ಛೂ ಮಂತ್ರ ಕಾಳಿ ಸಂಜನಾ

ಬೆಂಗಳೂರು: ಇತ್ತೀಚೆಗಷ್ಟೇ ಹಿರಿಯ ನಟ ಅನಂತ್​ನಾಗ್ ಜತೆ ‘ವೀಕೆಂಡ್’ ಸಿನಿಮಾದಲ್ಲಿ ನಟಿಸಿದ್ದ ಸಂಜನಾ ಬುರ್ಲಿ ಸದ್ದಿಲ್ಲದೆ ಕಾಲಿವುಡ್​ಗೆ ಕಾಲಿಟ್ಟು ಡಾರ್ಕ್ ಕಾಮಿಡಿ ಶೈಲಿಯ ಸಿನಿಮಾವೊಂದರಲ್ಲಿ ನಟಿಸಿ ಬಂದಿದ್ದಾರೆ. ಆ ಚಿತ್ರದ ಹೆಸರು ‘ಛೂ ಮಂತ್ರ ಕಾಳಿ. ಬ್ಲಾಕ್ ಮ್ಯಾಜಿಕ್ ಹಿನ್ನೆಲೆಯಲ್ಲಿ ಸಾಗá-ವ ಕಥೆ ಇದಾಗಿದ್ದು, ಮಾಟ ಮಂತ್ರವನ್ನು ಸಿದ್ಧಿಸಿಕೊಂಡ ಹಳ್ಳಿಯ ಹá-ಡá-ಗಿಯಾಗಿ ಸಂಜನಾ ಕಾಣಿಸಿಕೊಂಡಿದ್ದಾರೆ. ರೆಕ್ಕಾ’ ಚಿತ್ರದಲ್ಲಿ ಪೋಷಕ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದ ಕಾರ್ತಿಕೇಯನ್ ವೇಲು ಈ ಚಿತ್ರದ ಮೂಲಕ ನಾಯಕನಾಗಿ ಬಡ್ತಿ ಪಡೆಯá-ತ್ತಿದ್ದಾರೆ. ಜತೆಗೆ ಚಿತ್ರ ನಿರ್ವಣದಲ್ಲಿ ಪಾಲá-ದಾರಿಕೆ ಹೊಂದಿದ್ದಾರೆ. ಕಾಲಿವುಡ್​ಗೆ ಕಾಲಿಡುತ್ತಿರುವಾಗಲೇ ‘ಛೂ ಮಂತ್ರ ಕಾಳಿಯಂಥ ಭಿನ್ನ ಸಿನಿಮಾ ಸಿಕ್ಕಿದ್ದಕ್ಕೆ ಖá-ಷಿಯಲ್ಲಿದ್ದಾರೆ ಸಂಜನಾ. ‘ಮೊದಲು ಈ ಸಿನಿಮಾದಲ್ಲಿ ನಟಿಸá-ವಂತೆ ತ್ರಿಷಾಗೆ ನಿರ್ದೇಶಕರು ಅಪ್ರೋಚ್ ಮಾಡಿದ್ದರು. ಕೊನೆಗೆ ಆ ಅವಕಾಶ ನನಗೆ ಸಿಕ್ಕಿತá-. ಹಳ್ಳಿ ಹುಡá-ಗಿಯಾಗಿ, ಒಂದೊಳ್ಳೆಯ ಉದ್ದೇಶಕ್ಕೆ ಮಾಟ ಮಂತ್ರ ಮಾಡುವ ಪಾತ್ರ ನನ್ನದು. ಕೆಟ್ಟವರಿಗೆ ಕೆಟ್ಟವಳು, ಒಳ್ಳೆಯವರಿಗೆ ಒಳ್ಳೆಯವಳಾಗಿ ನಾನá- ಕಾಣಿಸಿಕೊಳ್ಳಲಿದ್ದೇನೆ’ ಎಂದು ಪಾತ್ರದ ಬಗ್ಗೆ ಹೇಳಿಕೊಳ್ಳುತ್ತಾರೆ

ಸಂಜನಾ. ಅಂದಹಾಗೆ, ಮೊದಲ ಬಾರಿಗೆ ತಮಿಳು ಸಿನಿಮಾದಲ್ಲಿ ನಟಿಸುತ್ತಿರುವುದಕ್ಕೆ ಅವರಿಗೆ ಏನಾದರೂ ಅಳುಕು ಇದೆಯೇ? ಈ ಪ್ರಶ್ನೆಗೆ ‘ಕಿಂಚಿತ್ತೂ ಇಲ್ಲ’ ಎಂಬ ಉತ್ತರ ಅವರಿಂದ ಬರುತ್ತದೆ. ‘ಮೊದಲ ಸಿನಿಮಾ, ಹೊಸ ಇಂಡಸ್ಟ್ರಿ ಆಗಿದ್ದಕ್ಕೆ ಭಯ ಇತ್ತೇ ಹೊರತು ನಟನೆ ವಿಚಾರದಲ್ಲಿ

ಹಾಗಾಗಲಿಲ್ಲ. ಆರಂಭದಲ್ಲಿ ಕಾರ್ಯಾಗಾರಗಳಲ್ಲಿ ಭಾಗವಹಿಸಿದೆ. ಬಳಿಕ 35 ದಿನಗಳಲ್ಲಿ ಸಿನಿಮಾ ಮುಗಿಸಿ ಬಂದೆ. ಸೆಟ್​ನಲ್ಲಿ ಚಿತ್ರದ ಬಹá-ತೇಕ ಶೂಟಿಂಗ್ ಮಾಡಲಾಗಿದೆ’ ಎಂದು ಮಾಹಿತಿ ನೀಡುತ್ತಾರೆ. ಸದ್ಯ ಕನ್ನಡದಲ್ಲಿ ರಾಧಾ ರ್ಸಂಗ್, ರಮಣ ಮಿಸ್ಸಿಂಗ್​’ ಚಿತ್ರದಲ್ಲಿ ಸಂಜನಾ ನಟಿಸá-ತ್ತಿದ್ದಾರೆ. ಅವರಿಗೆ ವೃತ್ತಿಯಲ್ಲಿ ಛಾಯಾಗ್ರಾಹಕರಾಗಿರá-ವ ರಾಘವ್ ನಾಯಕ. ಎಂ. ಶ್ರೀಕಾಂತ್ ನಿರ್ದೇಶನದಲ್ಲಿ ಮೂಡಿಬರá-ತ್ತಿರá-ವ ಈ ಸಿನಿಮಾದಲ್ಲಿ ಕ್ರಿ್ಚಶಿಯನ್ ಹುಡá-ಗಿಯಾಗಿ ಸಂಜನಾ ಕಾಣಿಸಿಕೊಳ್ಳಲಿದ್ದಾರೆ. ಜತೆಗೆ ‘ಸ್ಟೀಲ್ ಪಾತ್ರೆ ಸಾಮಾನು’ ಚಿತ್ರದಲ್ಲಿಯೂ ಸಂಜನಾ ನಟಿಸಿದ್ದಾರೆ.

Leave a Reply

Your email address will not be published. Required fields are marked *