ಮಸ್ಕಿ: ಅಶೋಕ ಶಾಸನ ಸ್ಥಳದ ಅಭಿವೃದ್ಧಿ ಮತ್ತು ಸನ್ನತಿ ಅಭಿವೃದ್ಧಿ ಪ್ರಾಧಿಕಾರ ರಚಿಸುವಂತೆ ಜಾಗೃತಿ ಮೂಡಿಸುವ ಉದ್ದೇಶದಿಂದ ಸನ್ನತಿ ಪಂಚಶೀಲ ಪಾದಯಾತ್ರೆ ಆರಂಭವಾಗಿದ್ದು, ನ.28ರಂದು ಮಸ್ಕಿಗೆ ಆಗಮಿಸಲಿದೆ ಎಂದು ಸಾಹಿತಿ ಹಾಗೂ ದಲಿತ ಸಮಾಜದ ಮುಖಂಡ ಸಿ.ದಾನಪ್ಪ ಹೇಳಿದರು.
ಪಟ್ಟಣದಲ್ಲಿ ಮಂಗಳವಾರ ಆಯೋಜಿಸಿದ್ದ ಸುದ್ದಿಗೊಷ್ಠಿಯಲ್ಲಿ ಮಾತನಾಡಿ, ನ.15ರಿಂದ ಆರಂಭವಾದ ಪಾದಯಾತ್ರೆ ಜ.24ರಂದು ಬೆಂಗಳೂರು ತಲುಪಲಿದೆ. ಕರ್ನಾಟಕ ಬಿಕ್ಕು, ಬಿಕ್ಕುಣಿ ಸಂಘ, ಸನ್ನತಿ ಪಂಚಶೀಲ ಪಾದಯಾತ್ರೆ ಸಮಿತಿ ಹಾಗೂ ದಲಿತ ಸಂಘಟನೆಗಳ ಸಹಯೋಗದಲ್ಲಿ ಪಾದಯಾತ್ರೆ ಆಯೋಜಿಸಲಾಗಿದೆ ಎಂದರು. ನ.28ರಂದು ಮಸ್ಕಿಯ ಡಾ.ಅಂಬೇಡ್ಕರ್ ಮೂರ್ತಿ ಬಳಿ ಪಾದಯಾತ್ರೆ ಸ್ವಾಗತಿಸಲಾಗುವುದು.
ನಂತರ ಅಶೋಕ ಶಿಲಾ ಶಾಸನಕ್ಕೆ ಭೇಟಿ ನೀಡಿ, ಹಳೇ ಬಸ್‌ನಿಲ್ದಾಣದ ಬಳಿಯ ಗಚ್ಚಿನ ಹಿರೇಮಠದಲ್ಲಿ ಸಾರ್ವಜನಿಕ ಸಭೆ ಆಯೋಜಿಸಲಾಗಿದೆ ಎಂದರು. ಶಾಸಕ ಆರ್.ಬಸನಗೌಡ ತುರ್ವಿಹಾಳ, ಜಿಪಂ ಮಾಜಿ ಸದಸ್ಯ ದೊಡ್ಡಪ್ಪ ಮುರಾರಿ, ಮಲ್ಲಪ್ಪ ಗೋನಾಳ, ಕಾಸಿಮಪ್ಪ ಮುರಾರಿ, ಕಿರಣ ಮುರಾರಿ ಇತರರಿದ್ದರು.