ನಾಳೆಯೇ ಸಂಕ್ರಾಂತಿ ಹಬ್ಬ. ಬಹುತೇಕ ಮನೆಗಳಲ್ಲಿ ಇವತ್ತಿನಿಂದಲೇ ಸಿಹಿ ತಿನಿಸುಗಳ ತಯಾರಿ ಭರ್ಜರಿಯಿಂದ ಸಾಗಿದೆ. ಸಾಮಾನ್ಯವಾಗಿ ಸಿಹಿ ಮತ್ತು ಖಾರದ ಪೊಂಗಲ್ ಎಲ್ಲರಿಗೂ ತಿಳಿದದ್ದೇ. ಅವುಗಳನ್ನು ಹೊರತುಪಡಿಸಿ ಸಂಕ್ರಾಂತಿ ದಿನದಂದು ವಿವಿಧೆಡೆ ಮಾಡುವ ತಿನಿಸುಗಳನ್ನು ಹೇಗೆ ಮಾಡುವುದು ಎಂದು ನೋಡೋಣ
ಸಕ್ಕರೆ ಅಚ್ಚು
ಬೇಕಾಗುವ ಸಾಮಗ್ರಿಗಳು: ್ಣಕ್ಕರೆ ಅರ್ಧ ಕೆಜಿ ್ಣಕ್ಕರೆ ಅಚ್ಚು ಮಾಡುವ ಮರದ ಮೌಲ್ಡ್ ಅಥವಾ ಪ್ಲಾಸ್ಟಿಕ್ ್ಣೊಸರು ಕಾಲು ಕಪ್ ್ಣಾಲು ಕಾಲು ಕಪ್ ್ಣೕರು ಕಾಲು ಕಪ್ ್ಣುಡ್ ಕಲರ್ ಇಷ್ಟವಿದ್ದಲ್ಲಿ ಮಾತ್ರ
ಮಾಡುವುದು ಹೀಗೆ: ಅಚ್ಚು ಮಾಡಲು ಮರದ ಮೌಲ್ಡ್ ಬಳಸುವುದಾದರೆ 3-4 ತಾಸು ನೀರಿನಲ್ಲಿ ನೆನೆಸಿಡಬೇಕು. ಪ್ಲಾಸ್ಟಿಕ್ ಅಥವಾ ಫೈಬರ್ ಮೌಲ್ಡ್ ಆಗಿದ್ರೆ ಡೈರೆಕ್ಟ್ ಆಗೇ ಹಾಕಬಹುದು. ಮರದ ಮೌಲ್ಡ್ ಆಗಿದ್ದರೆ ನೀರಿನಲ್ಲಿ ನೆನೆಸಿದ ಬಳಿಕ ಸಕ್ಕರೆ ಪಾಕ ಮಾಡುವಾಗ ನೀರಿನಿಂದ ತೆಗೆದು ಒಣಗಿದ ಬಟ್ಟೆಯಲ್ಲಿ ಒರೆಸಿರಿ. ಸಕ್ಕರೆ ಪಾಕ ತಯಾರಿಸಲು ಗಟ್ಟಿ ತಳದ ಪಾತ್ರೆ ಬಳಸಿ. ಪಾತ್ರೆಗೆ ಸಕ್ಕರೆ ಹಾಕಿ ಅದಕ್ಕೆ ಕಾಲು ಕಪ್ ನೀರು ಹಾಕಿ ಕುದಿಸಿ. ಸಕ್ಕರೆ ಕರಗಿದ ಮೇಲೆ ಅದಕ್ಕೆ ಕಾಲು ಕಪ್ ಹಾಲು ಹಾಕಿ ಮೂರ್ನಾಲ್ಕು ನಿಮಿಷ ಕುದಿಸಿ. ಮಿಶ್ರಣಕ್ಕೆ ಕಾಲು ಕಪ್ ಮೊಸರು ಹಾಕಿ 2-3 ನಿಮಿಷ ಕುದಿಸಿ. ಪಾಕ ಹಾಲು ಒಡೆದಂತೆ ಆಗುತ್ತದೆ. (ಹಾಲು, ಮೊಸರು ಬಳಸುವುದರಿಂದ ಅಚ್ಚು ಮೃದುವಾಗಿರುತ್ತದೆ).. ಈಗ ಸಕ್ಕರೆ ಪಾಕದ ಮಿಶ್ರಣವನ್ನು ಮತ್ತೊಂದು ಪಾತ್ರೆಗೆ ಸೋಸಿಕೊಳ್ಳಿ. ಮರದ ಮೌಲ್ಡ್ಗೆ ಎರಡು ಕಡೆ ರಬ್ಬರ್ ಬ್ಯಾಂಡ್ ಹಾಕಿಡಿ. ಏಕೆಂದರೆ ಪಾಕ ಮಾಡಿ ರಬ್ಬರ್ ಬ್ಯಾಂಡ್ ಹಾಕುವಷ್ಟರಲ್ಲಿ ಪಾಕ ಗಟ್ಟಿ ಆಗಿರುತ್ತದೆ. ಸೋಸಿಕೊಂಡ ಪಾಕವನ್ನು ಮತ್ತೆ ಒಲೆಯ ಮೇಲಿಟ್ಟು. ಕಡಿಮೆ ಉರಿಯಲ್ಲಿ ಕುದಿಸಿ. ಒಂದು ವೇಳೆ ಅಚ್ಚು ತೆಗೆಯುವಾಗ ಮುರಿದು ಹೋದರೆ ಮತ್ತೆ ಪಾತ್ರೆಗೆ ಹಾಕಿ ಒಲೆಯ ಮೇಲಿಟ್ಟು ಬಿಸಿ ಮಾಡಿ ಅಚ್ಚು ಮಾಡಬಹುದು.