ಸೊರಬ: ಪಟ್ಟಣದ ದೈವಜ್ಞ ಬ್ರಾಹ್ಮಣ ಸಮಾಜ ಹಾಗೂ ಚಿಕ್ಕಪೇಟೆ ಶ್ರೀ ಸತ್ಯನಾರಾಯಣಸ್ವಾಮಿ ಸೇವಾ ಸಮಿತಿಯಿಂದ ಮಂಗಳವಾರ ಶ್ರೀ ಸತ್ಯನಾರಾಯಣ ಸ್ವಾಮಿ ದೇವಸ್ಥಾನದ 44ನೇ ವಾರ್ಷಿಕೋತ್ಸವ ನೆರವೇರಿತು.
ಬೆಳಗ್ಗೆ ಮಹಾಗಣಪತಿ ಪೂಜೆ, ಪುಣ್ಯಾಹ, ಪಂಚಗವ್ಯ ಹವನ, ಕಲಾವೃದ್ಧಿ ಹವನ, ಪಂಚಾಮೃತ ಅಭಿಷೇಕ, ಅಷ್ಟೋತ್ತರ ತುಳಸಿ ಅರ್ಚನೆ ಹಾಗೂ ಸತ್ಯನಾರಾಯಣ ಸ್ವಾಮಿ ವ್ರತ ಪೂಜೆ ನೆರವೇರಿದವು. ನಂತರ ಸ್ವಾಮಿಯ ಪಲ್ಲಕ್ಕಿ ಉತ್ಸವ ನಡೆಯಿತು. ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗದ ಬಳಿಕ ಅನ್ನಸಂತರ್ಪಣೆ ನಡೆಯಿತು.
ತಾಲೂಕು ದೈವಜ್ಞ ಬ್ರಾಹ್ಮಣ ಸಮಾಜದ ಅಧ್ಯಕ್ಷ ಪ್ರಸನ್ನಕುಮಾರ್, ಟಿ.ಆರ್.ಸುರೇಶ್, ಶ್ರೀಕಾಂತ್ ದತ್ತಾತ್ರೇಯ ಶೇಟ್, ನಾಗರಾಜ್, ಸುದಮ್ಮ ಗೋಪಾಲ್ ವರ್ಣೇಕರ್, ಪವನ್‌ಕುಮಾರ್, ಮಧುರಾಯ್ ಶೇಟ್, ಭಾಸ್ಕರ್ ಶೇಟ್, ಗಣೇಶ್ ಶೇಟ್, ಪ್ರಶಾಂತ್‌ಕುಮಾರ್, ಮಾರ್ತಾಂಡ ಶೇಟ್ ಇತರರಿದ್ದರು.
