More

    ಸರ್ಕಾರಿ ಕಾರ್ನರ್​: ಅನುಕಂಪದ ನೌಕರಿ ಪತ್ನಿಯ ಹಕ್ಕು

    ದಿನದ ಪ್ರಶ್ನೆ

    ಸರ್ಕಾರಿ ನೌಕರಿಯಲ್ಲಿದ್ದ ನನ್ನ ಪತಿ ತೀರಿಹೋಗಿ 3 ತಿಂಗಳಾಗಿವೆ. ಆದರೆ, ನನಗೆ ಅನುಕಂಪದ ನೌಕರಿ ಮತ್ತು ಇತರ ಸೌಲಭ್ಯಗಳನ್ನು ಕೊಡಬಾರದೆಂದು ನನ್ನ ಪತಿಯ ತಂದೆ ಕೋರ್ಟಿನಿಂದ ನೋಟಿಸ್ ಕಳಿಸಿದ್ದಾರೆ. ನನ್ನ ಮೈದುನನ ಕುಮ್ಮಕ್ಕಿನಿಂದ ನನ್ನ ಮಾವನವರು ಈ ರೀತಿ ಮಾಡುತ್ತಿದ್ದಾರೆ. ಇದರಿಂದ ನನ್ನ ಅನುಕಂಪದ ನೌಕರಿಗೆ ತೊಂದರೆ ಆಗುತ್ತದೆಯೇ? ನನಗೆ 6 ವರ್ಷದ ಹೆಣ್ಣುಮಗಳಿದ್ದು ಅವಳನ್ನು ಸಾಕಲು ನೌಕರಿಯ ಅವಶ್ಯಕತೆ ಇದೆ. ದಯವಿಟ್ಟು ನನ್ನ ಸಮಸ್ಯೆಗೆ ಪರಿಹಾರ ತಿಳಿಸಿ..

    | ಸೃಷ್ಟಿ ಹರಿಹರ

    ನಿಮ್ಮ ಪತಿಯ ತಂದೆ, ಮೈದುನ, ನಾದಿನಿ ಮೊದಲಾದವರು ನಿಯಮಾನುಸಾರ ನಿಮ್ಮ ಕುಟುಂಬದ ಸದಸ್ಯರಲ್ಲ. 1997ರ ಕರ್ನಾಟಕ ಸರ್ಕಾರಿ (ಅನುಕಂಪದ ನೇಮಕಾತಿ) ನಿಯಮಾವಳಿಯ ನಿಯಮ 3ರ ಪ್ರಕಾರ ಅನುಕಂಪದ ಹುದ್ದೆಗೆ ನೀವೊಬ್ಬರೇ ಅರ್ಹರು. ಮಾವ, ಮೈದುನ ಹಸ್ತಕ್ಷೇಪ ಮಾಡಲು ಯಾವ ಹಕ್ಕೂ ಇರುವುದಿಲ್ಲ. ಕೋರ್ಟಿನ ನೋಟಿಸ್​ಗೆ ಭಯಪಡದೆ ಉತ್ತರ ಕೊಡಿ. ನೇರವಾಗಿ ಸಕ್ಷಮ ನೇಮಕಾತಿ ಪ್ರಾಧಿಕಾರಕ್ಕೆ ಅನುಕಂಪದ ಹುದ್ದೆಗಾಗಿ ಸೂಕ್ತ ರೀತಿಯಲ್ಲಿ ಅರ್ಜಿ ಸಲ್ಲಿಸಿ ನೌಕರಿ ಪಡೆದುಕೊಳ್ಳಿ.

    ಸರ್ಕಾರಿ ಕಾರ್ನರ್​: ಅನುಕಂಪದ ನೌಕರಿ ಪತ್ನಿಯ ಹಕ್ಕು

    ಡಾ.ಬ್ರೋ ಯಾವಾಗ ವಿದೇಶಕ್ಕೆ ಹೋಗಲ್ಲ?; ಒಂದು ದೇಶಕ್ಕೆ ಹೊರಟಾಗ ಅವರ ಅಧ್ಯಯನ ಹೇಗಿರುತ್ತೆ?; ಇಲ್ಲಿದೆ ಮಾಹಿತಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts