ನವದೆಹಲಿ: ಭಾರತೀಯ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಮತ್ತು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಹೆಬ್ ಮಲಿಕ್ ಕ್ರೀಡಾಲೋಕದ ಅತ್ಯಂತ ಸುಂದರವಾದ ಜೋಡಿ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಸಾಂಪ್ರದಾಯಿಕ ಎದುರಾಳಿಗಳ ಪ್ರೇಮವಿವಾಹವು ಸಾಕಷ್ಟು ಚರ್ಚೆಗೆ ಎಡೆಮಾಡಿಕೊಟ್ಟರೂ ಎಲ್ಲ ವಿವಾದಗಳಲ್ಲಿ ಬದಿಗೊತ್ತಿ 2010ರಲ್ಲಿ ಇಬ್ಬರು ಮದುವೆ ಆಗಿದ್ದಾರೆ. ದಂಪತಿಗೆ ಇಜಾನ್ ಮಿರ್ಜಾ ಮಲ್ಲಿಕ್ ಹೆಸರಿನ ಮಗನಿದ್ದಾನೆ.
ತಾರಾ ದಂಪತಿಗೆ ಸಂಬಂಧಿಸಿದಂತೆ ಹೊಸದೊಂದು ವದಂತಿ ಹರಿದಾಡುತ್ತಿದ್ದು, ಅದನ್ನು ಕೇಳಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಸಾನಿಯಾ ಮತ್ತು ಶೋಯೆಬ್ ತಮ್ಮ ವೈವಾಹಿಕ ಜೀವನದಿಂದ ಬೇರೆ ಬೇರೆಯಾಗಲಿದ್ದಾರೆ ಎಂಬ ಸಂಗತಿ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. ಸದ್ಯ ಇಬ್ಬರು ಪ್ರತ್ಯೇಕವಾಗಿ ವಾಸಿಸುತ್ತಿದ್ದು, ಮಗ ಇಜಾನ್ಗೆ ಸಹ-ಪೋಷಕರಾಗಿದ್ದಾರೆ ಎನ್ನಲಾಗುತ್ತಿದೆ.
ಪ್ರತ್ಯೇಕತೆಗೆ ನಿರ್ದಿಷ್ಟ ಕಾರಣ ತಿಳಿದಿಲ್ಲವಾದರೂ, ಶೋಯೆಬ್, ಸಾನಿಯಾಗೆ ಮೋಸ ಮಾಡಿದ್ದಾರೆ ಎಂದು ಕೆಲವು ಪಾಕಿಸ್ತಾನಿ ಮಾಧ್ಯಮ ವರದಿ ಮಾಡಿವೆ. ಆದರೆ, ಈ ಸುದ್ದಿಗೆ ಸಾನಿಯಾ ಆಗಲಿ ಅಥವಾ ಶೋಯೆಬ್ ಆಗಲಿ ಇನ್ನೂ ಪ್ರತಿಕ್ರಿಯಿಸಿಲ್ಲ.ಕಠಿಣ ದಿನಗಳು ಮತ್ತು ಒಡೆದ ಹೃದಯಗಳು ಎಂದು ಇತ್ತೀಚಿನ ಇನ್ಸ್ಟಾಗ್ರಾಂ ಪೋಸ್ಟ್ನಲ್ಲಿ ಸಾನಿಯಾ ಬರೆದಿರುವುದು ವದಂತಿಗೆ ಮತ್ತಷ್ಟು ಪುಷ್ಟಿ ನೀಡಿದೆ. ಕಳೆದ ಶುಕ್ರವಾರ ಇಝಾನ್ ಜೊತೆಗಿನ ಮುದ್ದಾದ ಫೋಟೋವನ್ನು ಹಂಚಿಕೊಂಡಿರುವ ಸಾನಿಯಾ, ಕಠಿಣ ದಿನಗಳಲ್ಲಿ ನನ್ನನ್ನು ಪಡೆಯುವ ಕ್ಷಣಗಳು ಎಂದು ಬರೆದಿದ್ದಾರೆ.
ಶೋಯೆಬ್ ಮತ್ತು ಸಾನಿಯಾ ಇತ್ತೀಚೆಗಷ್ಟೇ ದುಬೈನಲ್ಲಿ ಇಜಾನ್ ಅವರ ನಾಲ್ಕನೇ ಹುಟ್ಟುಹಬ್ಬವನ್ನು ಆಚರಿಸಿದರು. ಬರ್ತಡೇ ಪಾರ್ಟಿಯ ಅನೇಕ ಫೋಟೋಗಳನ್ನು ಶೋಯೆಬ್ ಹಂಚಿಕೊಂಡರೆ, ಸಾನಿಯಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಯಾವುದನ್ನೂ ಹಂಚಿಕೊಂಡಿಲ್ಲದಿರುವುದು ಈ ಅನುಮಾಗಳಿಗೆ ಕಾರಣವಾಗಿದೆ.
ಪಾಕಿಸ್ತಾನಿ ಕ್ರಿಕೆಟ್ ಶೋಗಳಲ್ಲಿ ಒಂದಾದ ‘ಆಸ್ಕ್ ದಿ ಪೆವಿಲಿಯನ್’ ಕಾರ್ಯಮದಲ್ಲಿ ಶೋಯೆಬ್ ಮಲಿಕ್ ಅತಿಥಿಯಾಗಿ ಭಾಗವಹಿಸಿದ್ದರು. ಈ ವೇಳೆ ಅವರಿಗೆ ಸಾನಿಯಾ ಮಿರ್ಜಾ ಅವರ ಟೆನಿಸ್ ಅಕಾಡೆಮಿಗಳು ಮತ್ತು ಅವುಗಳ ಸ್ಥಳಗಳ ಬಗ್ಗೆ ಪ್ರಶ್ನಿಸಲಾಯಿತು. ಇದಕ್ಕೆ ಉತ್ತರಿಸಿದ ಶೋಯೆಬ್, ನಿಜವಾಗಿಯೂ ನನಗೆ ಸ್ಥಳಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲ ಎಂದರು. ಅಲ್ಲದೆ, ನಾನು ಅಂತಹ ಯಾವುದೇ ಅಕಾಡೆಮಿಗಳಿಗೆ ಹೋಗಿಲ್ಲ ಎಂದು ಶೋಯೆಬ್ ಹೇಳಿದ್ದನ್ನು ಕೇಳಿ ಕಾರ್ಯಕ್ರಮದ ನಿರೂಪಕ ವಾಕರ್ ಯೂನಸ್ ಆಘಾತಕ್ಕೊಳಗಾದರು ಮತ್ತು ನೀವು ಯಾವ ರೀತಿಯ ಗಂಡ? ಎಂದು ಪ್ರಶ್ನೆ ಮಾಡಿದರು.
ಅಂದಹಾಗೆ ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲಿಕ್ 2010ರ ಏಪ್ರಿಲ್ 12ರಂದು ಹೈದರಾಬಾದ್‌ನಲ್ಲಿರುವ ತಾಜ್ ಕೃಷ್ಣ ಹೋಟೆಲ್‌ನಲ್ಲಿ ಸಾಂಪ್ರದಾಯಿಕ ಹೈದರಾಬಾದಿ ಮುಸ್ಲಿಂ ಸಂಪ್ರದಾಯದಂತೆ ವಿವಾಹವಾದರು. ಇದಾದ ನಂತರ ಪಾಕಿಸ್ತಾನಿ ಪದ್ಧತಿಯಂತೆ ಪಾಕಿಸ್ತಾನದ ಸಿಯಾಲ್‌ಕೋಟ್‌ನಲ್ಲಿ ಮದುವೆ ನಡೆಯಿತು. (ಏಜೆನ್ಸೀಸ್)
18 ಶಾಸಕರನ್ನು ಬಲೆಗೆ ಕೆಡವಿದ ಹನಿಟ್ರ್ಯಾಪ್ ಕ್ವೀನ್ ಅರ್ಚನಾಳ ಹಣದ ವ್ಯವಹಾರ ಕಂಡು ದಂಗಾದ ಇಡಿ ಅಧಿಕಾರಿಗಳು!
ಚೀನಾದಿಂದ ಮತ್ತೊಂದು ಮಾರಕ ವೈರಸ್ ತಯಾರಿಕೆ?: ಪಾಕಿಸ್ತಾನದ ರಾವಲ್ಪಿಂಡಿ ಸಮೀಪ ರಹಸ್ಯ ಪ್ರಯೋಗಾಲಯ