ಮನೆ ಕುಸಿದು ಮಣ್ಣಿನಡಿ ಸಿಲುಕಿದ ಚನ್ನಡ್ಲುವಿನ ಸಂತೋಷ ಪೂಜಾರಿ ಮೃತದೇಹ ಆರು ದಿನಗಳ ನಂತರ ಪತ್ತೆ

ಕಳಸ: ಆರು ದಿನಗಳಿಂದ ಚನ್ನಡ್ಲುವಿನಲ್ಲಿ ಭೂ ಕುಸಿತದಿಂದ ಮನೆ ಕುಸಿದು ಮೃತಪಟ್ಟ ಸಂತೋಷ್ ಪೂಜಾರಿ ಅವರ ಮೃತದೇಹವನ್ನು ಬುಧವಾರ ಹೊರತೆಗೆಯಲಾಯಿತು.

ಆ.9 ರಂದು ಮಧ್ಯಾಹ್ನ ಮಳೆಗೆ ಗುಡ್ಡ ಕುಸಿದಿದ್ದರಿಂದ ಸಂತೋಷ್ ಮನೆಯ ಸದಸ್ಯರನ್ನು ಹೊರಗಡೆ ತಂದು ನಂತರ ಮನೆ ಒಳಗೆ ಹೋದಾಗ ಮನೆ ಸಂಪೂರ್ಣ ಕುಸಿದು ಮಣ್ಣಿನಡಿಯಲ್ಲಿದ್ದರು. ಆದರೆ ಮಳೆ ಹೆಚ್ಚಾದಂತೆ ಆ ಪ್ರದೇಶಕ್ಕೆ ಹೋಗಲು ಅಸಾಧ್ಯವಾಯಿತು. ಇದರಿಂದ 6 ದಿನ ಕಳೆದರೂ ಮಣ್ಣಿನಡಿ ಸಿಲುಕಿದ್ದ ಸಂತೋಷ್ ಪೂಜಾರಿ ಅವರ ಮೃತದೇಹ ತೆಗೆಯಲು ಅಧಿಕಾರಿಗಳು ನಿರ್ಲಕ್ಷ್ಯಹಿಸಿದ್ದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರಿಂದ ಹಿಟಾಚಿ ಹಾಗೂ ಸ್ಥಳೀಯ ನಾಗರಿಕರು ಸೇರಿ ಕಾರ್ಯಾಚರಣೆ ನಡೆಸಿ ಬುಧವಾರದ ಮಧ್ಯಾಹ ಮಣ್ಣಿನಡಿದ್ದ ಮೃತದೇಹವನ್ನು ಹೊರತೆಗೆಯಲಾಯಿತು. ನಂತರ ಕಳಸ ಸರ್ಕಾರಿ ಆಸ್ಪತ್ರೆಗೆ ತಂದು ಮರಣೋತ್ತರ ಪರೀಕ್ಷೆ ನಡೆಸಲಾಯಿತು.

ಸೂಕ್ತ ಪರಿಹಾರದ ಭರವಸೆ: ಸಂಸದೆ ಶೋಭಾ ಕರಂದ್ಲಾಜೆ, ಮಾಜಿ ಶಾಸಕ ಡಿ.ಎನ್.ಜೀವರಾಜ್ ಕಳಸ ಆಸ್ಪತ್ರೆಗೆ ಭೇಟಿ ನೀಡಿ ಮೃತ ಸಂತೋಷ ಪೂಜಾರಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ಸರ್ಕಾರದಿಂದ ಮೂಲಸೌಲಭ್ಯ ಹಾಗೂ ಪರಿಹಾರ ನೀಡುವ ಭರವಸೆ ನೀಡಿದರು. ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ, ತಾಲೂಕು ಅಧ್ಯಕ್ಷ ಪ್ರಮೋದ್, ಮುಖಂಡರಾದ ಎಂ.ಎ.ಶೇಷಗಿರಿ, ವೆಂಕಟ ಸುಬ್ಬಯ್ಯ, ಪ್ರವೀಣ್ ಪೂಜಾರಿ, ನಾಗೇಶ್, ರಂಗನಾಥ್, ಕಾರ್ತಿಕ್ ಶಾಸ್ತ್ರಿ ಇದ್ದರು.

Leave a Reply

Your email address will not be published. Required fields are marked *