More

    VIDEO | ಧೋನಿ ವಿಡಿಯೋ ಹಂಚಿಕೊಂಡ ಸಾರಾ; ಬರೆದ ಸಾಲುಗಳಿವು

    ಮುಂಬೈ: ಭಾನುವಾರ (ನ.19) ಅಹಮದಾಬಾದ್​ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ನಡೆದ ಫೈನಲ್​ ಹಣಾಹಣಿಯಲ್ಲಿ ಟೀಮ್ ಇಂಡಿಯಾವನ್ನು ಮಣಿಸಿದ ಕಾಂಗರೂ ಪಡೆ ಭರ್ಜರಿ ಜಯ ಗಳಿಸುವ ಮೂಲಕ ಐಸಿಸಿ ವಿಶ್ವಕಪ್​ 2023ರ ಪಟ್ಟವನ್ನು ಅಲಂಕರಿಸಿತು.

    ಇದನ್ನೂ ಓದಿ: ವೀಣಾ ಕಾಶಪ್ಪನವರ್ ಆರೋಗ್ಯದ ಬಗ್ಗೆ ಪತಿ ವಿಜಯಾನಂದ ಹೇಳಿದ್ಹೀಗೆ

    ಸತತ ಗೆಲುವು ಹಾಗೂ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಅಂತಿಮ ಘಟಕ್ಕೆ ಬಂದು ತಲುಪಿದ್ದ ಭಾರತ ಫೈನಲ್​ನಲ್ಲಿ ಉತ್ತಮ ಪೈಪೋಟಿ ಕೊಟ್ಟು ಸೋಲನ್ನು ಕಂಡಿದ್ದು, ಭಾರತೀಯರಿಗೆ ಹೆಮ್ಮೆ ತಂದಿದೆ. ಇದೀಗ ಮ್ಯಾಚ್​ ಮುಗಿದ ಬಳಿಕ ಸಾರಾ ತೆಂಡೂಲ್ಕರ್​ ಹಾಕಿದ ಪೋಸ್ಟ್​ವೊಂದು ನೆಟ್ಟಿಗರಿಗೆ 2011ರ ವಿಶ್ವಕಪ್​ ಗೆಲುವನ್ನು ನೆನಪಿಸಿದೆ.

    ಏಕದಿನ ವಿಶ್ವಕಪ್ ಆರಂಭಗೊಂಡ ಮೊದಲ ದಿನದಿಂದಲೂ ಪ್ರತಿ ಪಂದ್ಯ ವೀಕ್ಷಣೆಗೆ ಹಾಜರಾಗುತ್ತಿದ್ದ ಮಾಸ್ಟರ್​ ಬ್ಲಾಸ್ಟರ್​ ಸಚಿನ್​ ತೆಂಡೂಲ್ಕರ್​ ಪುತ್ರಿ ಸಾರಾ ತೆಂಡೂಲ್ಕರ್​, ಟೀಮ್​ ಇಂಡಿಯಾಗೆ ಅಭೂತಪೂರ್ವ ಬೆಂಬಲ ವ್ಯಕ್ತಪಡಿಸುತ್ತಿದ್ದರು. ಸ್ಟಾಂಡ್ಸ್​ನಲ್ಲಿ ಕುಳಿತು ಭಾರತಕ್ಕೆ ಪ್ರೋತ್ಸಾಹಿಸುತ್ತಿದ್ದ ಸಾರಾಗೆ ಕ್ರಿಕೆಟ್​ ಅಭಿಮಾನಿಗಳು ಗಿಲ್​ ಹೆಸರೇಳುವ ಮೂಲಕ ತಮಾಷೆ ಮಾಡುತ್ತಿದ್ದರು.

    ಇದನ್ನೂ ಓದಿ: ಸಾಮಾಜಿಕ ಕಲ್ಯಾಣ ಯೋಜನೆಯಲ್ಲಿ 1.20 ಕೋಟಿ ಕಾರ್ಮಿಕರ ಸೇರ್ಪಡೆ ಗುರಿ: ಕಾರ್ಮಿಕ ಸಚಿವ ಸಂತೋಷ್​ ಲಾಡ್​

    ಭಾರತ ತಂಡ ಪಂದ್ಯ ಗೆದ್ದ ಕೂಡಲೇ ಸಾಮಾಜಿಕ ಜಾಲತಾಣದಲ್ಲಿ ಕ್ರಿಕೆಟ್​ ಅಭಿಮಾನಿಗಳು ಗೆಲುವನ್ನು ಸಂಭ್ರಮಿಸುವುದರ ಜತೆಗೆ ಸ್ಟೇಡಿಯಂನಲ್ಲಿ ಸಾರಾ ಕಂಗೊಳಿಸುವ ವಿಡಿಯೋವನ್ನು ಕೂಡ ಹಂಚಿಕೊಳ್ಳುವ ಮುಖೇನ ವ್ಯಾಪಕವಾಗಿ ವೈರಲ್ ಮಾಡುತ್ತಿದ್ದರು. ಈ ಮೂಲಕ ಸುದ್ದಿಯಲ್ಲಿದ್ದ ಸಾರಾ ಇದೀಗ ಮತ್ತೊಂದು ವಿಡಿಯೋ ಮೂಲಕ ನೆಟ್ಟಿಗರ ಗಮನ ಸೆಳೆದಿದ್ದಾರೆ.

    ಭಾನುವಾರದ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಸೋಲನ್ನು ಕಂಡ ಬಳಿಕ 2011ರ ಫೈನಲ್​ ವಿಶ್ವಕಪ್​ ಪಂದ್ಯದಲ್ಲಿ ಮಹೇಂದ್ರ ಸಿಂಗ್​ ಧೋನಿ ಹೊಡೆದ ಗೆಲುವಿನ ಸಿಕ್ಸರ್​ ವಿಡಿಯೋವನ್ನು ಹಂಚಿಕೊಂಡ ಸಾರಾ, “ಈ ವರ್ಲ್ಟ್​​​ ಕಪ್​ ಕೊಟ್ಟಿದ್ದಕ್ಕಾಗಿ ಥಾಂಕ್ಯೂ ಧೋನಿ” ಎಂದು ಬರೆದು ಪೋಸ್ಟ್​ ಮಾಡಿದ್ದಾರೆ.

    ಇದನ್ನೂ ಓದಿ:  VIDEO| ‘ಚುನಾವಣಾ ಪೂರ್ವದಲ್ಲೇ ಸರ್ಕಾರ ಪತನ’; ಶ್ರೀರಾಮುಲು ಹೇಳಿಕೆಗೆ ಎಚ್.ಕೆ ಪಾಟೀಲ್ ಕೊಟ್ಟ ತಿರುಗೇಟು ಹೀಗಿದೆ

    ಸದ್ಯ ಈ ಒಂದು ಟ್ವೀಟ್ ಇದೀಗ​ ಅನೇಕರ ಗಮನವನ್ನು ಸೆಳೆದಿದ್ದು, 2011ರ ಶ್ರೀಲಂಕಾ ವಿರುದ್ಧದ ಅಂತಿಮ ಮ್ಯಾಚ್​ನ ಕ್ಷಣಗಳನ್ನು ಒಮ್ಮೆ ಮೆಲುಕು ಹಾಕಿ ಸಂಭ್ರಮಿಸುವಂತೆ ಮಾಡಿದೆ.

    ರಾಜ್ಯೋತ್ಸವ ರಸಪ್ರಶ್ನೆ - 20

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts