ಕಾಲೇಜು ಆವರಣದಲ್ಲಿ 4 ಸಾವಿರಕ್ಕೂ ಹೆಚ್ಚು ಸ್ಯಾನಿಟರಿ ನ್ಯಾಪ್​ಕಿನ್​ಗಳು ಚೆಲ್ಲಾಪಿಲ್ಲಿ

ರಾಯಚೂರು: ಲಿಂಗಸಗೂರು ಸರ್ಕಾರಿ ಪದವಿ ಪೂರ್ವ ಕಾಲೇಜು ಬಳಿ ಸುಮಾರು ನಾಲ್ಕು ಸಾವಿರ ಶುಚಿ ಸ್ಯಾನಿಟರಿ ನ್ಯಾಪ್​ಕಿನ್​ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.

ಕರ್ನಾಟಕ ಸರ್ಕಾರದಿಂದ ಮಹಿಳೆಯರಿಗೆ ಉಚಿತವಾಗಿ ನೀಡುವ ನ್ಯಾಪ್​ಕಿನ್​ಗಳು ಕಾಲೇಜು ಆವರಣದಲ್ಲಿ ಎಲ್ಲೆಂದರಲ್ಲಿ ಬಿದ್ದಿವೆ. ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ನಿರ್ಲಕ್ಷ್ಯದಿಂದ ಬಡ ಹೆಣ್ಣು ಮಕ್ಕಳಿಗೆ ಸಿಗಬೇಕಾಗಿದ್ದ ಶುಚಿ ನ್ಯಾಪ್​ಕಿನ್​ಗಳು ಬೀದಿಪಾಲಾಗಿವೆ.

ಸರ್ಕಾರದ ನಿಯಮದ ಪ್ರಕಾರ ಉಳಿಯುವ ಪ್ಯಾಡ್​ಗಳನ್ನು ಸುಡಬೇಕು ಅಥವಾ ಭೂಮಿಯಲ್ಲಿ ಹೂಳಬೇಕು. ಆದರೆ, ಈ ಪ್ಯಾಡ್​ಗಳನ್ನು ಫಲಾನುಭವಿಗಳಿಗೂ ನೀಡದೆ ಹೀಗೆ ಸಾರ್ವಜನಿಕರು ಓಡಾಡುವ ಸ್ಥಳದಲ್ಲಿ ಬೇಕಾಬಿಟ್ಟಿ ಎಸೆದಿದ್ದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.