ಕೀಲುಕೋಟೆಯಲ್ಲಿ ಸಂಕ್ರಾಂತಿ ಸಂಭ್ರಮ

blank

ಕೋಲಾರ: ನಗರದ ಕೀಲುಕೋಟೆ ಬೀರೇಶ್ವರ ದೇವಾಲಯ ಆವರಣದಲ್ಲಿ ಭಾನುವಾರ ಅದ್ದೂರಿಯಾಗಿ ಸಂಕ್ರಾಂತಿ ಸಂಭ್ರಮ ಆಚರಿಸಲಾಯಿತು.
ನಂ-1 ದಿನಪತ್ರಿಕೆ ವಿಜಯವಾಣಿ, ಭಾರತ್​ ಸ್ಕೌಟ್ಸ್​ ಮತ್ತು ಗೈಡ್ಸ್​ ಸಂಸ್ಥೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ರೋಟರಿ ನಂದಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆ, ಮನರಂಜನಾ ಕಾರ್ಯಕ್ರಮಗಳಿಗೆ ಮಹಿಳೆಯರು, ಮಕ್ಕಳು ುಲ್​ ಫಿದಾ ಆದರು.
ಭಾರತ್​ ಸ್ಕೌಟ್ಸ್​ ಮತ್ತು ಗೈಡ್ಸ್​ ಸಂಸ್ಥೆಯ ಮುಖ್ಯ ಆಯುಕ್ತ ಕೆ.ವಿ.ಶಕರಪ್ಪ, ಆಯುಕ್ತ ಸುರೇಶ್​, ನಿವೃತ್ತ ಶಿಕ್ಷಕಿ ಉಮಾದೇವಿ, ಯುವ ಶಕ್ತಿ ಜಿಲ್ಲಾಧ್ಯಕ್ಷ ಪುಟ್ಟರಾಜು, ರಾಶಿಗೆ ಪೂಜೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮಕ್ಕಳು, ಮಹಿಳೆಯರು ಮನರಂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಮಹಿಳೆಯರಿಗಾಗಿ ರಂಗೋಲಿ, ಪೊಂಗಲ್​ ತಯಾರಿಸುವ ಸ್ಫರ್ಧೆ ಏರ್ಪಡಿಸಲಾಗಿತ್ತು, ವೀಕ್ಷಣೆಗೆ ಆಗಮಿಸಿದ್ದವರಿಗೆ, ಮಹಿಳೆಯರಿಗೆ, ಪೊಂಗಲ್​, ಬೇಯಿಸಿದ್ದ ಗೆಣಸು, ಅವರೆಕಾಯಿ ಉಣ ಬಡಿಸಲಾಯಿತು.
ಬೆಳಗ್ಗೆ 9.30ಕ್ಕೆ ಶುರುವಾದ ರಂಗೋಲಿ ಸ್ಪರ್ಧೆಯು 11.30ರವರೆಗೂ ನಡೆಯಿತು. ತೀರ್ಪುಗಾರರು ವಿಜೇತರನ್ನು ಆಯ್ಕೆ ಮಾಡಿದ ನಂತರ ಗಣ್ಯರು ಪ್ರಥಮ, ದ್ವೀತಿಯ ಬಹುಮಾನ ವಿತರಿಸಿ, ಶುಭಕೋರಿದರು.
ಎಸ್​ಕೆಡಿಆರ್​ಡಿಪಿ ಪದಾಧಿಕಾರಿಗಳಾದ ವಿಜಯ್​ ಕುಮಾರ್​, ಪವನ್​ ಕುಮಾರ್​, ಸ್ಕೌಟ್ಸ್​ ಮತ್ತು ಗೈಡ್ಸ್​ ಪದಾಧಿಕಾರಿಗಳಾದ ಸುರೇಶ್​, ಉಮಾದೇವಿ, ವಿಠ್ಠಲ್​, ಸ್ಕೌಟ್​ ವಿ.ಬಾಬು, ನಿರಂಜನ್​, ಹರೀಶ್​, ಹೇಮಾವತಿ, ಪ್ರಮೀಳಮ್ಮ ಮತ್ತಿತರರು ಉಪಸ್ಥಿತರಿದ್ದರು.

* ಸಂಸ್ಕೃತಿ ಪರಿಚಯಿಸುವ ಯತ್ನ
ಭಾರತ್​ ಸ್ಕೌಟ್ಸ್​ ಮತ್ತು ಗೈಡ್ಸ್​ ಸಂಸ್ಥೆಯ ಮುಖ್ಯ ಆಯುಕ್ತ ಕೆ.ವಿ.ಶಂಕರಪ್ಪ ಮಾತನಾಡಿ, ಮುಂಗಾರು ಬೆಳೆಗಳನ್ನು ಕಟಾವು ಮಾಡಿ ಒಕ್ಕಣೆ ಮಾಡಿದ ನಂತರ ಮನೆಗೆ ತರಲಾಗುತ್ತದೆ. ಅಲ್ಲಿಯ ತನಕ ರೈತರಿಗೆ ತಿಂಗಳು ಪೂರ್ತಿ ಸುಗ್ಗಿಯ ಕಾಲವಾಗಿರುತ್ತದೆ. ಈ ಸಂಸತಿಯನ್ನು ಹೊಸ ತಲೆಮಾರಿಗೆ ಪರಿಚಯಿಸುವುದು ಸಂಕ್ರಾಂತಿ ಸಂಭ್ರಮದ ಉದ್ದೇಶವಾಗಿದೆ ಎಂದು ಹೇಳಿದರು.
ಸುಗ್ಗಿ ಬಂತೆಂದರೆ ರೈತರಿಗೆ ಹಬ್ಬವೋ ಹಬ್ಬ. ಹಿಂದೆ ಈ ಹಬ್ಬಕ್ಕೆ ಬಹಳ ಪ್ರಾಮುಖ್ಯತೆ ನೀಡಲಾಗುತ್ತಿತ್ತು, ಬದಲಾದ ಕಾಲಟ್ಟದಿಂದ ವ್ಯವಸಾಯ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿದ್ದು, ಮಕ್ಕಳನ್ನು ನಗರ, ಪಟ್ಟಣಕ್ಕೆ ಕಳುಹಿಸುತ್ತಿದ್ದಾರೆ. ಇದರಿಂದಾಗಿ ಸಂಕ್ರಾಂತಿ ಸಂಭ್ರಮ ಣಿಸುತ್ತಿದೆ ಎಂದು ಬೇಸರಿಸಿದರು.
ಒಕ್ಕಣೆ ಕೆಲಸ ಮುಗಿದ ನಂತರ ರಾಸುಗಳಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ಸಂಕ್ರಾಂತಿ ದಿನ ಕಿಚ್ಚು ಹಾಯಿಸಿ, ಮೆರವಣಿಗೆ ಮಾಡುತ್ತಾರೆ. ಇಂತಹ ಸಂಭ್ರಮ ಈಗಿನ ಕಾಲದಲ್ಲಿ ಇಲ್ಲ. ಸಂಸತಿ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದ್ದು, ನೆಲದ ಸೊಗಡಿನ ಗಮಲು ಹೊಸಬರಿಗೂ ಪರಿಚಯವಾಗಬೇಕು ಎಂದರು.

