ಹುಬ್ಬಳ್ಳಿ: ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಹಾಗೂ ಸಂಸ್ಕೃತ ಶಿಕ್ಷಣ ನಿರ್ದೇಶನಾಲಯ ಮತ್ತು ನಗರದ ಜಗದ್ಗುರು ಮೂರು ಸಾವಿರಮಠ ವಿದ್ಯಾವರ್ಧಕ ಸಂಘದ ಗಂಗಾಧರ ಸಂಸ್ಕೃತ ಪಾಠ ಶಾಲೆಯಲ್ಲಿ “ಅಸ್ಮಾಕಂ ಸಂಸ್ಕೃತ’ ಸರಣಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಅಧ್ಯಕ್ಷತೆ ವಹಿಸಿದ್ದ ಗಂಗಾಧರ ಪ್ರೌಢಶಾಲೆ ಮುಖ್ಯಾಧ್ಯಾಪಕಿ ಎ.ಎಸ್. ಕರಬಸನ್ನವರ ಮಾತನಾಡಿ, ಮಕ್ಕಳು ಸಂಸ್ಕೃತವನ್ನು ಕಲಿಯುವುದರಿಂದ ಸಂಸ್ಕಾರವು ಸಹಜವಾಗಿಯೇ ದೊರೆಯಲಿದೆ. ಸಂಸ್ಕೃತದ ಬಹಳಷ್ಟು ಪದಗಳು ಕನ್ನಡ ಭಾಷೆಯಲ್ಲಿ ಸೇರಿಕೊಂಡು ಆ ಭಾಷೆಯನ್ನು ಶ್ರೀಮಂತಗೊಳಿಸಿದೆ ಎಂದರು.
ಅತಿಥಿಗಳಾಗಿದ್ದ ಸುಧಾ ಆರ್. ಶೆಟ್ಟಿ ಬಾಲಕಿಯರ ಪ್ರೌಢಶಾಲೆ ಮುಖ್ಯಾಧ್ಯಾಪಕಿ ಆರ್.ಜಿ. ಮರಿಬಾಶೆಟ್ಟಿ, ಎಂ.ಓ. ಜಂಗನ್ನವರ, ಮೂರುಸಾವಿರಮಠ ಪೂಜಾ ಸೇವಾ ಸಮಿತಿ ಸದಸ್ಯ ಚನ್ನಬಸಪ್ಪ ಧಾರವಾಡಶೆಟ್ಟರ ಹಾಗೂ ಎಸ್.ಬಿ. ಹಿರೇಮಠ, ಎಂ.ಕೆ. ನಾಗರಹಳ್ಳಿ ಉಪಸ್ಥಿತರಿದ್ದರು.
ಜಗದ್ಗುರು ಗಂಗಾಧರ ಸಂಸ್ಕೃತ ಪಾಠ ಶಾಲೆಯ ಮುಖ್ಯಾಧ್ಯಾಪಕ ಕೆ.ಎಸ್. ಹಿರೇಮಠ ಸ್ವಾಗತಿಸಿದರು. ಪಾಠಶಾಲೆಯ ವಿದ್ಯಾರ್ಥಿಗಳಾದ ಕವಿತಾ, ಶ್ರೀಕೃತಿ, ಅತಾ ಪಾಟೀಲ ಪ್ರಾರ್ಥನೆ, ಭಗವದ್ಗೀತೆ ಪಠಿಸಿದರು. ಸಹಶಿಕ ಟಿ.ಎಚ್. ಬಂಡಿ ಕಾರ್ಯಕ್ರಮ ನಿರೂಪಿಸಿದರು. ಬಿ.ವೆ. ಕಾರನವರ ವಂದಿಸಿದರು.