ಸರ್ಕಾರ ಉಳಿಯಬಾರದು, ಉರುಳಬೇಕು; ಇನ್ನೂ ಕೆಲವು ದೋಸ್ತಿ ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂದ ಕಾಂಗ್ರೆಸ್‌ ಮಾಜಿ ಶಾಸಕ

ತುಮಕೂರು: ಸರ್ಕಾರ ಉಳಿಬಾರದು. ಸರ್ಕಾರ ಉರುಳಬೇಕು ಎನ್ನುವುದು ನನ್ನ ಅಭಿಪ್ರಾಯ. ಮೈತ್ರಿ ಮಾಡಿಕೊಂಡು ನಾವು ನೆಲಕಚ್ಚಿದ್ದೇವೆ. ಅಂತದ್ದರಲ್ಲಿ ಸಿಎಂ ಕುಮಾರಸ್ವಾಮಿಯವರನ್ನು ಸಮರ್ಥಿಸಿಕೊಳ್ಳುವ ನಮ್ಮವರಿಗೆ ಬುದ್ಧಿ ಇಲ್ಲ ಎಂದು ಕಾಂಗ್ರೆಸ್‌ ಮಾಜಿ ಶಾಸಕ ಕೆ ಎನ್‌ ರಾಜಣ್ಣ ಹೇಳಿದರು.

ಶಾಸನ ಸಭೆಯಲ್ಲಿ ಮಾತನಾಡುವುದು ಶಾಸಕರ ಹಕ್ಕು. ಹಾಗಂತ ಸುಖಾಸುಮ್ಮನೆ ಕಾಲಹರಣ ಮಾಡಬಾರದು. ಈಗ ಶಾಸಕರು ಮಾಡುತ್ತಿರುವುದು ಪ್ರಜಾಪ್ರಭುತ್ವಕ್ಕೆ ಕಪ್ಪು ಚುಕ್ಕೆ. ಬಿಜೆಪಿಯವರಿಗೆ ಬೈದರೆ ಮಾತ್ರ ಮುಸ್ಲಿಮರು ಕಾಂಗ್ರೆಸ್‌ಗೆ ವೋಟ್‌ ಹಾಕುತ್ತಾರೆ. ಹಾಗಾಗಿ ಕಾಂಗ್ರೆಸ್ – ಜೆಡಿಎಸ್ ಜಗಳ ಇದಾಗಿದ್ದರೂ ಬಿಜೆಪಿಗೆ ಬೈಯುತ್ತಿದ್ದಾರೆ. ಯಾವುದೇ ಕಾರಣಕ್ಕೂ ಬಹುಮತ ಬರುವುದಿಲ್ಲ ಎಂದು ಹೇಳಿದರು.

ಈ ಸರ್ಕಾರ ಕಾಂಗ್ರೆಸ್‌ ಒಂದಿಬ್ಬರು ಶಾಸಕರು ಹಾಗೂ ದೇವೇಗೌಡರ ಕುಟುಂಬದವರಿಗೆ ಮಾತ್ರ ಬೇಕಾಗಿದೆ. ಇನ್ನೂ ಕೆಲವು ದೋಸ್ತಿ ಶಾಸಕರು ರಾಜೀನಾಮೆ ನೀಡಲಿದ್ದಾರೆ. ಹೆಸರು ಹೇಳಿದರೆ ಅವರು ಅಲರ್ಟ್ ಆಗುತ್ತಾರೆ.
ಹಾಗಾಗಿ ಅವರ ಹೆಸರು ಹೇಳುವುದಿಲ್ಲ. 1989ರಲ್ಲಿ 20 ಜನ ಶಾಸಕರಿಗೆ ರಾಜೀನಾಮೆ ಕೊಡಿಸಿ ದೇವೇಗೌಡರು ಎಸ್.ಆರ್. ಬೊಮ್ಮಯಿ ಸರ್ಕಾರ ಉರುಳಿಸಿದರು. ಆಗ ದೇವೇಗೌಡರಿಗೆ ಪ್ರಜಾಪ್ರಭುತ್ವದ ಕಗ್ಗೊಲೆ ಆಗಿರಲಿಲ್ಲ. ಇವತ್ತು ಪ್ರಜಾಪ್ರಭುತ್ವದ ಕಗ್ಗೊಲೆ ಎನ್ನುತ್ತಾರೆ ಎಂದು ಕಿಡಿಕಾರಿದರು. (ದಿಗ್ವಿಜಯ ನ್ಯೂಸ್)

One Reply to “ಸರ್ಕಾರ ಉಳಿಯಬಾರದು, ಉರುಳಬೇಕು; ಇನ್ನೂ ಕೆಲವು ದೋಸ್ತಿ ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂದ ಕಾಂಗ್ರೆಸ್‌ ಮಾಜಿ ಶಾಸಕ”

Leave a Reply

Your email address will not be published. Required fields are marked *