ಬೌರಿಂಗ್ ಆಸ್ಪತ್ರೆಯಲ್ಲಿ ಸ್ಯಾಂಟ್ರೋ ರವಿ ವೈದ್ಯಕೀಯ ಪರೀಕ್ಷೆ; ಅತ್ತ ಪತ್ನಿಗೆ ಸಿಐಡಿ ವಿಚಾರಣೆ

ಬೆಂಗಳೂರು: ವೇಶ್ಯಾವಾಟಿಕೆ ದಂಧೆ, ಸರ್ಕಾರಿ ಅಧಿಕಾರಿಗಳ ವರ್ಗಾವಣೆ, ಹಾಗೂ ಪತ್ನಿಗೆ ಗರ್ಭಪಾತ ಮಾಡಿಸಿದ ಆರೋಪದಲ್ಲಿ ಬಂಧನವಾಗಿರುವ ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿ ಪತ್ನಿ ರಶ್ಮಿ ಶನಿವಾರ ಸಿಐಡಿ ವಿಚಾರಣೆಗೆ ಹಾಜರಾಗಿದ್ದು, ಮತ್ತೊಂದೆಡೆ ರವಿಯನ್ನು ಬೌರಿಂಗ್ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಅರಮನೆ ರಸ್ತೆಯಲ್ಲಿರುವ ಸಿಐಡಿ ಕಚೇರಿಗೆ ಬೆಳಗ್ಗೆ 11 ಗಂಟೆಗೆ ತಮ್ಮ ಪರಿಚಯಸ್ಥರ ಜತೆ ಆಗಮಿಸಿದ ರಶ್ಮಿಯನ್ನು ಡಿವೈಎಸ್ಪಿ ಅಂಜುಮಾಲಾ ನಾಯಕ್ ವಿಚಾರಣೆಗೊಳಪಡಿಸಿದರು. ಅಪರಾಹ್ನ 12.30ರ ಸುಮಾರಿಗೆ ಶೇಷಾದ್ರಿಪುರದಲ್ಲಿ ರವಿ ಜತೆ ವಾಸವಾಗಿದ್ದ ಫ್ಲ್ಯಾಟ್​​ನಲ್ಲಿ ಸ್ಥಳ … Continue reading ಬೌರಿಂಗ್ ಆಸ್ಪತ್ರೆಯಲ್ಲಿ ಸ್ಯಾಂಟ್ರೋ ರವಿ ವೈದ್ಯಕೀಯ ಪರೀಕ್ಷೆ; ಅತ್ತ ಪತ್ನಿಗೆ ಸಿಐಡಿ ವಿಚಾರಣೆ