ಡಿಕೆಶಿ ಔತಣಕೂಟಕ್ಕೆ ನಾನು ಹೋಗುತ್ತಿದ್ದೇನೆ: ಸತೀಶ್​ ಜಾರಕಿಹೊಳಿ

ಬೆಳಗಾವಿ: ಸಚಿವ ಡಿ.ಕೆ.ಶಿವಕುಮಾರ್ ಆಯೋಜಿಸಿರುವ ಔತಣಕೂಟದಲ್ಲಿ ನಾನು ಭಾಗಿಯಾಗುತ್ತಿದ್ದೇನೆ ಎಂದು ಶಾಸಕ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

ರಾಜಕೀಯದಲ್ಲಿ ಶತ್ರು, ಮಿತ್ರ ಎಂಬುದು ಇರುವುದಿಲ್ಲ. ಭಿನ್ನಾಭಿಪ್ರಾಯ, ಸಮಸ್ಯೆ, ಹೋರಾಟವೇ ಬೇರೆ, ಔತಣಕೂಟವೇ ಬೇರೆ. ಸಚಿವರು ಕರೆದಾಗ ನಾವು ಹೋಗಲೇಬೇಕು ಎಂದು ಇಂದು ರಾತ್ರಿ ಡಿಕೆಶಿ ಆಯೋಜಿಸಿರುವ ಔತಣಕೂಟ್ಕಕೆ ಹೋಗುವುದಾಗಿ ಜಾರಕಿಹೊಳಿ ತಿಳಿಸಿದರು.

ಔತಣಕೂಟದಲ್ಲಿ ವಿಶೇಷ ಇಲ್ಲ
ಡಿಕೆಶಿ ಔತಣಕೂಟ ಆಯೋಜಿಸಿರುವುದರಲ್ಲಿ ವಿಶೇಷ ಏನಿಲ್ಲ. ಪ್ರತಿವರ್ಷ ಸಚಿವರು ಔತಣಕೂಟ ಏರ್ಪಡಿಸುತ್ತಿದ್ದರು. ಸಂಪುಟ ವಿಸ್ತರಣೆಗೂ, ಔತಣಕೂಟಕ್ಕೂ ಸಂಬಂಧವಿಲ್ಲ. ನಾನು ಕೂಡ ಔತಣಕೂಟಕ್ಕೆ ಹೋಗುತ್ತಿದ್ದೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

ಹೊಸಬರಿಗೆ ಸಚಿವ ಸ್ಥಾನ ನೀಡುವುದು ಇನ್ನೂ ತೀರ್ಮಾನ ಆಗಿಲ್ಲ. ಡಿ.20ರಂದು ದೆಹಲಿಗೆ ಹೋಗುತ್ತಿದ್ದೇನೆ. ಅಲ್ಲಿ ಎಲ್ಲವೂ ತೀರ್ಮಾನವಾಗುತ್ತದೆ ಎಂದರು. (ದಿಗ್ವಿಜಯ ನ್ಯೂಸ್)

ಡಿಕೆಶಿ ಸಚಿವರಾಗಿ ಬೆಳಗಾವಿಗೆ ಬಂದರೆ ಒಕೆ, ಆದರೆ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡಬಾರದು: ಸತೀಶ್​ ಜಾರಕಿಹೊಳಿ

ಮುಂದೆ ಬೇಕಾಗಬಹುದು ಎಂದು ರೆಸಾರ್ಟ್​ಗೆ ಹೋಗಿದ್ದೆ: ಶಾಸಕ ಸತೀಶ್​ ಜಾರಕಿಹೊಳಿ