More

    ಸವಿ ಸವಿ ಸಂಕ್ರಾಂತಿ

    ನಾಳೆಯೇ ಸಂಕ್ರಾಂತಿ ಹಬ್ಬ. ಬಹುತೇಕ ಮನೆಗಳಲ್ಲಿ ಇವತ್ತಿನಿಂದಲೇ ಸಿಹಿ ತಿನಿಸುಗಳ ತಯಾರಿ ಭರ್ಜರಿಯಿಂದ ಸಾಗಿದೆ. ಸಾಮಾನ್ಯವಾಗಿ ಸಿಹಿ ಮತ್ತು ಖಾರದ ಪೊಂಗಲ್ ಎಲ್ಲರಿಗೂ ತಿಳಿದದ್ದೇ. ಅವುಗಳನ್ನು ಹೊರತುಪಡಿಸಿ ಸಂಕ್ರಾಂತಿ ದಿನದಂದು ವಿವಿಧೆಡೆ ಮಾಡುವ ತಿನಿಸುಗಳನ್ನು ಹೇಗೆ ಮಾಡುವುದು ಎಂದು ನೋಡೋಣ

    ಎಳ್ಳು ಬೆಲ್ಲದ ಲಾಡು

    ಬೇಕಾಗುವ ಸಾಮಗ್ರಿಗಳು: ್ಣಳಿ ಎಳ್ಳು – 1ಕಪ್ ್ಣುಪ್ಪ – 4 ಚಮಚ ್ಣೆಲ್ಲ – 1 ಕಪ್ ್ಣಲಕ್ಕಿ ಪುಡಿ- 2 ಚಮಚ ್ಣೕರು 3 ಕಪ್

    ಮಾಡುವುದು ಹೀಗೆ: ಅಗಲದ ಪ್ಯಾನ್​ನಲ್ಲಿ ಸಣ್ಣ ಉರಿಯಲ್ಲಿ ಎಳ್ಳು ಹಾಕಿ ಗೋಲ್ಡನ್ ಕಲರ್ ಬರುವವರೆಗೆ ನಾಲ್ಕೈದು ನಿಮಿಷಗಳವರೆಗೆ ಹುರಿಯಿರಿ. ನಂತರ, ಹುರಿದ ಎಳ್ಳನ್ನು ತಟ್ಟೆಗೆ ಹಾಕಿ ತಣಿಯಲು ಬಿಡಿ. ಪಾತ್ರೆಯಲ್ಲಿ ನೀರನ್ನು ಕುದಿಸಿ ಇದಕ್ಕೆ ಬೆಲ್ಲವನ್ನು ಹಾಕಿ. ಆಗಾಗ್ಗೆ ತಿರುಗಿಸಿಕೊಂಡು ಅದನ್ನು ದಪ್ಪ ಮಿಶ್ರಣವಾಗಿಸಿ. ಈ ಮಿಶ್ರಣ ದಪ್ಪಗಾದ ನಂತರ, ಹುರಿದ ಎಳ್ಳಿನ ಕಾಳು ಮತ್ತು ಏಲಕ್ಕಿ ಹುಡಿಯನ್ನು ಸೇರಿಸಿ. ಚೆನ್ನಾಗಿ ಮಿಕ್ಸ್ ಮಾಡಿ. ಕರಗಿಸಿದ ತುಪ್ಪವನ್ನು ಮಿಶ್ರಣವಿರುವ ಪಾತ್ರೆಗೆ ಹಾಕಿ. ಗ್ಯಾಸ್ ಆಫ್ ಮಾಡಿ. ತಣ್ಣಗಾಗುವ ಮೊದಲೇ ಅಂದರೆ ಮಿಶ್ರಣ ಬಿಸಿ ಇರುವಾಗಲೇ ಉಂಡೆ ಕಟ್ಟಿ. ಕೈಗೆ ಸ್ಪಲ್ಪ ತುಪ್ಪ ಹಚ್ಚಿಕೊಂಡರೆ ಉಂಡೆ ಕಟ್ಟುವುದು ಸುಲಭ. ಗಾಳಿಯಾಡದ ಡಬ್ಬದಲ್ಲಿ ಇಟ್ಟರೆ ಅನೇಕ ದಿನಗಳವರೆಗೆ ಹಾಳಾಗುವುದಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts