ಹುಬ್ಬಳ್ಳಿ: ಇಲ್ಲಿಯ ಕಲ್ಯಾಣನಗರ ರಂಗ ಮಂದಿರದಲ್ಲಿ ಕಲ್ಯಾಣಿ ಮಹಿಳಾ ಮಂಡಳಿ ವತಿಯಿಂದ ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಹಬ್ಬದ ವಿಶೇಷ ತಿನಿಸುಗಳನ್ನು ತಯಾರಿಸಿ, ಅಲಂಕಾರ, ರಂಗೋಲಿ ಬಿಡಿಸಿದ ಸದಸ್ಯರು ಇಳಕಲ್ ಸೀರೆ ಉಟ್ಟು ಸಂಕ್ರಾಂತಿಗೆ ವಿಶೇಷ ಮೆರಗು ತಂದರು.
ಮಂಡಳಿ ಅಧ್ಯಕ್ಷೆ ಸುಪ್ರಿತಾ ಛಬ್ಬಿ ಮಾತನಾಡಿ, ಹಬ್ಬದ ಮಹತ್ವವನ್ನು ಅರಿತು ಆಚರಿಸಿದಾಗಲೇ ಅದರ ಸೊಬಗು ಇನ್ನೂ ಹೆಚ್ಚುತ್ತದೆ. ಜತೆಗೆ ಮುಂದಿನ ಪೀಳಿಗೆಗೆ ಪರಿಚಯಿಸುವ ಪ್ರಯತ್ನ ಇದಾಗಿದೆ. ಮಹಿಳಾ ಮಂಡಳಿ ಎಲ್ಲ ಹಬ್ಬಗಳನ್ನು ವಿಭಿನ್ನ ರೀತಿಯಲ್ಲಿ ಆಚರಿಸಿಕೊಂಡು ಬರುತ್ತಿದೆ ಎಂದು ಹೇಳಿದರು.
ದಾಕ್ಷಾಯಿಣಿ ಕೋಳಿವಾಡ, ದೀಪಾ ಬಾವಿಕಟ್ಟಿ, ಲಕ್ಷ್ಮೀ ಬೂದಿಹಾಳ, ಸುಮಾ ಜೋಶಿ, ಜಯಶ್ರೀ ಉಮರಾಣಿ, ಸುನೀತಾ ಬಾಗೇವಾಡಿ, ಪ್ರತಿಮಾ ಕುಲಕಣಿರ್ ಇತರರು ಇದ್ದರು.