ಸಂಸ್ಕೃತ ಕೊಡುಗೆ ವಿಸ್ತಾರ

ನವದೆಹಲಿಯಲ್ಲಿ ಪೇಜಾವರ ಮಠದ ವೇದ ವೇದಾಂತ ಅಧ್ಯಯನ ಕೇಂದ್ರ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ
ನವದೆಹಲಿಯ ವಸಂತಕುಂಜ ಪ್ರದೇಶದ ಕೃಷ್ಣಧಾಮದ ಆಶ್ರಯದಲ್ಲಿ ರಾಮವಿಠ್ಠಲ ಶಿಕ್ಷಣ ಸಮಿತಿ ವತಿಯಿಂದ ನಿರ್ಮಿಸಿದ ವೇದ- ವೇದಾಂತ ಅಧ್ಯಯನ ಮತ್ತು ಸಂಶೋಧನಾ ಪ್ರತಿಷ್ಠಾನ ಭವನವನ್ನು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಮಂಗಳವಾರ ಉದ್ಘಾಟಿಸಿದರು.
ಮುಖ್ಯ ಅಥಿತಿಯಾಗಿದ್ದ ಗೃಹ ಸಚಿವ ರಾಜನಾಥ ಸಿಂಗ್, ದೇಶ-ವಿದೇಶಗಳಲ್ಲಿಯೂ ಸಂಸ್ಕೃತದ ಕೊಡುಗೆ ವಿಸ್ತಾರವಾಗಿದೆ. ಗಣಕಯಂತ್ರಕ್ಕೆ ಸಾಫ್ಟ್‌ವೇರ್ ನಿರ್ಮಾಣದಲ್ಲಿ ಸಂಸ್ಕೃತದ ಪಾತ್ರ ಬಹಳ ಪ್ರಮುಖ ಎಂದರು. ಆಶೀರ್ವಚನ ನೀಡಿದ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ, ಸಂಸ್ಕೃತದ ಅಧ್ಯಯನದಿಂದ ಸಂಸ್ಕೃತಿಯ ಅಭ್ಯುದಯವಾಗುತ್ತದೆ. ಮಧ್ವಾಚಾರ್ಯರ ಕರ್ಮ ಮತ್ತು ಭಕ್ತಿ ಸಿದ್ಧಾಂತ ಸದಾ ಪ್ರಸ್ತುತ ಎಂದರು.
ಕೇಂದ್ರ ಸಚಿವ ವಿಜಯ್ ಗೋಯಲ್ ಉಪಸ್ಥಿತರಿದ್ದರು. ಡಾ. ಬಿ.ಡಿ.ಪಾಟೀಲ್ ಸ್ವಾಗತಿಸಿದರು. ಡಿ.ಪಿ.ಅನಂತ, ವಿಷ್ಣುಮೂರ್ತಿ ಆಚಾರ್ಯ ಉಪಸ್ಥಿತರಿದ್ದರು.