More

    ಸೌದಿಯಲ್ಲಿರುವ ಕೇರಳದ 30 ನರ್ಸ್​ಗಳಲ್ಲಿ ಮಾರಣಾಂತಿಕ ಕರೋನಾ ವೈರಸ್​ ಪತ್ತೆ

    ತಿರುವನಂತಪುರ: ಚೀನಾದಲ್ಲಿ ಹಲವು ಮಂದಿಯನ್ನು ಬಲಿ ಪಡೆದಿರುವ ಮಾರಣಾಂತಿಕ ಕರೋನಾ ವೈರಸ್​ ಸೌದಿ ಅರೇಬಿಯಾದಲ್ಲಿರುವ ಕೇರಳದ 30 ಮಂದಿ ನರ್ಸ್​ಗಳಲ್ಲಿ ಪತ್ತೆಯಾಗಿದೆ ಎಂದು ವರದಿಯಾಗಿದೆ.

    ಸೌದಿಯ ಅಭಾದ ಅಲ್ ಹಯಾತ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ನರ್ಸ್​ಗಳು ಈ ವೈರಸ್​ಗೆ ತುತ್ತಾಗಿದ್ದಾರೆ ಎಂದು ತಿಳಿದು ಬಂದಿದೆ.

    ಕೇರಳದ ದಾದಿಯರಲ್ಲಿ ವೈರಸ್​ ಪತ್ತೆಯಾಗಿರುವುದು ತಿಳಿಯುತ್ತಿದ್ದಂತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್​ ಅವರು ವಿದೇಶಾಂಗ ವ್ಯವಹಾರ ಸಚಿವ ಜಯಶಂಕರ್​ ಅವರಿಗೆ ಪತ್ರ ಬರೆದು ಕೂಡಲೇ ದಾದಿಯರ ಸಹಾಯಕ್ಕೆ ಮುಂದಾಗಬೇಕು. ಅವರಿಗೆ ಉತ್ತಮ ಚಿಕಿತ್ಸೆ ದೊರಕಿಸಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.

    ವೈರಸ್​ ಪತ್ತೆಯಾಗಿರುವ ನರ್ಸ್​ಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ವೈದ್ಯರು ಪರೀಕ್ಷೆ ನಡೆಸಿಲ್ಲ ಹಾಗೂ ಸರಿಯಾದ ಚಿಕಿತ್ಸೆ ನೀಡುತ್ತಿಲ್ಲ ಎಂದು ಅವರು ಹೇಳಿದ್ದಾರೆ. ಅಲ್ಲದೆ ಈ ಬಗ್ಗೆ ನರ್ಸ್​ಗಳು ಭಾರತೀಯ ರಾಯಭಾರ ಕಚೇರಿಗೆ ದೂರು ಕೂಡ ನೀಡಿದ್ದಾರೆ.

    ಕೇರಳದ ನರ್ಸ್​ಗಳಿಗೆ ವೈರಸ್​ ಹರಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಖಾತೆ ರಾಜ್ಯ ಸಚಿವ ಮುರಾಲಿದಹ್ರಾನ್​, ವೈರಸ್​ ಪತ್ತೆಯಾಗಿರುವ ದಾದಿಯರಿಗೆ ಎಲ್ಲ ರೀತಿಯ ಪರೀಕ್ಷೆ ಕೈಗೊಂಡು ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

    ಈ ಆಸ್ಪತ್ರೆಯಲ್ಲಿ ರಾಷ್ಟ್ರದ 100 ಮಂದಿ ನರ್ಸ್​ಗಳು ಕೆಲಸ ಮಾಡುತ್ತಿದ್ದಾರೆ. ಇವರಲ್ಲಿ 30 ಮಂದಿಗೆ ವೈರಸ್​ ಹರಡಿದೆ. ಕೊಟ್ಟಾಯಂನ ಎಟ್ಟುಮನೂರ್ ಮೂಲದ 38 ವರ್ಷದ ಮಹಿಳೆಯಲ್ಲಿ ಮೊದಲು ವೈರಸ್​ ಪತ್ತೆಯಾಯಿತು. ನಂತರ ಇವರ ಸಂಪರ್ಕಕ್ಕೆ ಬಂದ 29 ಮಂದಿಗೆ ವೈರಸ್​ ಹರಡಿದೆ. ಹೀಗಾಗಿ ಇವರಿಗೆ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts