ಗಂಗಾವತಿ: ಸರ್ವ ಸದಸ್ಯರ ವಿಶ್ವಾಸದೊಂದಿಗೆ ನಗರದ ಅಭಿವೃದ್ಧಿಗೆ ಶ್ರಮಿಸಿಲಾಗುವುದು. ಹಾಗೂ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ನಗರಸಭೆ ವಿಪಕ್ಷ ನಾಯಕ ಮನೋಹರಸ್ವಾಮಿ ಹಿರೇಮಠ ಹೇಳಿದರು.
ಇದನ್ನೂ ಓದಿ: ಕ್ಷೇತ್ರದ ಅಭಿವೃದ್ಧಿಗೆ ಸದಾ ಬದ್ಧ
ನಗರಸಭೆಯಲ್ಲಿ ಆಯೋಜಿಸಿದ್ದ ಅಧಿಕಾರ ಸ್ವೀಕಾರ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು. ಜಿಲ್ಲೆಯಲ್ಲಿ ಅತಿಹೆಚ್ಚು ಆದಾಯ ಮತ್ತು ಜನಸಂಖ್ಯೆ ಹೊಂದಿರುವ ನಗರದ ನೈರ್ಮಲೀಕರಣಕ್ಕೆ ಆದ್ಯತೆ ನೀಡಲಾಗುತ್ತಿದ್ದು, ಸಮರ್ಪಕ ಅನುದಾನ ಬಳಕೆಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗುವುದು.
ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಮಾರ್ಗದರ್ಶನದಂತೆ ನಗರದ ಎಲ್ಲ ವಾರ್ಡ್‌ಗಳ ಅಭಿವೃದ್ಧಿಗೆ ಶ್ರಮಿಸಲಾಗುವುದು. ಆಡಳಿತ ವ್ಯವಸ್ಥೆಯಲ್ಲಿ ಲೋಪ ಕಂಡು ಬಂದಲ್ಲಿ ಅಧಿಕಾರಿಗಳನ್ನು ಎಚ್ಚರಿಸುವ ಕೆಲಸ ಮಾಡಲಾಗುವುದು. ತಾರತಮ್ಯ ನೀತಿ ಅನುಸರಿಸಲ್ಲ. ಕುಡಿವ ನೀರು, ನೈರ್ಮಲೀಕರಣ ಮತ್ತು ರಸ್ತೆ ಅಭಿವೃದ್ಧಿಗೆ ಮೊದಲ ಪ್ರಾಶಸ್ತ್ಯ ನೀಡಲಾಗುವುದು ಎಂದರು.
ಕಚೇರಿಯಲ್ಲಿ ಪೂಜೆ ಸಲ್ಲಿಸುವ ಮೂಲಕ ಅಧಿಕಾರ ಸ್ವೀಕರಿಸಿದ್ದು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತ್ತು ನಗರಸಭೆ ಸದಸ್ಯರು ಭಾಗವಹಿಸಿ ಸನ್ಮಾನಿಸಿದರು. ನಗರಸಭೆ ಸದಸ್ಯರಾದ ಸುನೀತಾ ಶ್ಯಾವಿ, ಹುಲಿಗೆಮ್ಮ ಕಿರಿಕಿರಿ, ಎ್.ರಾಘವೇಂದ್ರ, ಖಾಸೀಂಸಾಬ್ ಗದ್ವಾಲ್, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾ ಉಪಾಧ್ಯಕ್ಷ ಎಸ್.ಬಿ.ಖಾದ್ರಿ, ತಾಲೂಕಾಧ್ಯಕ್ಷ ಕೆ.ವಿ.ಬಾಬು,
ಎಪಿಎಂಸಿ ಮಾಜಿ ಸದಸ್ಯರಾದ ಯಮನಪ್ಪ ಗಡ್ಡಿ, ಸಣ್ಣಕ್ಕಿ ನೀಲಪ್ಪ, ಪಿಎಸ್ಸೆಸ್ಸೆನ್ ನಿರ್ದೇಶಕ ವಿಶ್ವನಾಥ ಮಾಲಿಪಾಟೀಲ್, ಪ್ರಮುಖರಾದ ಗಿರೀಶ್ ಗಾಯಕ್ವಾಡ್, ಪರಶುರಾಂ ಕಿರಿಕಿರಿ, ಜವಳಗೇರಾ ಹುಸೇನ್ ಪೀರಾ ಇತರರಿದ್ದರು.