ತೈಲ ಉಳಿಸಿ ಅಭಿಯಾನಕ್ಕಾಗಿ ಐಒಸಿಎಲ್‌ನಿಂದ ಸೈಕ್ಲೋಥಾನ್

ಬೆಳಗಾವಿ: ತೈಲ ಉಳಿಸಿ ಅಭಿಯಾನ ಅಂಗವಾಗಿ ಇಂಡಿಯನ್ ಆಯಿಲ್‌ ಕಾರ್ಪೊರೇಷನ್ ಲಿಮಿಡೆಡ್‌ (ಐಒಸಿಎಲ್‌) ಬೆಳಗಾವಿ ಘಟಕದಿಂದ ಸೈಕ್ಲೋಥಾನ್ ಆಯೋಜಿಸಲಾಗಿತ್ತು.

ನಗರದ ಆರ್‌ಪಿಡಿ ವೃತ್ತದಲ್ಲಿರುವ ಐಒಸಿಎಲ್‌ ಕಚೇರಿ ಬಳಿ ಬೆಳಗ್ಗೆ 7.45 ಕ್ಕೆ ಅಪರಾಧ ಹಾಗೂ ಸಂಚಾರ ವಿಭಾಗದ ಡಿಸಿಪಿ ಮಹಾನಿಂಗ ನಂದಗಾವಿ ಹಾಗೂ ಐಒಸಿಎಲ್‌ ಜನರಲ್‌ ಮ್ಯಾನೇಜರ್ ಆರ್.ಗಣೇಶನ್ ಚಾಲನೆ ನೀಡಿದರು.

ಐಒಸಿಎಲ್‌ ವಿಭಾಗೀಯ ವ್ಯವಸ್ಥಾಪಕ ವಿನಾಯಕ ಮಾಳಿ, ಮುಖ್ಯ ಪ್ರಾದೇಶಿಕ ವ್ಯವಸ್ಥಾಪಕ ಆನಂದ ಮೂರ್ತಿ, ಹಿರಿಯ ವಿಭಾಗೀಯ ವ್ಯವಸ್ಥಾಪಕ ಭಾಷಾ, ಹಿರಿಯ ವ್ಯವಸ್ಥಾಪಕ ಸಂಜಯ ಪಾಟೀಲ, ದಿಲೀಪ ಪರಬ್, ಅಮರ ಇದ್ದರು.

ಸೈಕ್ಲೋಥಾನ್‌ನಲ್ಲಿ ಬೆಳಗಾವಿಯ ವಿವಿಧ ಶಾಲೆಗಳ 510 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಆರ್‌ಪಿಡಿ ಕ್ರಾಸ್‌ನಲ್ಲಿರುವ ಐಒಸಿಎಲ್‌ ಕಚೇರಿಂದ ಆರಂಭಗೊಂಡು ಗೋವಾವೇಸ್, ಗೋಗಟೆ ಸರ್ಕಲ್, ಮಂಗಸೂಳಿ ಕೂಟ ಸರ್ಕಲ್ ಮೂಲಕ ಹಾದು ಐಒಸಿಎಲ್‌ ಕಚೇರಿಗೆ ತಲುಪಿದ ಸೈಕಲ್‌ ರ್ಯಾಲಿ ಮುಕ್ತಾಯವಾಯಿತು.

ಡಿಡಿಪಿಐ ಪುಂಡಲೀಕ ಹಾಗೂ ಪೊಲಿಸ್ ಇಲಾಖೆಯ ಸಹಕಾರದೊಂದಿಗೆ ಸೈಕಲ್ ರಾಲಿ ಮೂಲಕ ವಿದ್ಯಾರ್ಥಿಗಳು ತೈಲ ಉಳಿಸಿ ಎಂಬ ಸಂದೇಶ ನೀಡಿದರು. ವಿದ್ಯಾರ್ಥಿಗಳಿಗೆ ಟಿ ಶರ್ಟ್, ಕ್ಯಾಪ್, ಪ್ರಮಾಣಪತ್ರ ವಿತರಿಸಲಾಯಿತು.