Friday, 16th November 2018  

Vijayavani

Breaking News

‘ಸಂಜು’ ಸಿನಿಮಾ ಅಪರಾಧಿಗಳು, ಮಾಫಿಯಾವನ್ನು ವೈಭವೀಕರಿಸುತ್ತದೆ: ಪಾಂಚಜನ್ಯ

Thursday, 12.07.2018, 5:25 PM       No Comments

ನವದೆಹಲಿ: ರಾಜ್‌ ಕುಮಾರ್‌ ಹಿರಾನಿ ನಿರ್ದೇಶನದ ರಣ್‌ಬೀರ್‌ ಕಪೂರ್‌ ಅಭಿನಯದ ಸಂಜಯ್‌ ದತ್‌ ಬದುಕಿನ ಕುರಿತ ಸಿನೆಮಾ ಸಂಜು ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಅಬ್ಬರದ ದಾಖಲೆ ಮಾಡುತ್ತಿರುವಾಗಲೇ ಆರ್‌ಎಸ್‌ಎಸ್‌ ಸಂಯೋಜಿತ ಹಿಂದಿ ವಾರಪತ್ರಿಕೆ ಪಾಂಚಜನ್ಯ ಸಂಜು ಕುರಿತಾಗಿ ವಿವಾದಾತ್ಮಕ ಸುದ್ದಿ ಪ್ರಕಟಿಸಿದೆ.

ಕೇಂದ್ರ ಸಚಿವ ನಿತಿನ್‌ ಗಡ್ಕರಿ ಸಂಜು ಸಿನಿಮಾ ಸುಂದರವಾದ ಸಿನಿಮಾ ಎಂದಿದ್ದರೆ, ಇತ್ತ ಪಾಂಚಜನ್ಯ ಸಂಜು ಚಿತ್ರವನ್ನು ಟೀಕಿಸಿ ಕವರ್‌ ಸ್ಟೋರಿಯೊಂದನ್ನು ಪ್ರಕಟಿಸಿದ್ದು, ಸಂಜುವಿನಂತ ಚಲನಚಿತ್ರಗಳು ಅಪರಾಧಿಗಳು ಮತ್ತು ಮಾಫಿಯಾವನ್ನು ವೈಭವೀಕರಿಸುತ್ತವೆ ಎಂದು ಹೇಳಿದೆ.

ಕಿರ್ದಾರ್‌, ದಾಘ್‌ದಾರ್‌ ಎಂಬ ಹೆಸರಿನಲ್ಲಿ ಸ್ಟೋರಿಯಲ್ಲಿ, ಈ ರೀತಿಯ ಸಿನಿಮಾಗಳು ಸಂಶಯಾಸ್ಪದ ಮೌಲ್ಯಗಳನ್ನು ಹರಡುತ್ತವೆ. ಹಾಗಾಗಿ ಚಲನ ಚಿತ್ರದ ಬಗ್ಗೆ ಒಂದು ಕವರ್‌ ಸ್ಟೋರಿ ಮಾಡಲು ನಿರ್ಧರಿಸಿದೆವು. ಸಂಜಯ್ ದತ್ ಏನು ಮಾಡಿದ್ದಾರೆ ಎನ್ನುವುದಕ್ಕಿಂತ ಆ ರೀತಿಯ ಮೌಲ್ಯಗಳನ್ನು ವೈಭವೀಕರಿಸುತ್ತಿದ್ದಾರೆ. ಸುದ್ದಿ ಸಂಸ್ಥೆಯಾಗಿ ನಾವು ನಮ್ಮ ಕರ್ತವ್ಯ ನಿಭಾಯಿಸಿದ್ದೇವೆ ಎಂದು ಭಾವಿಸಿದ್ದೇವೆ ಎಂದು ಪಾಂಚಜನ್ಯ ಪತ್ರಿಕೆಯ ಸಂಪಾದಕ ಹಿತೇಶ್‌ ಶಂಕರ್‌ ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿದ್ದಾರೆ.

ಇನ್ನು ಈ ಹಿಂದೆಯೂ ಕೂಡ ಆರ್‌ಎಸ್‌ಎಸ್‌ ಮುಖವಾಣಿ, ನಿರ್ದೇಶಕ ರಾಜ್‌ಕುಮಾರ್‌ ಹಿರಾನಿಯ ಪಿಕೆ ಸಿನಿಮಾವು ಹಿಂದು ಮೌಲ್ಯಗಳ ಮೇಲೆ ದಾಳಿ ಮಾಡುತ್ತಿದೆ ಎಂದು ಆರೋಪಿಸಿದ್ದರು. ಮುಂಬೈನ ಚಲನಚಿತ್ರ ನಿರ್ಮಾಪಕರು ‘ಡಿ-ಕಂಪನಿ, ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ ಮತ್ತು ರೇಯ್ಸ್ ನಂತಹ ಚಲನಚಿತ್ರಗಳನ್ನು ನಿರ್ಮಿಸುವ ಮೂಲಕ ಯಾವ ರೀತಿಯ ಸಂದೇಶವನ್ನು ನೀಡುತ್ತಿದ್ದಾರೆ ಎಂದು ಪ್ರಶ್ನಿಸಿತ್ತು.

ಇನ್ನು 1993ರ ಮುಂಬೈ ಬಾಂಬ್‌ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಆರೋಪದಲ್ಲಿ ಸಂಜಯ್‌ ದತ್‌ರನ್ನು ಬಂಧಿಸಲಾಗಿತ್ತು. 2016ರಲ್ಲಿ ಅವರು ಜೈಲಿನಿಂದ ಬಿಡುಗಡೆ ಹೊಂದಿದ್ದರು. (ಏಜೆನ್ಸೀಸ್)

Leave a Reply

Your email address will not be published. Required fields are marked *

Back To Top