More

    ಸರ್ಕಾರಿ ಕಾರ್ನರ್​ | ವೇತನ ಬಡ್ತಿ ತಡೆ ನಿಯಮಾವಳಿ

    ದಿನದ ಪ್ರಶ್ನೆ

    ನಾನು 7 ವರ್ಷಗಳಿಂದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿದ್ದೇನೆ. 2019ರ ಜುಲೈನಲ್ಲಿ ಲೋಕಾಯುಕ್ತ ಟ್ರಾ್ಯಪ್​ಗೆ ಒಳಪಟ್ಟು ಆರು ತಿಂಗಳ ಕಾಲ ಅಮಾನತ್ತಿನಲ್ಲಿಡಲಾಗಿತ್ತು. 2020ರ ಜನವರಿಯಲ್ಲಿ ಇಲಾಖಾ ವಿಚಾರಣೆ ಕಾಯ್ದಿರಿಸಿ, ಪುನರ್ ನಿಯುಕ್ತಿಗೊಳಿಸಲಾಯಿತು. ಆದರೆ, 2020ರಿಂದ ಈವರೆಗೂ ವಾರ್ಷಿಕ ವೇತನ ಬಡ್ತಿ ತಡೆಹಿಡಿಯಲಾಗಿದೆ. ಇದು ನಿಯಾಮಾನುಸಾರ ಸರಿಯೇ?

    | ಬಿ. ಲೋಕೇಶ್ ಕುಮಾರ್ ಮೈಸೂರು

    ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 51 ರಂತೆ ಸಕ್ಷಮ ಅಧಿಕಾರಿಯು ವಾರ್ಷಿಕ ವೇತನಬಡ್ತಿಯನ್ನು (ಅnಚ್ಝ ಐcಛಿಞಛ್ಞಿಠಿಠ) ದಂಡನೆಯಾಗಿ ತಡೆಹಿಡಿಯುವ ಆದೇಶವಿಲ್ಲದ ಹೊರತು ಅದನ್ನು ತಡೆಹಿಡಿಯುವಂತಿಲ್ಲ. ನಿಯಮ 53ರಂತೆೆ ಅಮಾನತ್ತಿನ ಅವಧಿಯಷ್ಟು ಮಾತ್ರ ವಾರ್ಷಿಕ ವೇತನ ಬಡ್ತಿ ಮುಂದೂಡಿ ಪ್ರತಿ 12ತಿಂಗಳ ಸೇವಾಧಿಗೆ ಮಂಜೂರು ಮಾಡಬೇಕಾಗುತ್ತದೆ. ವಿಚಾರಣೆ ನಂತರ ಅಮಾನತ್ತಿನ ಅವಧಿಯನ್ನು ಶಿಸ್ತು ಪ್ರಾಧಿಕಾರಿಯವರು ಕರ್ತವ್ಯವೆಂದು ಪರಿಗಣಿಸಿದರೆ, ಪುನರ್ ವೇತನ ನಿಗದಿ ಪಡಿಸಬೇಕಾಗುತ್ತದೆ. ಹೆಚ್ಚಿನ ವಿವರಗಳಿಗೆ ಎಂ. ಉಮೇಶ್ ಅವರ ‘ಸಿ.ಸಿ.ಎ. ನಿಯಾಮಾವಳಿ ಸಮಗ್ರ ಕೈಪಿಡಿ’ ಕೃತಿ ನೋಡಬಹುದು.

    ಸರ್ಕಾರಿ ಕಾರ್ನರ್​ | ವೇತನ ಬಡ್ತಿ ತಡೆ ನಿಯಮಾವಳಿ

    ಜಗತ್ತಿನ ಜನಸಂಖ್ಯೆ ಕೆಲವೇ ಗಂಟೆಗಳಲ್ಲಿ 800 ಕೋಟಿ; ಭಾರತ ಎಷ್ಟನೇ ಸ್ಥಾನದಲ್ಲಿ?

    ಪುರುಷರೇ ‘ಸೋ ಸ್ವೀಟ್​’, ಮಹಿಳೆಯರಲ್ಲ..!; ಇಲ್ಲಿದೆ ಅಂಕಿ-ಅಂಶ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts