More

    ಸಂಜಯ್​ ರಾವತ್​ ಹೇಳಿದ್ದು ಸತ್ಯ ಎಂದ ಮುಂಬೈನ ಮತ್ತೋರ್ವ ಅಂಡರ್​ವರ್ಲ್ಡ್ ಡಾನ್​ ದತ್ತುಪುತ್ರ; ಇನ್ನೊಂದು ಅಚ್ಚರಿಯ ವಿಷಯವನ್ನೂ ಹೊರಹಾಕಿದರು…

    ಮುಂಬೈ: ನಗರದ ಮೂವರು ಪ್ರಮುಖ ಅಂಡರ್​ವರ್ಲ್ಡ್​ ಡಾನ್​ಗಳಲ್ಲಿ ಕರೀಂ ಲಾಲ್​ನನ್ನು ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು ದಕ್ಷಿಣ ಮುಂಬೈನಲ್ಲಿ ಭೇಟಿಯಾಗಿದ್ದರು ಎಂದು ಶಿವಸೇನಾ ಮುಖಂಡ ಸಂಜಯ್​ ರಾವತ್​ ನೀಡಿದ ಹೇಳಿಕೆ ವಿವಾದವನ್ನೇ ಸೃಷ್ಟಿಸಿದೆ.

    ಹಿಂದೆ ಮುಂಬೈ ಮೇಲೆ ಅಂಡರ್​ವರ್ಲ್ಡ್​ ಪ್ರಭಾವ ಹೇಗಿತ್ತು ಎಂದು ಸ್ಥಳೀಯ ಮಾಧ್ಯಮವೊಂದಕ್ಕೆ ವಿವರಿಸುವಾಗ ಈ ಹೇಳಿಕೆ ನೀಡಿದ್ದರು. ಆದರೆ ಅದು ವಿವಾದಕ್ಕೆ ಕಾರಣವಾಗುತ್ತಲೇ ಸ್ಪಷ್ಟನೆ ನೀಡಿದ್ದ ಸಂಜಯ್​ ರಾವತ್​, ಇತಿಹಾಸ ತಿಳಿಯದವರು ನನ್ನ ಹೇಳಿಕೆಯನ್ನು ತಿರುಚಿದ್ದಾರೆ. ಕರೀಮ್​ ಲಾಲ್​ ಪಠಾಣ್ ಸಮುದಾಯದ ನಾಯಕರಾಗಿದ್ದು ಪಖ್ತುನ್​ ಇ-ಹಿಂದ್​ ಎಂಬ ಸಂಘಟನೆಯ ನೇತೃತ್ವ ವಹಿಸಿ ಅತ್ಯಂತ ಪ್ರಭಾವಶಾಲಿ ಎನಿಸಿಕೊಂಡಿದ್ದರು. ಹಾಗಾಗಿ ಅನೇಕ ರಾಜಕೀಯ ವ್ಯಕ್ತಿಗಳನ್ನು ಭೇಟಿಯಾಗುವ ಅವಕಾಶ ಅವರಿಗೆ ಸಿಕ್ಕಿತ್ತು. ಅದರಲ್ಲಿ ಇಂದಿರಾಗಾಂಧಿ ಕೂಡ ಒಬ್ಬರು ಎಂದು ಹೇಳಿದ್ದರು.

    ಅಷ್ಟೇ ಅಲ್ಲದೆ ಕಾಂಗ್ರೆಸ್​ ನಾಯಕರಿಗೆ ನನ್ನ ಹೇಳಿಕೆಯಿಂದ ನೋವಾಗಿದ್ದರೆ ನಾನದನ್ನು ವಾಪಸ್​ ಪಡೆಯುತ್ತೇನೆ ಎಂದೂ ತಿಳಿಸಿದ್ದರು.

    ಈಗ ಕರೀಮ್​ ಲಾಲ್​ನ ಸಮಕಾಲೀನ, ಮುಂಬೈನ ಇನ್ನೋರ್ವ ಅಂಡರ್​ವರ್ಲ್ಡ್​ ಡಾನ್​ ಆಗಿದ್ದ, ಹಾಜಿ ಮುಸ್ತಾನ್​ ಅವರ ದತ್ತುಪುತ್ರ ಸುಂದರ್​ ಶೇಖರ್ ಅವರು ಸಂಜಯ್ ರಾವತ್​ ಹೇಳಿಕೆಯನ್ನು ಪುಷ್ಠೀಕರಿಸಿದ್ದಾರೆ.
    ಸಂಜಯ್​ ರಾವತ್​ ಹೇಳಿದ್ದು ಸರಿಯಾಗಿಯೇ ಇದೆ. ಇಂದಿರಾ ಗಾಂಧಿ ಕರೀಂ ಲಾಲ್​ನನ್ನು ಭೇಟಿ ಮಾಡಿದ್ದರು. ಬರೀ ಇಂದಿರಾಗಾಂಧಿಯಷ್ಟೇ ಅಲ್ಲ. ಹಲವು ರಾಜಕೀಯ ವ್ಯಕ್ತಿಗಳು ಅಂಡರ್​ವಲ್ಡ್ ಡಾನ್​ಗಳನ್ನು ಭೇಟಿಯಾಗಲು ಬರುತ್ತಿದ್ದರು. ಹಾಜಿ ಮುಸ್ತಾನ್​ ಉದ್ಯಮಿಯೂ ಆಗಿದ್ದರು. ಶಿವಸೇನಾ ಸಂಸ್ಥಾಪಕ ಬಾಳಾಸಾಹೇಬ್​ ಠಾಕ್ರೆ ಅವರು ಹಾಜಿ ಮುಸ್ತಾನ್​ಗೆ ಒಳ್ಳೆಯ ಸ್ನೇಹಿತರು ಆಗಿದ್ದರು ಎಂದು ಮತ್ತೊಂದು ಅಚ್ಚರಿಯ ವಿಷಯವನ್ನು ಸುಂದರ್​ ಶೇಖರ್​ ಹೊರಹಾಕಿದ್ದಾರೆ. (ಏಜೆನ್ಸೀಸ್​)

     ಇದನ್ನೂ ಓದಿ: ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಮುಂಬೈ ಡಾನ್​ ಕರೀಮ್​ ಲಾಲ್​ರನ್ನು ಭೇಟಿಯಾಗಿದ್ದರು: ಸಂಜಯ್​ ರಾವತ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts