ಸರ್ವಜ್ಞ ಸರ್ವ ಜಾತಿಯ ಸಂಕೇತ

ದಾವಣಗೆರೆ: ಸರ್ವಜ್ಞ ಕೇವಲ ಒಂದು ಸಮಾಜಕ್ಕೆ ಸೀಮಿತರಲ್ಲ, ಅವರು ಸರ್ವ ಸಮುದಾಯಕ್ಕೂ ಸೇರಿದವರು ಎಂದು ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಡಾ.ಎಚ್.ವಿಶ್ವನಾಥ್ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಸಹಯೋಗದಲ್ಲಿ ಬುಧವಾರ ನಗರದ ದೊಡ್ಡಪೇಟೆಯ ವಿರಕ್ತಮಠದಲ್ಲಿ ಆಯೋಜಿಸಿದ್ದ ಸರ್ವಜ್ಞ ಜಯಂತ್ಯುತ್ಸವದಲ್ಲಿ ಉಪನ್ಯಾಸ ನೀಡಿದರು.

ಸರ್ವಜ್ಞ ರಚಿಸಿದ ವಚನಗಳಲ್ಲಿ ಜೀವನ, ದಾಂಪತ್ಯ, ಆಧ್ಯಾತ್ಮಿಕ, ಪಾರಮಾರ್ಥಿಕ, ವೈಚಾರಿಕತೆ, ವಿಡಂಬನಾತ್ಮಕ ಚಿಂತನೆಗಳು ಇವೆ. ಇವುಗಳು ಸಾಮಾನ್ಯರು ಅರ್ಥ ಮಾಡಿಕೊಳ್ಳುವಷ್ಟು ಸರಳವಾಗಿವೆ. ಹೀಗಾಗಿ ಸರ್ವಜ್ಞ ಜನರಿಗೆ ಹತ್ತಿರನಾದ ಎಂದರು.