ಸಂಕ್ರಾಂತಿ ನಂತರ ಕ್ರಾಂತಿ ಆದರೆ ನೋಡೋಣ: ಸತೀಶ್‌ ಜಾರಕಿಹೊಳಿ

ಬೆಳಗಾವಿ: ಸಂಕ್ರಾಂತಿ ನಂತರ ಕ್ರಾಂತಿ ಆದರೆ ಆಗಲಿ. ಆದಾಗ ನೋಡೋಣ. ಆಪರೇಷನ್ ಕಮಲದ ವಿಚಾರವಾಗಿ ನನಗೆ ಗೊತ್ತಿಲ್ಲ. ನಮ್ಮದು ಅಭಿವೃದ್ಧಿ ಹಾಗೂ ಇಲಾಖೆ ಕೆಲಸ ಅಷ್ಟೇ ಎಂದು ಸಚಿವ ಸತೀಶ್‌ ಜಾರಕಿಹೊಳಿ ತಿಳಿಸಿದ್ದಾರೆ.

ಕ್ರಾಂತಿ ಆದರೂ ಕೂಡ ರಾಜ್ಯವು ಇಲ್ಲೇ ಇರುತ್ತದೆ, ದೇಶವೂ ಇಲ್ಲೇ ಇರುತ್ತದೆ. ಏನೂ ಆಗುವುದಿಲ್ಲ. ಕ್ರಾಂತಿ ಆದರೂ ನಾವು ಇಲ್ಲೇ ಇರುತ್ತೇವೆ. ನಡೆಯುವುದೆಲ್ಲ ನಡೆಯುತ್ತಲೇ ಇರುತ್ತದೆ. ಆಪರೇಷನ್ ಕಮಲದ ಬಗ್ಗೆ ನನಗೆ ಗೊತ್ತಿಲ್ಲ. ಬಿಜೆಪಿ, ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುತ್ತಿದೆ ಎಂಬ ವಿಚಾರವಾಗಿ ರಾಜಕೀಯದಲ್ಲಿ ಅದೆಲ್ಲ ಸ್ವಾಭಾವಿಕ. ತಂತ್ರಗಾರಿಕೆ ರಾಜಕೀಯದಲ್ಲಿ ಇದ್ದೆ ಇರುತ್ತದೆ ಎಂದರು.

ಬಿಜೆಪಿಯವರು ಏನೇ ಮಾಡಿದರು ನಮ್ಮ ಶಾಸಕರು ಯಾರು ಕೂಡ ಹೋಗುವುದಿಲ್ಲ. ಇದು ಊಹಾಪೋಹ ಅಷ್ಟೇ. ನಮ್ಮ ಸರ್ಕಾರ ಸುಭದ್ರವಾಗಿದೆ. ರಾಜಕೀಯವಾಗಿ ಪ್ರಯತ್ನ ಇದ್ದೇ ಇರುತ್ತದೆ ಆದರೆ ಯಶಸ್ವಿಯಾಗುವುದಿಲ್ಲ. ಸಿಎಂ ಅತೃಪ್ತ ಶಾಸಕರ ಬಾಯಿಗೆ ಬೀಗ ಹಾಕಬೇಕೆಂಬ ವಿಚಾರವಾಗಿ ಏನೂ ಚರ್ಚೆ ಆಗಿಲ್ಲ. ಪುಟ್ಟರಂಗಶೆಟ್ಟಿ ವಿಚಾರವಾಗಲಿ, ಬೇರೆ ವಿಚಾರವಾಗಲಿ ಚರ್ಚೆಗೆ ಬಂದಿಲ್ಲ ಎಂದು ಹೇಳಿದರು.

ರಾಮಮಂದಿರ ಬರೀ ಬಿಜೆಪಿ ಅವರದಷ್ಟೇ ಅಲ್ಲ. ಬಿಜೆಪಿಯವರು ಅದನ್ನು ಗುತ್ತಿಗೆ ಹಿಡಿದಿಲ್ಲ. ಎಲ್ಲರ ಹಕ್ಕಿದೆ. ರಾಮಮಂದಿರ ಆಗಬಾರದು ಎಂದು ಯಾರು ವಿರೋಧ ಮಾಡಿಲ್ಲ ಎಂದು ತಿಳಿಸಿದರು.

ಹಕ್ಕುಪತ್ರ ವಿತರಣೆ

ಕಾನೂನು ಬದ್ಧವಾಗಿ ಹೆಚ್ಚು ಹಕ್ಕುಪತ್ರಗಳನ್ನ ನೀಡಿದ್ದೇವೆ. ನಮ್ಮ ಅವಧಿಯಲ್ಲಿ ಪ್ರವಾಸೋದ್ಯಮ, ಅರಣ್ಯ ರಕ್ಷಣೆ ಮಾಡುತ್ತೇವೆ. ಅದಕ್ಕೆ ಕಾಲಾವಕಾಶ ಬೇಕು. ರಾಜ್ಯಾದ್ಯಂತ ಹಕ್ಕುಪತ್ರ ನೀಡಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ತಿಳಿಸಿದರು. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *