More

    ಪುತ್ರಿ ಜತೆ ಸಂಕ್ರಾಂತಿ

    ಬೆಂಗಳೂರು: ಹಬ್ಬ-ಹರಿದಿನ ಅಥವಾ ಇನ್ನಿತರ ವಿಶೇಷ ದಿನಗಳನ್ನು ತಾರೆಯರು ಒಂದಷ್ಟು ವಿಭಿನ್ನವಾಗಿ ಆಚರಿಸಿಕೊಳ್ಳುವುದು ಸಾಮಾನ್ಯ. ಅಂತೆಯೇ ನಟಿ ಶ್ವೇತಾ ಶ್ರೀವಾತ್ಸವ್ ಈ ಸಲ ಮಕರ ಸಂಕ್ರಮಣವನ್ನು ಪುತ್ರಿ ಜತೆಗೆ ಫೋಟೋಶೂಟ್ ಮಾಡಿಸಿಕೊಳ್ಳುವ ಮೂಲಕ ವಿಶೇಷವಾಗಿ ಆಚರಿಸಿಕೊಂಡು ಸಂಭ್ರಮಿಸಿದ್ದಾರೆ. ತಮ್ಮ ಎರಡು ವರ್ಷದ ಪುತ್ರಿ ಅಶ್ಮಿತಾ ಜತೆ ಸಾಂಪ್ರದಾಯಿಕ ಉಡುಗೆ ಧರಿಸಿ ಫೋಟೋಶೂಟ್ ಮಾಡಿಸಿಕೊಂಡಿರುವ ಶ್ವೇತಾ, ಆ ಫೋಟೋಗಳನ್ನು ಸಾಮಾಜಿಕ ಜಾಲತಾಣಕ್ಕೂ ಪೋಸ್ಟ್ ಮಾಡಿಕೊಂಡು ಸಂತೋಷ ಹಂಚಿಕೊಂಡಿದ್ದಾರೆ. ‘ಮಗಳು ಅಶ್ಮಿತಾಗೆ ಈಗ 2 ವರ್ಷ. ಕಳೆದ ಸಂಕ್ರಾಂತಿ ಸಂದರ್ಭ ಅವಳಿಗೆ ಅಷ್ಟೇನೂ ಗೊತ್ತಾಗುತ್ತಿರಲಿಲ್ಲ. ಜತೆಗೆ ಆಗ ಒಳ್ಳೆಯ ಉಡುಪು ಹಾಕಿಸಿ ಫೋಟೋ ತೆಗೆಸುವುದೂ ಕಷ್ಟವಿತ್ತು. ಆದರೆ ಈ ವರ್ಷ ಅವಳಿಗೆ ಬಹಳಷ್ಟು ವಿಷಯಗಳು ಗೊತ್ತಾಗುತ್ತಿವೆ. ಈ ಸಂಕ್ರಮಣ ಸ್ಮರಣೀಯವಾಗಿರಲಿ, ಮುಂದೆ ಅವಳು ನೋಡಿದಾಗಲೂ ಒಂದು ಖುಷಿ ಸಿಗಲಿ ಎಂಬ ಕಾರಣಕ್ಕೆ ಅವಳೊಂದಿಗೆ ಫೋಟೋ ತೆಗೆಸಿಕೊಂಡೆ’ ಎನ್ನುತ್ತಾರೆ ಶ್ವೇತಾ. ಇನ್ನು ಸಿನಿಮಾ ವಿಷಯಕ್ಕೆ ಬರುವುದಾದರೆ ಶ್ವೇತಾ ಸದ್ಯ ‘ರಹದಾರಿ’ ಸಿನಿಮಾ ಮೂಲಕ ಕಮ್್ಯಾಕ್ ಮಾಡುತ್ತಿದ್ದಾರೆ. ಮೂರು ವರ್ಷಗಳ ಗ್ಯಾಪ್ ಬಳಿಕ ಸ್ಯಾಂಡಲ್​ವುಡ್​ಗೆ ಮರಳಿರುವ ಅವರು ಈ ಚಿತ್ರದಲ್ಲಿ ಸೂಪರ್ ಕಾಪ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಮಂಜುನಾಥ ಶಾಮನೂರು ಹಾಗೂ ಮುಕ್ತಾಂಬಾ ಬಸವರಾಜು ಅವರ ನಿರ್ವಣದಲ್ಲಿ ಮೂಡಿ ಬರಲಿರುವ ಈ ಸಿನಿಮಾಗೆ ನಿರ್ದೇಶಕ ಗಿರೀಶ್ ವೈರಮುಡಿ ಆಕ್ಷನ್-ಕಟ್ ಹೇಳಲಿದ್ದಾರೆ. ರಾಬರಿ-ಥ್ರಿಲ್ಲರ್ ಶೈಲಿಯ ಈ ಸಿನಿಮಾದ ಶೂಟಿಂಗ್ ಇನ್ನಷ್ಟೇ ಆರಂಭವಾಗಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಸಿನಿಮಾ

    Latest Posts