More

    ಸಾವರ್ಕರ್​ ಪುತ್ಥಳಿ ಅನಾವರಣ

    ವಿಜಯವಾಣಿ ಸುದ್ದಿಜಾಲ ಗದಗ
    ಆರಂಭದಲ್ಲಿ ಕಾಂಗ್ರೆಸ್​ ಪಕ್ಷದ ಚಿನ್ಹೆ ಜೋಡೆತ್ತು ಆಗಿತ್ತು. ಜೋಡೆತ್ತುಗಳ ಲಾಭ ಪಡೆದು, ಈಗ ಗೋಹತ್ಯೆ ನಿಷೇಧ ವಾಪಾಸು ಪಡೆಯುತ್ತೇವೆ ಎಂದು ಯಾವ ಲಾಭಕ್ಕಾಗಿ ಹೇಳಿತ್ತೀರಿ ಎಂದು ಕಾಂಗ್ರೆಸ್​ ಪಕ್ಷವನ್ನು ಶ್ರೀರಾಮ ಸೇನೆ ಮುಖಂಡ ಪ್ರಮೋದ್​ ಮುತಾಲಿಕ್​ ಪ್ರಶ್ನಿಸಿದರು.
    ನಗರದ ಒಕ್ಕಲಗೇರಿ ಓಣಿಯಲ್ಲಿನ ಶ್ರೀರಾಮ ಸೇನಾ ಜಿಲ್ಲಾಧ್ಯ ಮಹೇಶ ರೋಖಡೆ ಮನೆಯ ಆವರಣದಲ್ಲಿ ಸಾವರ್ಕರ್​ ಜಯಂತ್ಯುತ್ಸವ ನಿಮಿತ್ತ ವೀರ ಭಾನುವಾರ ಸಾವರ್ಕರ್​ ಪುತ್ಥಳಿ ಅನಾವರಣಗೊಳಿಸಿ ಮಾತನಾಡಿದ ಅವರು, ಮುಸ್ಲಿಂ ಸಮುದಾಯದ ಮತಬ್ಯಾಂಕ್​ಗಾಗಿ ಗೋಹತ್ಯೆ ನಿಷೇಧ ಹಿಂಪಡೆಯುತ್ತೇವೆ ಎಂದು ಹೇಳತ್ತಾರೆ. ಮೊದಲ ಬಾರಿಗೆ ಮತಾಂತರ ನಿಷೇಧ ಕಾಯ್ದೆ ಜಾರಿಗೆ ಮಾಡಿದ್ದು ಮಧ್ಯಪ್ರದೇಶದ ಕಾಂಗ್ರೆಸ್​ ಸರ್ಕಾರದ ಅವಧಿಯಲ್ಲಿ ಎಂಬುದನ್ನು ಕಾಂಗ್ರೆಸ್​ ಕೂಡ ಮರೆಯಬಾರದು. ಆಜಾನ್​ ಮೈಕ್​ ನಿಂದ ಜನರಿಗೆ ತೊಂದರೆ ಆಗುತ್ತದೆ ಎಂದು ಸುಪ್ರೀಂ ಕೋರ್ಟ್​ ಹೇಳಿದೆ. ಪ್ರಾರ್ಥನೆಗೆ ನಮ್ಮ ವಿರೋಧವಿಲ್ಲ. ಆದರೆ, ಶಬ್ದದ ಪರಿಣಾಮಕ್ಕೆ ವಿರೋಧವಿದೆ ಎಂದು ಮುತಾಲಿಕ್​ ಹೇಳಿದರು.
    ಸಾನ್ನಿಧ್ಯ ವಹಿಸಿದ ಶಿವಾನಂದ ಬೃನ್ಮಠದ ಸದಾಶಿವಾನಂದ ಭಾರತಿ ಶ್ರೀಗಳು ಮಾತನಾಡಿ, ಮಹೇಶ ರೋಖಡೆಯವರು ಮನೆಯ ಆವರಣದಲ್ಲಿ ಸಾವರ್ಕರ್​ ಪುತ್ಥಳಿ ಅನಾವರಣಗೊಳ್ಳಸಿದಂತೆ ಪ್ರತಿ ಮನೆ ಮತ್ತು ಮನದಲ್ಲಿ ಸಾವರ್ಕರ್​ ಸ್ಥಾಪಿಸಿ ದೇಶದ ಶ್ರೇಯೋಭಿವೃದ್ಧಿಗಾಗಿ ಸರ್ವರೂ ತಮ್ಮ ಕೆಲಸವನ್ನು ಮಾಡಬೇಕು. ನವಯುವಕರು ದೇಶದಲ್ಲಿ ಸಾವರ್ಕರ್​ ಹೆಸರನ್ನು ಪಸರಿಸಿ ಪ್ರೇರಣೆ ಪಡೆಯಬೇಕು ಎಂದರು.
    ಕಾರ್ಯಕ್ರಮದಲ್ಲಿ ವಿಶ್ವನಾಥ ರೋಖಡೆ ಮತ್ತು ಮಹೇಶ ರೋಖಡೆ ಕುಟುಂಬಸ್ಥರಿಗೆ ಪ್ರಮೋದ್​ ಮುತಾಲಿಕ್​ ಸನ್ಮಾನಿಸಿದರು.
    ರಾಜು ಖಾನಪ್ಪನವರ, ಸಿದ್ಧು ಜೀವನಗೌಡ್ರ, ಎಂ. ಎಂ. ಹಿರೇಮಠ, ಜಯದೇವ ಮೆಣಸಗಿ, ವಿರುಪಾಪ್ಪ ಹೆಬ್ಬಳ್ಳಿ, ಮಲ್ಲಿಕಾರ್ಜುನ ಚಿಂಚಲಿ, ಜಗದೀಶ ಹುಬ್ಬಳ್ಳಿ, ವಿಠ್ಠಲ ಸಾರೆ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts