ತಾಳಿಕೋಟೆ: ತಾಲೂಕಿನ ಬೊಮ್ಮನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಬೆಂಬಲಿತ ಅಭ್ಯರ್ಥಿ ಸರೋಜಾಬಾಯಿ ಮಲಕಣ್ಣ ಮಸರಕಲ್ಲ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ, ತಾಪಂ ಇಒ ನಿಂಗಪ್ಪ ಮಸಳಿ ಘೋಷಿಸಿದರು.
ಚುನಾವಣೆ ಪ್ರಕ್ರಿಯೆಯಲ್ಲಿ ಎಲ್ಲ 13 ಸದಸ್ಯರು ಭಾಗವಹಿಸಿದ್ದರು. ಚುನಾವಣೆ ಸಹಾಯಕರಾಗಿ ಮಹಾಂತಗೌಡ ದೊರಗೋಳ, ಪಿಡಿಒ ಪ್ರಭು ಚನ್ನೂರ, ಕಾರ್ಯದರ್ಶಿ ಎಚ್.ಜಿ.ಚೌಧರಿ ಕಾರ್ಯನಿರ್ವಹಿಸಿದರು.
ಯುವ ಮುಖಂಡ ಜಗನ್ನಾಥ ಮಸರಕಲ್ಲ ಮಾತನಾಡಿದರು. ಜೆಡಿಎಸ್ ತಾಲೂಕಾಧ್ಯಕ್ಷ ಮಡುಸಾಹುಕಾರ ಬಿರಾದಾರ, ಶಕುಂತಲಾ ಜಗನ್ನಾಥ ಮಸರಕಲ್ಲ, ಸಿಕಂದರ ವಠಾರ, ವೆಂಕಟೇಶ ಮಾಡಗಿ, ನಿಂಗಣ್ಣ ಕಲಬುರ್ಗಿ, ಸಾಹೇಬಗೌಡ ಪಾಟೀಲ, ಶಂಕರಗೌಡ ಪಾಟೀಲ, ಉಮೇಶ ಬೂದಿಹಾಳ, ಅಪ್ಪುಕುಳಗೇರಿ ಮೈಲೇಶ್ವರ, ಸಿದ್ದಣ್ಣ ಕಟ್ಟಿಮನಿ, ಮಲ್ಲನಗೌಡ ಪಾಟೀಲ, ಭರಮವ್ವ ಕಾಳಗಿ, ಯಮನಪ್ಪ ಮಸರಕಲ್ಲ, ಸಾಬವ್ವ ಹರಿಜನ, ಶಿವಶಂಕರ ಕಟ್ಟಿಮನಿ, ಕಸ್ತೂರಿಬಾಯಿ ಹೆಬ್ಬಾಳ, ಜಂಗಮಯ್ಯ ಹಿರೇಮಠ, ಶಂಕ್ರಮ್ಮ ರಂಜಣಗಿ, ಚನ್ನಮ್ಮ ನಾಟೀಕಾರ, ಭಾಗಪ್ಪ ಮೇಟಿ, ಕರೆಮ್ಮ ಬಿರಾದಾರ, ಭಾಗೀರತಿ ಬಿರಾದಾರ ಉಪಸ್ಥಿತರಿದ್ದರು.