* ಕಾರ್ಯಕ್ರಮಗಳಿಂದ ಬದಲಾವಣೆ
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನ ವಿಕಾಸ ಸಂಯೋಜಕಿ ಸೌಮ್ಯ ಮಾತನಾಡಿ, ಸಂಕ್ರಾಂತಿ ಎಂದರೆ ಪ್ರತಿಯೊಬ್ಬರಲ್ಲೂ ಸಂಭ್ರಮ. ಮುಂದುವರೆದ ತಂತ್ರಜ್ಞಾನ, ಬದಲಾದ ವಿದ್ಯಾಮಾನಗಳಿಂದ ಹಬ್ಬಗಳು ಅರ್ಥ ಕಳೆದುಕೊಳ್ಳುತ್ತಿವೆ. ನಗರ ಭಾಗದಲ್ಲಿ ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮ ಆಯೋಜನೆ ಮಾಡುವ ಮೂಲಕ ನಗರವಾಸಿಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಏರ್ಪಡಿಸುವ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡು ಪ್ರತಿಭೆ ಅನಾವಣಗೊಳಿಸುತ್ತಾರೆ. ಮನರಂಜನಾ ಕಾರ್ಯಕ್ರಮಗಳು ಜನರಲ್ಲಿ ಬದಲಾವಣೆಗಳು ತರುತ್ತವೆ ಎಂದರು.

ಸ್ಪರ್ಧಾ ವಿಜೇತರ ವಿವರ
ರಂಗೋಲಿ ಸ್ಪರ್ಧೆ
* ಪ್ರಥಮ. ಮಂಜುಳಾ
* ದ್ವೀತಿಯ ಉಮಾ
ಮಕ್ಕಳ ರಂಗೋಲಿ ಸ್ಪರ್ಧೆ
* ಪ್ರಥಮ ಶ್ರಾವಂತಿ
* ದ್ವೀತಿಯ ಹರ್ಷಿನಿ
ಪೊಂಗಲ್​ ತಯಾರಿ ಸ್ವರ್ಧೆ
* ಪ್ರಥಮ ವೀಣಾ
* ದ್ವೀತಿಯ ಸೌಮ್ಯಾ
ಹಗ್ಗ ಜಗ್ಗಾಟ
* ಪ್ರಥಮ ರೇಷ್ಮಾ
* ದ್ವೀತಿಯ ಮಂಜುಳಾ
ಬಬಲ್ಸ್​ ತುಂಬುವಿಕೆ
* ಪ್ರಥಮ ಮಂಜುಳಾ
* ದ್ವೀತಿಯ ಶ್ಯಾಮಲಾ

Share This Article

ಬೇಸಿಗೆಯಲ್ಲಿ ಈ 5 ಪದಾರ್ಥಗಳೊಂದಿಗೆ ಅಪ್ಪಿ ತಪ್ಪಿಯೂ ಮೊಸರು ತಿನ್ನಬೇಡಿ! | Yogurt

Yogurt : ಬೇಸಿಗೆಯಲ್ಲಿ, ಮೊಸರು ದೇಹವನ್ನು ತಂಪಾಗಿಸಲು ಸಹಾಯ ಮಾಡುತ್ತದೆ. ಆದರೆ, ಮೊಸರಿನೊಂದಿಗೆ ಅಥವಾ ಅದರ…

ಬಸ್ಸು ಅಥವಾ ಕಾರಿನಲ್ಲಿ ಪ್ರಯಾಣಿಸುವಾಗ ವಾಂತಿ ಬರೊದೇಕೆ ಗೊತ್ತೆ!; ತಡೆಗಟ್ಟೊದೇಗೆ? ಇಲ್ಲಿದೆ ಉಪಯುಕ್ತ ಮಾಹಿತಿ | Vomit

Vomit : ಕೆಲವರಿಗೆ ಬಸ್​ ಮತ್ತು ಕಾರಿನಲ್ಲಿ ಪ್ರಯಾಣ ಮಾಬೇಕಾದರೆ ಸಲ್ಪ ದೂರು ಪ್ರಯಾಣಿಸಿದ ಬಳಿಕ…

ನಕಲಿ vs ಅಸಲಿ ಕಲ್ಲಂಗಡಿ ಹಣ್ಣು: ಪತ್ತೆಹಚ್ಚುವುದು ಹೇಗೆ? ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ… Watermelon

Watermelon : ಎಲ್ಲಡೆ ಬೇಸಿಗೆ ಆರಂಭವಾಗಿದ್ದು, ಬಿಸಿಲಿನ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸುಡುವ ಬಿಸಿಲಿನಿಂದಾಗಿ…