ಜಗತ್ತಿಗೇ ಕೌಶಲ ಪರಿಚಿಯಿಸಿದ ವಿಶ್ವಕರ್ಮ

ಸವಣೂರ: ವಿಶ್ವಕ್ಕೆ ಕುಶಲ ಕೌಶಲ ಪರಿಚಿಯಿಸಿದ ವಿರಾಟ್ ವಿಶ್ವಕರ್ಮರನ್ನು ಇಂದು ವಿಶ್ವಾದ್ಯಂತ ಪೂಜಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದು ಗ್ರೇಡ್-2 ತಹಸೀಲ್ದಾರ್ ಗಣೇಶ ಸವಣೂರ ಹೇಳಿದರು.

ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ವಿರಾಟ್ ವಿಶ್ವಕರ್ಮ ಜಯಂತಿ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ನಿರಂತರ ಕಠಿಣ ಪರಿಶ್ರಮದೊಂದಿಗೆ ನಿತ್ಯ ಕಾಯಕದಲ್ಲಿ ತೊಡಗುವ ವಿಶ್ವಕರ್ಮ ಸಮುದಾಯದ ಜನರು ಕಾರ್ಯಕ್ಕೆ ತಕ್ಕ ಸಕಲ ಗೌರವ ಹಾಗೂ ಸರ್ಕಾರದ ಯೋಜನೆಗಳನ್ನು ಪಡೆದು ಅಭಿವೃದ್ಧಿ ಹೊಂದಬೇಕು ಎಂದರು.

ಬಿಇಒ ಎಂ.ಎಫ್. ರ್ಬಾ ಮಾತನಾಡಿ, ತಂತ್ರಜ್ಞಾನ ಬಳಕೆ ಇಲ್ಲದ ಸಮಯದಲ್ಲಿ ವಿಶ್ವಕರ್ಮರು ಕೈಗೊಂಡ ಕರಕುಶಲ ಕಾರ್ಯ ಇಂದಿಗೂ ಪ್ರಸ್ತುತವಾಗಿದೆ. ರಾಷ್ಟ್ರ, ರಾಜ್ಯ ಹಾಗೂ ಜಿಲ್ಲೆ ಸೇರಿ ಗ್ರಾಮ ಮಟ್ಟದಲ್ಲಿಯೂ ಸಹ ಪ್ರಧಾನಿ ನರೇಂದ್ರ ಮೋದಿ ಅವರ ಪ್ರೇರಣೆಯಿಂದ ಇಂದು ವಿಶ್ವಕರ್ಮ ಜಯಂತಿ ಆಚರಿಸುತ್ತಿರುವುದು ಸಂತಸ ತಂದಿದೆ ಎಂದರು.

ವಿಶ್ವಕರ್ಮ ಸಮಾಜದ ತಾಲೂಕು ಘಟಕದ ಅಧ್ಯಕ್ಷ ಪೂರ್ವಾಚಾರಿ ಬಡಿಗೇರ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಪ್ರಕಾಶ ರ್ಬಾ, ಈಶ್ವರ ಅರ್ಕಸಾಲಿ, ಚಿದಾನಂದ ಬಡಿಗೇರ, ಬಸವರಾಜ ಬಡಿಗೇರ, ಮೌನೇಶ ಬಡಿಗೇರ, ನಾಗರಾಜ ಬಡಿಗೇರ, ಶಾಂತಪ್ಪ ಬಡಿಗೇರ, ಬಿಆರ್​ಸಿ ಎಂ.ಎನ್. ಅಡಿವೆಪ್ಪನವರ, ಸಿಡಿಪಿಒ ಉಮಾ ಕೆ.ಎಸ್., ಪುರಸಭೆ ವ್ಯವಸ್ಥಾಪಕ ಮಹೇಶ ದೊಡ್ಡಣ್ಣವರ ಇತರರು ಪಾಲ್ಗೊಂಡಿದ್ದರು. ಮಹೇಂದ್ರ ಬಡಿಗೇರ ಕಾರ್ಯಕ್ರಮ ನಿರ್ವಹಿಸಿದರು.

ಸಭೆ: ವಿಶ್ವಕರ್ಮ ಸಮಾಜದ ತಾಲೂಕು ಘಟಕದ ನೂತನ ಆಡಳಿತ ಮಂಡಳಿ ಆಯ್ಕೆ ಹಾಗೂ ಸಾರ್ವಜನಿಕವಾಗಿ ವಿಶ್ವಕರ್ಮ ಜಯಂತಿ ಆಚರಣೆ ಕುರಿತು ರ್ಚಚಿಸಲು ಸೆ. 20ರಂದು ಸವಣೂರಿನ ಶುಕ್ರವಾರ ಪೇಟೆಯ ಕಾಳಿಕಾದೇವಿ ದೇವಸ್ಥಾನದ ಸಭಾಭವನದಲ್ಲಿ ಬೆಳಗ್ಗೆ 10 ಗಂಟೆಗೆ ಸಭೆ ಆಯೋಜಿಸಲಾಗಿದೆ.

Share This Article

ದೀಪಾವಳಿಗೆ ಮನೆ ಸ್ವಚ್ಛ ಮಾಡ್ತಾ ಇದ್ದೀರಾ? ಮನೆಯಲ್ಲಿ cockroach ಇದ್ರೆ ಹೀಗೆ ಮಾಡಿ…

ಬೆಂಗಳೂರು: ಅನೇಕ ಜನರು ತಮ್ಮ ಮನೆಯಲ್ಲಿ ಜಿರಳೆಗಳ ( cockroach )  ಸಮಸ್ಯೆಯನ್ನು ಎದುರಿಸುತ್ತಾರೆ. ಅವುಗಳನ್ನು…

Crab Sukka : ಭಾನುವಾರದ ಬಾಡೂಟಕ್ಕೆ ಮಾಡಿ ರುಚಿಯಾದ ಏಡಿ ಸುಕ್ಕ..

ಬೆಂಗಳೂರು: ವಾರದ ಕೊನೆಯಲ್ಲಿ ಮಧ್ಯಾಹ್ನದ ಸಮಯಕ್ಕೆ ರುಚಿಯಾದ ಅಡುಗೆ ಏನಾದರು ಮಾಡುವ ಪ್ಲಾನ್ (Plan)​ ಹಾಕಿಕೊಂಡಿದ್ದೀರಾ?ಆದಿತ್ಯವಾರದಂದು…

ಹಾವು ಕಚ್ಚಿದಾಗ ಮಾಡುವ ಈ ಒಂದು ತಪ್ಪಿನಿಂದ ಪ್ರಾಣ ಹೋಗುತ್ತೆ ಎಚ್ಚರ! ಈ ರೀತಿ ಮಾಡೋದನ್ನು ತಪ್ಪಿಸಿ | Snakes

ಕೊಲ್ಲಂ: ಹಾವುಗಳು ( Snakes ) ಕಚ್ಚಿದ ಸಂದರ್ಭದಲ್ಲಿ ಯಾವ ಹಾವು ಕಚ್ಚಿತ್ತು ಎಂಬುದನ್ನು ತಿಳಿದುಕೊಳ್ಳಲು…