ಸ್ತ್ರೀಯರ ಮುಂದಾಳತ್ವದಲ್ಲಿ ದೇಶದ ಪ್ರಗತಿ

blank

ಬಸವಕಲ್ಯಾಣ: ಆರೋಗ್ಯಪೂರ್ಣ ಸಮಾಜ, ಸುರಕ್ಷಿತ, ಸದೃಢ ರಾಷ್ಟ್ರ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ ಎಂದು ಬಳ್ಳಾರಿ ರಾಷ್ಟ್ರೀಯ ಬಸವದಳ ಅಧ್ಯಕ್ಷೆ ಶಾರದಮ್ಮ ಹೇಳಿದರು.

ಹರಳಯ್ಯ ಗವಿಯಲ್ಲಿ ಅಂತಾರಾಷ್ಟ್ರೀಯ ಲಿಂಗಾಯತ ಧರ್ಮ ಕೇಂದ್ರ ಹಾಗೂ ಅಖಿಲ ಭಾರತ ಲಿಂಗವಂತ ಹರಳಯ್ಯ ಪೀಠದ ಸಹಯೋಗದಡಿ ಶರಣ ವಿಜಯೋತ್ಸವ ನಾಡಹಬ್ಬ ಹಾಗೂ ಹುತಾತ್ಮ ದಿನ ನಿಮಿತ್ತ ಭಾನುವಾರ ಸಂಜೆ ಆಯೋಜಿಸಿದ್ದ ಮಹಾ ಶಕ್ತಿಕೂಟಗಳ ಸಮಾವೇಶ ಉದ್ಘಾಟಿಸಿದ ಅವರು, ಸ್ತ್ರೀಯರ ಮುಂದಾಳತ್ವದಲ್ಲಿ ದೇಶದ ಪ್ರಗತಿ ಸಾಧ್ಯ ಎಂದು ಪ್ರತಿಪಾದಿಸಿದರು.

ಒಂದು ರಾಷ್ಟ್ರ ಬಲಿಷ್ಠ, ಸದೃಢ, ಸುರಕ್ಷಿತವಾಗಿದ್ದು ಜನ ಶಾಂತಿ, ನೆಮ್ಮದಿಯಿಂದ ಬದುಕಬೇಕಾದರೆ ಉತ್ತಮ ಜನಾಂಗದ ಅಗತ್ಯವಿದೆ. ವಿಜ್ಞಾನ ತಂತ್ರಜ್ಞಾನದ ಪ್ರಗತಿಯಷ್ಟೇ ಸಾಲದು. ನೈತಿಕ, ಧಾರ್ಮಿಕ, ಆದರ್ಶ ಮೌಲ್ಯಗಳು ಸ್ಥಾಪನೆಯಾದಾಗಲೇ ನಿಜವಾದ ಪ್ರಗತಿ ಆಗುತ್ತದೆ ಎಂದರು.

೧೨ನೇ ಶತಮಾನದಲ್ಲಿ ಬಸವಣ್ಣನವರು ಧಾರ್ಮಿಕ, ಸಾಮಾಜಿಕ ಸ್ವಾತಂತ್ರ್ಯ ಕೊಟ್ಟಿದ್ದರಿಂದ ಸ್ತ್ರೀಯರು ಆಧ್ಯಾತ್ಮಕವಾಗಿ ಅತ್ಯುನ್ನತ ಸ್ಥಾನಕ್ಕೇರಿದರು. ಆದರೆ ಇಂದು ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಪ್ರಗತಿ ಸಾಧಿಸಿ ಸ್ವಾವಲಂಬಿಯಾಗಿದ್ದಾರೆ. ಶ್ರೀಮಂತಿಕೆ ಹೆಚ್ಚುತ್ತಿದ್ದರೂ ಕುಟುಂಬ ಸಂಬAಧ ಸಡಿಲಗೊಳ್ಳುತ್ತ ಮಾನವೀಯತೆ ಕಡಿಮೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಸಾನ್ನಿಧ್ಯ ವಹಿಸಿದ್ದ ಪೂಜ್ಯ ಡಾ.ಗಂಗಾAಬಿಕಾ ಅಕ್ಕ ಮಾತನಾಡಿ, ಮಹಿಳೆಯರಿಗೆ ಸ್ವಾತಂತ್ರ್ಯ ನೀಡುವುದರ ಮೂಲಕ ಸಮಾನತೆ ಕಲ್ಪಿಸಿದವರು ಬಸವಾದಿ ಶರಣರು. ಮಹಿಳೆಯರು ಮೌಢ್ಯಚಾರಣೆಯಿಂದ ಹೊರಬಂದು ವೈಚಾರಿಕತೆಯಿಂದ ಬದುಕಬೇಕು ಎಂದು ಕಿವಿಮಾತು ಹೇಳಿದರು.

ವಚನ ಶಿಕ್ಷಣ ಸಂಸ್ಥೆ ಅಧ್ಯಕ್ಷೆ ಲಿಂಗಾರತಿ ನಾಗದಗೇರೆ ಮಾತನಾಡಿ, ಕಲ್ಯಾಣ ಭೂಮಿ ಇಡೀ ಜಗತ್ತಿಗೆ ವಿನೂತನ ಧರ್ಮ ನೀಡಿದೆ. ಕಲ್ಯಾಣ ಕ್ರಾಂತಿಯನ್ನು ಎಲ್ಲರೂ ಸ್ಮರಿಸಿ ವೈಚಾರಿಕತೆಯಿಂದ ಬಾಳಬೇಕು ಎಂದು ಸಲಹೆ ನೀಡಿದರು.

ಬಿಡಿಪಿಸಿ ನಿರ್ದೇಶಕಿ ವಿಜಯಲಕ್ಷ್ಮೀ ಗಡ್ಡೆ ಅಧ್ಯಕ್ಷತೆ ವಹಿಸಿದ್ದರು. ಅಕ್ಕನ ಬಳಗದ ಸುಲೋಚನಾ ಗುದಗೆ, ಮುಕ್ತಾಯಕ್ಕ ಮಹಾ ಶಕ್ತಿಕೂಟದ ಸುಜಾತಾ ತೊಗರಖೇಡೆ, ಬಸವ ಮಹಾ ಶಕ್ತಿಕೂಟ ಹೈದರಾಬಾದ್‌ನ ಗೀತಾ ಬಿರಾದಾರ, ಗಂಗಾಂಬಿಕೆ ಮಹಾ ಶಕ್ತಿಕೂಟದ ಜಯಶ್ರೀ ಬಿರಾದಾರ, ದೇವರ ದಾಸಿಮಯ್ಯ ಮಹಾ ಶಕ್ತಿಕೂಟದ ರಾಣಿ ವಡ್ಡೆ, ಹರಳಯ್ಯ ಕಲ್ಯಾಣಮ್ಮ ಮಹಾ ಶಕ್ತಿಕೂಟದ ಮೀನಾ ಜಾಧವ್ ಮಾತನಾಡಿದರು.

ಔರಾದ್ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸರೂಬಾಯಿ ಘೂಳೆ, ಹೇಮಲತಾ ಪಾಟೀಲ್, ನಗರಸಭೆ ಸದಸ್ಯೆ ನಿರ್ಮಲಾ ಶಿವಣಕರ, ಪ್ರಮುಖರಾದ ರಾಜೇಶ್ವರಿ ಖೂಬಾ, ಮಹಾದೇವಿ ಮೂಲಗೆ, ಛಾಯಾ ಜಾಧವ್, ಪ್ರಭಾವತಿ ಘೋಡವಾಡೆ, ಉಷಾ ಕನ್ನಾಡೆ, ಆಶಾ ಕನ್ನಾಡೆ, ಸರೋಜಾ ಕಲ್ಯಾಣಕರ, ರಾಜಮತಿ ಗಂಗು, ಹೇಮಾ ರಾಜೋಳೆ, ಪ್ರಭಾವತಿ ಘೋಡವಾಡೆ, ಚನ್ನಮ್ಮಾ ಗಂಜಿ ಇದ್ದರು. ಡಾ.ಮೀನಾಕ್ಷಿ ಬಿರಾದಾರ ಸ್ವಾಗತಿಸಿದರು. ಪೂಜಾ ಗಂಗು ನಿರೂಪಣೆ ಮಾಡಿದರು. ಡಾ.ಪ್ರಿಯಾಂಕಾ ಅಮರ ಮಂಠಾಳೆ ಭಕ್ತಿ ದಾಸೋಹಗೈದರು.
ಜಯಶ್ರೀ ಚಟ್ನಳ್ಳಿ ಕಲಬುರಗಿ ನಿರ್ದೇಶನದಲ್ಲಿ ಬಸವಕಲ್ಯಾಣದ ಅಕ್ಕನ ಬಳಗ ನಡೆಸಿಕೊಟ್ಟ ಅನುಭವ ಮಂಟಪ ರೂಪಕ ಗಮನ ಸೆಳೆಯಿತು. ನೀಲಾಂಬಿಕಾ ಅಕ್ಕನ ಬಳಗ ಪ್ರತಾಪುರದಿಂದ ವಚನ ಭಜನೆ, ಹೈದರಾಬಾದ್‌ನ ಬಸವ ಶಕ್ತಿಕೂಟ ಪ್ರಮುಖರಿಂದ ಗುರುಪೂಜೆ ನಡೆಯಿತು.

ನೀಟ್‌ಗೆ ನೀಡಿದ ಮಹತ್ವ ನೀಟಾಗಿ ಬೆಳೆಸಲು ನೀಡಿ
ನೀಟ್ ಪರೀಕ್ಷೆಗೆ ನೀಡಿದಷ್ಟು ಮಹತ್ವ ಮಕ್ಕಳನ್ನು ನೀಟಾಗಿ ಬೆಳೆಸಲು ನೀಡಿದರೆ ದೇಶ ಪ್ರಗತಿಯಷ್ಟೇ ಅಲ್ಲ. ಸ್ವರ್ಗವಾಗುತ್ತದೆ ಎಂದು ಶಾರದಮ್ಮ ಹೇಳಿದರು. ಉತ್ತಮ ಸಂಸ್ಕಾರ ಮೂಲಕ ಮಕ್ಕಳನ್ನು ಮಹಾನ್ ನಾಯಕರನ್ನಾಗಿ ರೂಪಿಸುವಲ್ಲಿ ತಾಯಿ ಪಾತ್ರ ಮಹತ್ವದ್ದಾಗಿದೆ ಎಂಬುದನ್ನು ಒಪ್ಪುತ್ತೇವೆ. ಆದರೆ ಮಕ್ಕಳಲು ಕೆಟ್ಟವರಾಗುವಲ್ಲೂ ಆಕೆ ಪಾತ್ರವನ್ನು ಅಲ್ಲಗಳೆಯಲಾದೀತೆ ಎಂದು ಪ್ರಶ್ನಿಸಿದರು.

Share This Article

ಉಪ್ಪಿನಕಾಯಿ ಸೇವನೆಯಿಂದ ಎಷ್ಟೆಲ್ಲಾ ಪ್ರಯೋಜನ ಇದೆ ಗೊತ್ತಾ; ತಿಳಿದ್ರೆ ನೀವು ಮಿಸ್​ ಮಾಡೋದೆ ಇಲ್ಲ | Health Tips

ಈ ವರ್ಷ ಗೂಗಲ್​ನಲ್ಲಿ ಅತಿ ಹೆಚ್ಚು ಹುಡುಕಿದ ಪಾಕವಿಧಾನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.ಇದರಲ್ಲಿ ಉಪ್ಪಿನಕಾಯಿ ಭಾರತದಲ್ಲಿ…

ಟಾಯ್ಲೆಟ್​​ನ ಕೊಳಕು ವಾಸನೆ, ಹಳದಿ ಕಲೆ ತೆಗೆದುಹಾಕುವುದೇಗೆ?; ಇಲ್ಲಿದೆ ಸಿಂಪಲ್​ ವಿಧಾನ | Tips

ಮನೆಯನ್ನು ಸ್ವಚ್ಛಗೊಳಿಸಲು ಮತ್ತು ಅಲಂಕರಿಸಲು ಜನರು ಶ್ರಮಿಸುತ್ತಾರೆ. ಹೊರಗಿನಿಂದ ಅವರ ಮನೆಯು ಸಾಕಷ್ಟು ಐಷಾರಾಮಿಯಾಗಿ ಕಾಣುತ್ತದೆ.…

ಚಳಿಗಾಲದಲ್ಲಿ ಬಿಸಿ ಚಹಾ ಮತ್ತು ಕಾಫಿ ಸೇವಿಸುತ್ತಿದ್ದೀರಾ; ಅಪಾಯ ತಪ್ಪಿದಲ್ಲ.. ಎಚ್ಚರದಿಂದಿರಿ | Health Tips

ಚಳಿಗಾಲ ಬಂದ ಕೂಡಲೆ ಟೀ, ಕಾಫಿ ಸೇವನೆ ಹೆಚ್ಚುತ್ತದೆ. ಈ ಬಿಸಿ ಪಾನೀಯವು ದೇಹಕ್ಕೆ ಶಾಖವನ್ನು…