ನವದೆಹಲಿ: ಆಸ್ಟ್ರೆಲಿಯಾ ಪ್ರವಾಸಕ್ಕೆ ಮುನ್ನ ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವುದಕ್ಕೆ ಮಾಜಿ ಕ್ರಿಕೆಟಿಗ ಹಾಗೂ ವೀಕ್ಷಕವಿವರಣೆಕಾರ ಸಂಜಯ್ ಮಂಜ್ರೇಕರ್ ಕಿಡಿಕಾರಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡುವ ವೇಳೆ ಸರಿಯಾದ ನಡವಳಿಕೆ ತೋರಲು ಮತ್ತು ಪದಗಳನ್ನು ಬಳಸಲು ಗಂಭೀರ್ಗೆ ತಿಳಿದಿಲ್ಲ. ಹೀಗಾಗಿ ಬಿಸಿಸಿಐ ಅವರನ್ನು ಇನ್ನು ಮುಂದೆ ಮಾಧ್ಯಮಗಳಿಂದ ದೂರವಿಡಬೇಕು ಎಂದು ಮಂಜ್ರೇಕರ್ ಹೇಳಿದ್ದಾರೆ.
“ಈಗಷ್ಟೇ ಗಂಭೀರ್ ಸುದ್ದಿಗೋಷ್ಠಿ ವೀಸಿದೆ. ಬಿಸಿಸಿಐ ಅವರನ್ನು ಮಾಧ್ಯಮಗಳಿಂದ ದೂರವಿಟ್ಟು, ಹಿನ್ನೆಲೆ ಕೆಲಸಗಳಲ್ಲಿ ತೊಡಗಿಕೊಳ್ಳುವಂತೆ ಮಾಡುವುದು ಉತ್ತಮ. ನಾಯಕ ರೋಹಿತ್ ಶರ್ಮ ಮತ್ತು ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ಗೆ ಮಾತ್ರ ಮಾಧ್ಯಮಗಳೊಂದಿಗೆ ಮಾತನಾಡಲು ಬಿಡಬೇಕು’ ಎಂದು ಮಂಜ್ರೇಕರ್, ಗಂಭೀರ್ ಸುದ್ದಿಗೋಷ್ಠಿಯ ಬೆನ್ನಲ್ಲೇ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
ಅಣಕು ಹರಾಜಿನಲ್ಲಿ 20 ಕೋಟಿ ರೂ.ಗೆ ಆರ್ಸಿಬಿ ಪಾಲಾದ ಕೆಎಲ್ ರಾಹುಲ್!
TAGGED:Cricket