆಗೆ ನೇರ ಸಂಬಂಧವಿದೆ: ಸಾಹಿತಿ ಅರವಿಂದ ಚೊಕ್ಕಾಡಿ

blank

ಬೆಳಗಾವಿ: ಭಾಷಾ ಬಳಕೆಯ ಬಗ್ಗೆ ಬಹಳ ಎಚ್ಚರದಿಂದ ಇರಬೇಕು. ಭಾಷೆಯು ವ್ಯಕ್ತಿತ್ವವನ್ನು ನಿರ್ಧರಿಸುತ್ತದೆ. ಅದು ನಮ್ಮ ವರ್ತನೆಗೆ ನೇರ ಸಂಬಂಧವಿದೆ. ವರ್ತನೆಯ ಮೇಲೆ ಭವಿಷ್ಯ ನಿರ್ಧಾರವಾಗಲಿದೆ ಎಂದು ಖ್ಯಾತ ಅಂಕಣಕಾರ ಮತ್ತು ಸಾಹಿತಿ ಅರವಿಂದ ಚೊಕ್ಕಾಡಿ ಹೇಳಿದರು.

blank

ಶುಕ್ರವಾರ ನಗರದ ಕುಮಾರ ಗಂಧರ್ವ ಕಲಾಮಂದಿರದಲ್ಲಿ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ 2024-25ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ, ಎನ್. ಎಸ್. ಎಸ್., ರೆಡ್ ಕ್ರಾಸ್ ಕಾರ್ಯಚಟುವಟಿಕೆಗಳ ಸಮಾರೋಪ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.

ಕಲಿಕೆ ವಿದ್ಯಾರ್ಥಿಗಳಲ್ಲಿ ಧನಾತ್ಮಕತೆಯನ್ನು ತರುತ್ತದೆ. ವಿದ್ಯಾರ್ಥಿಗಳು ಅಧ್ಯಯನ ಮಾಡುವಾಗ ಆಸಕ್ತಿಯಿಂದ ಮಾಡಬೇಕು. ಯಾರಲ್ಲಿ ಸಿದ್ಧತೆಯ ಕೊರತೆ ಇರುತ್ತದೆಯೋ ಅವರಲ್ಲಿ ಭಯ ಆವರಿಸುತ್ತದೆ. ಯಾವಾಗ ಭಯ ಆವರಿಸುತ್ತದೆ ಆಗ ವೈಚಾರಿಕತೆಯಿಂದ ದೂರ ಸರಿಯುತ್ತೇವೆ.

ಬಹುತೇಕ ವಿದ್ಯಾರ್ಥಿಗಳು ಕೆಲವೇ ಕೆಲವು ಕ್ಷೇತ್ರಗಳ ಕಡೆಗೆ ಒಲವು ತೋರುತ್ತಾರೆ. ಇದರಿಂದ ವ್ಯವಸ್ಥೆಯು ಅಸಮತೋಲನವಾಗುತ್ತದೆ. ಹಾಗಾಗಿ ಮಾನವ ಸಂಪನ್ಮೂಲ ಎಲ್ಲಾ ಕ್ಷೇತ್ರಗಳಿಗೂ ಸಮನಾಗಿ ಹಂಚಿಕೆಯಾಗಬೇಕು. ನಮ್ಮ ವಿದ್ಯಾರ್ಥಿಗಳ ಸಮುದಾಯವನ್ನು ಪರಿಗಣಿಸಿದಾಗ ಜೀವನದ ಉದ್ದೇಶಗಳನ್ನು ನಿಖರವಾಗಿ ಹೊಂದಿದವರ ಸಂಖ್ಯೆ ತುಂಬಾ ವಿರಳ. ಉಳಿದವರು ಬದುಕು ಬಂದ ಕಡೆ ಸಾಗುತ್ತಾರೆ. ಕುಟುಂಬದಲ್ಲಿ ಮಕ್ಕಳಿಗೆ ಹೆಣ್ಣಿನ ಬಗ್ಗೆ ಗೌರವಿಸುವ ಸಂಸ್ಕೃತಿ ಹೇಳಿಕೊಟ್ಟಾಗ ಅವರು ಹೊರ ಬಂದಾಗ ಹೆಣ್ಣನ್ನು ಗೌರವಿಸುತ್ತಾರೆ.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿ ಎಂ.ಎ.ಸಪ್ನಾ ಅವರು ಮಾತನಾಡಿ, ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿ ಜೀವನವನ್ನು ಮೆಲುಕು ಹಾಕುತ್ತದೆ. ಜೀವನದಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸಲು ವಿದ್ಯಾರ್ಥಿ ಜೀವನದ ಅನುಭವಗಳು ಸಹಕಾರಿಯಾಗಲಿವೆ. ನಿಮ್ಮ ಕೌಶಲ್ಯ ಮತ್ತು ಜ್ಞಾನದ ಮೇಲೆ ನಿಮಗೆ ನಂಬಿಕೆಯಿರಲಿ. ಅವಕಾಶಗಳು ಬಂದಾಗ ಅದನ್ನು ಸದುಪಯೋಗ ಪಡಿಸಿಕೊಳ್ಳಿ. ಎಂಥ ಪರಿಸ್ಥಿತಿಗಳನ್ನು ಎದುರಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಿ. ಕಲಿಕೆ ನಿರಂತರವಾದುದು. ನೀವು ಕಲಿತ ಜ್ಞಾನ, ಕೌಶಲ್ಯಗಳು ಭವಿಷ್ಯದಲ್ಲಿ ನಿಮಗೆ ಬರುವ ಎಲ್ಲಾ ಸವಾಲುಗಳನ್ನು ಎದುರಿಸುವ ಶಕ್ತಿ ಸಾಮರ್ಥ್ಯ, ಆತ್ಮವಿಶ್ವಾಸ ಮೂಡಿಸಲಿ ಎಂದು ವಿದ್ಯಾರ್ಥಿಗಳಿಗೆ ಹಾರೈಸಿದರು.

ಮಹಾವಿದ್ಯಾಲಯದ ಪ್ರಾಚಾರ್ಯ ಎಂ. ಜಿ. ಹೆಗಡೆ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಅಂಕಗಳು ನಮ್ಮ ಬದುಕನ್ನು ನಿರ್ಮಿಸಲಾರದು. ಉದ್ಯೋಗ ಜಗತ್ತು ಕೂಡ ಅದನ್ನು ಹೆಚ್ಚಾಗಿ ಪರಿಗಣಿಸುವುದಿಲ್ಲ. ನಮ್ಮಲ್ಲಿರುವ ಸಾಮರ್ಥ್ಯ, ಜ್ಞಾನ, ವಿಶಿಷ್ಟತೆಗಳು ನಮ್ಮ ಭವಿಷ್ಯಕ್ಕೆ ದಾರಿಯನ್ನು ತೋರಿಸುತ್ತದೆ. ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯ ಅರಿತು ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡಾಗ ನೀವು ಸಂತೋಷವಾಗಿರುತ್ತೀರಿ, ಅದರಲ್ಲಿ ಯಶಸ್ಸನ್ನು ಗಳಿಸುತ್ತೀರಿ. ನೀವು ಪಡೆದುಕೊಂಡ ಜ್ಞಾನಸಂಪತ್ತು ನಿಮ್ಮ ಭವಿಷ್ಯವನ್ನು ರೂಪಿಸಲಿ ಎಂದರು.

ಮಹಾವಿದ್ಯಾಲಯದ ವಿದ್ಯಾರ್ಥಿಗಳ ಪ್ರಧಾನ ಕಾರ್ಯದರ್ಶಿ ಕೃಷ್ಣಪ್ಪ ಗುಗ್ಗರಿ ವರದಿ ವಾಚಿಸಿದರು.
ವಿದ್ಯಾರ್ಥಿನಿಯರಾದ ಹರ್ಷಿತಾ ಮರಳಿ ಮತ್ತು ಸುನಿತಾ ಕೊಳವಿ ನಿರೂಪಿಸಿದರು, ಪ್ರಿಯಾಂಕಾ ತಿಲಗಾರ ಪ್ರಾರ್ಥಿಸಿದರು, ಶ್ರಾವಣಿ ಮಾಳಿ ಪರಿಚಯಿಸಿದರು, ಲಕ್ಷ್ಮೀ ಹೊನಗೌಡರ್ ವಂದಿಸಿದರು, ವಿದ್ಯಾರ್ಥಿ ತುಕಾರಾಮ ಗೌಡರ್ ಸ್ವಾಗತಿಸಿದರು.

Share This Article
blank

ತುಪ್ಪ ತಿನ್ನೋದರಿಂದ ದಪ್ಪಾ ಆಗ್ತಾರಾ? ಯಾವ ಸಮಯದಲ್ಲಿ ಸೇವಿಸುವುದು ಬೆಸ್ಟ್​, ಇಲ್ಲಿದೆ ಉತ್ತರ | Ghee

Ghee Benefits: ತುಪ್ಪ ಬಹುತೇಕರಿಗೆ ಇಷ್ಟ. ತಾವು ಸೇವಿಸುವ ಆಹಾರದಲ್ಲಿ ತುಪ್ಪವಿದ್ದರೆ ವಿಶೇಷ ರುಚಿ ಎಂದು…

ಈ ಪದಾರ್ಥಗಳು ನಾಲಿಗೆಗೆ ಕಹಿ ಆದ್ರೂ ಆರೋಗ್ಯಕ್ಕೆ ವರದಾನ; ಇದರ ಬಗ್ಗೆ ತಿಳಿಯಿರಿ.. | Health Tips

Health Tips: ಸಾಧಾರಣವಾಗಿ ನಾವು ಕಹಿ ಆಹಾರ ಪದಾರ್ಥಗಳು ಎಂದರೆ ದೂರ ಓಡುತ್ತೇವೆ. ನಮ್ಮಲ್ಲಿ ಹಲವರು…

blank