ಸಾಸ್ವೆಹಳ್ಳಿ: ಸರ್ಕಾರ ಮಕ್ಕಳ ಪ್ರತಿಭೆ ಅನಾವರಣಕ್ಕೆ ಪ್ರತಿಭಾ ಕಾರಂಜಿ ಕಾರ್ಯಕ್ರಮ ಜಾರಿಗೊಳಿಸಿದ್ದು, ಇದನ್ನು ಸದ್ಬಳಕೆ ಮಾಡಿಕೊಳ್ಳಲು ಶಾಲಾ ಶಿಕ್ಷಕರು, ಪಾಲಕರು ಮಕ್ಕಳಿಗೆ ಪ್ರೋತ್ಸಾಹ ನೀಡಬೇಕು ಎಂದು ಸಾಸ್ವೆಹಳ್ಳಿ ಹೋಬಳಿಯ ಇಸಿಒ ಕೆ. ರಂಗನಾಥ್ ಹೇಳಿದರು.
ಹೋಬಳಿಯ ಹನುಮನಹಳ್ಳಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಾಸ್ವೆಹಳ್ಳಿ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲಾ ಮಕ್ಕಳ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಹಿಂದೆ ಗ್ರಾಮೀಣ ಭಾಗಗಳಲ್ಲಿ ಜನಪದ ಕಲೆಗಳು ಅಧಿಕವಾಗಿದ್ದು, ಜಾತ್ರಾ ಹಬ್ಬ- ಹರಿದಿನಗಳಲ್ಲಿ ಕೋಲಾಟ, ಭಜನೆ, ನಾಟಕ, ಬೆಳದಿಂಗಳ ಹಾಡುಗಳು ಕೇಳಿಬರುತ್ತಿದ್ದವು. ಟಿವಿ ಮೊಬೈಲ್ ಅಬ್ಬರದಲ್ಲಿ ಅವುಗಳು ಕಣ್ಮರೆಯಾಗಿರುವುದು ದುರಂತವೇ ಸರಿ ಎಂದರು.
ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಎಚ್.ಬಿ. ಕಾಳಾಚಾರ್ ಮಾತನಾಡಿ, ಪ್ರತಿ ಮಗುವಿನಲ್ಲಿ ಕಲೆ ಎಂಬುದು ಅಡಗಿರುತ್ತದೆ. ಪಾಲಕರು ಗುರುಗಳು ಮಗುವಿಗೆ ಆ ನಿಟ್ಟಿನಲ್ಲಿ ಪ್ರೋತ್ಸಾಹಿಸಿದಾಗ ಅವರ ಪ್ರತಿಭೆಗಳು ಅನಾವರಣಗೊಳ್ಳುತ್ತವೆ ಎಂದುರು.
ಸಾಸ್ವೆಹಳ್ಳಿ ಕ್ಲಸ್ಟರ್‌ನ ವಿವಿಧ ಗ್ರಾಮಗಳ 16 ಶಾಲೆಗಳ ಮಕ್ಕಳು ವಿವಿಧ ವೇಷಭೂಷಣ ಧರಿಸಿ ಪಾಲ್ಗೊಂಡಿದ್ದರು. ಸ್ಪರ್ಧೆಗಳ ವಿಜೇತ ಮಕ್ಕಳಿಗೆ ಪ್ರಶಸ್ತಿ ಪತ್ರ ನೀಡಿಲಾಯಿತು.
ಕುಳಗಟ್ಟೆ ಗ್ರಾಪಂ ಅಧ್ಯಕ್ಷ ಮಲ್ಲೇಶಪ್ಪ, ಉಪಾಧ್ಯಕ್ಷೆ ಲಲಿತಮ್ಮ, ಹೊನ್ನಾಳಿ ಬಿಆರ್‌ಸಿ ಜಿ.ಕೆ. ಅರುಣ್‌ಕುಮಾರ್, ಎಸ್‌ಡಿಎಂಸಿ ಅಧ್ಯಕ್ಷ ನಿಂಗರಾಜ್, ಉಪಾಧ್ಯಕ್ಷೆ ಶ್ರುತಿ ದೇವರಾಜ್, ಎಸ್‌ಡಿಎಂಸಿ ತಾಲೂಕು ಸಂಘದ ಅಧ್ಯಕ್ಷ ಹುಣಸಘಟ್ಟ ಶಿವಲಿಂಗಪ್ಪ, ಮುಖ್ಯಶಿಕ್ಷಕ ಸಿದ್ದಪ್ಪ ಇತರರಿದ್ದರು.