ಸಿರಗುಪ್ಪ: ಬೌದ್ಧ ಧರ್ಮದ ಐತಿಹಾಸಿಕ ಕ್ಷೇತ್ರ ಸನ್ನತಿಯಿಂದ ಬೆಂಗಳೂರು ವಿಧಾನಸೌಧದವರೆಗೆ ನಡೆಯುತ್ತಿರುವ ಸನ್ನತಿ ಪಂಚಶೀಲ ಪಾದಯಾತ್ರೆ ನ.4ರಂದು ಸಿರುಗುಪ್ಪ ತಾಲೂಕಿನ ಇಬ್ರಾಂಪುರ ಗ್ರಾಮಕ್ಕೆ ಆಗಮಿಸಲಿದೆ ಎಂದು ಸನ್ನತಿ ಪಂಚಶೀಲ ಪಾದಯಾತ್ರೆ ಡಿಎಸ್‌ಎಸ್ ತಾಲೂಕು ಸಂಚಾಲಕ ಎಚ್.ದರಗಪ್ಪ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯದ ಸಮಗ್ರ ದಲಿತ ಸಂಘಟನೆಗಳು ಎಲ್ಲ ಬೌದ್ಧ ಸಂಘ ಸಮಿತಿಗಳು ಮತ್ತು ಬುದ್ಧ ವಿಹಾರ ಸಮಿತಿಗಳು ಸ್ವಾಗತ ಮಾಡಿಕೊಳ್ಳಲಿವೆ. ನ.6ರಂದು ಉಡೇಗೋಳದ ಅಶೋಕನ ಶಾಸನ ಸ್ಥಳದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನವನ್ನು ಆಚರಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.