ಶೋಯೆಬ್​ ಜತೆ ಡಿವೋರ್ಸ್!​ ವದಂತಿಗೆ ಪುಷ್ಟಿ ನೀಡಿದ ಮತ್ತೊಂದು ನೋವಿನ ಪೋಸ್ಟ್​

blank

ನವದೆಹಲಿ: ಭಾರತೀಯ ಟೆನ್ನಿಸ್​ ತಾರೆ ಸಾನಿಯಾ ಮಿರ್ಜಾ (Sania Mirza) ಮತ್ತು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಹೆಬ್​ ಮಲಿಕ್ (Shoib Malik) ವೈವಾಹಿಕ ಜೀವನದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ನಿನ್ನೆಯಿಂದ ಹರಿದಾಡುತ್ತಿದೆ. ಇದರ ಬೆನ್ನಲ್ಲೇ ಸಾನಿಯಾ ಪೋಸ್ಟ್​ ಮಾಡಿರುವ ಇನ್​ಸ್ಟಾಗ್ರಾಂ ಸ್ಟೋರಿ ವದಂತಿಗೆ ಮತ್ತಷ್ಟು ಪುಷ್ಟಿ ನೀಡಿದ್ದು, ಸ್ಟಾರ್​ ದಂಪತಿ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಅನುಮಾನ ಗಟ್ಟಿಯಾಗಿದೆ.​

ಅವಿನಾಶ್​ ಆರ್ಯನ್​ ಎಂಬುವರ ಸಾನಿಯಾರ ಇನ್​ಸ್ಟಾಗ್ರಾಂ ಸ್ಟೋರಿಯನ್ನು ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಅದರಲ್ಲಿ ಬರೆದಿರುವ ಸಾಲುಗಳ ಸಾರಾಂಶ ಈ ಮುಂದಿನಂತಿದೆ. “ಒಡೆದ ಹೃದಯಗಳು ಎಲ್ಲಿಗೆ ಹೋಗುತ್ತವೆ? ಅಲ್ಲಾನನ್ನು ಹುಡುಕಲು” ಎಂದು ಸಾನಿಯಾ ಮಾರ್ಮಿಕವಾಗಿ ಬರೆದುಕೊಂಡಿದ್ದಾರೆ. ಅಲ್ಲದೆ, ಕೊನೆಯಲ್ಲಿ ನಂಬಿಕೆಯ ಸೇವಕ ಎಂದು ಉಲ್ಲೇಖಿಸಿದ್ದಾರೆ. ಇದೀಗ ಈ ಸ್ಟೋರಿ ವೈರಲ್​ ಆಗುತ್ತಿದ್ದು, ಅಭಿಮಾನಿಗಳಲ್ಲಿ ಆತಂಕ ಹೆಚ್ಚಾಗಿದೆ. ಇಬ್ಬರ ನಡುವಿನ ಸಂಬಂಧದ ಬಗ್ಗೆ ಇನ್ನಷ್ಟು ಚರ್ಚೆಯಾಗುತ್ತಿದೆ.

https://twitter.com/AvinashArya09/status/1589240377487556608?s=20&t=-o4Jh2932MzQ3C54INfIBA

ಅಂದಹಾಗೆ ಸಾನಿಯಾ ಮತ್ತು ಮಲಿಕ್​, ಕ್ರೀಡಾಲೋಕದ ಅತ್ಯಂತ ಸುಂದರವಾದ ಜೋಡಿ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಸಾಂಪ್ರದಾಯಿಕ ಎದುರಾಳಿ (India vs Pakistan) ಗಳ ಆಟಗಾರರಿಬ್ಬರ ಪ್ರೇಮವಿವಾಹವು ಸಾಕಷ್ಟು ಚರ್ಚೆಗೆ ಎಡೆಮಾಡಿಕೊಟ್ಟರೂ ಎಲ್ಲ ವಿವಾದಗಳನ್ನು ಬದಿಗೊತ್ತಿ 2010ರಲ್ಲಿ ಇಬ್ಬರೂ ಮದುವೆ ಆಗಿದ್ದಾರೆ. ದಂಪತಿಗೆ ಇಜಾನ್​ ಮಿರ್ಜಾ ಮಲ್ಲಿಕ್ (Izan Mirza Malik) ಹೆಸರಿನ ಮಗನಿದ್ದಾನೆ. ಸದ್ಯ ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದು, ಮಗ ಇಜಾನ್​ಗೆ ಸಹ-ಪೋಷಕರಾಗಿದ್ದಾರೆ ಎನ್ನಲಾಗುತ್ತಿದೆ.

ಇಬ್ಬರ ನಡುವೆ ಏನು ನಡೆದಿದೆ ಎಂಬುದು ಯಾರಿಗೂ ತಿಳಿದಿಲ್ಲ. ಆದರೆ, ಶೋಯೆಬ್ (Shoib), ತನ್ನ ಟಿವಿ ಶೋನಲ್ಲಿ ಸಾನಿಯಾಗೆ (Sania Mirza) ಮೋಸ ಮಾಡಿದ್ದಾರೆ ಎಂದು ಕೆಲವು ಪಾಕಿಸ್ತಾನಿ ಮಾಧ್ಯಮಗಳು ವರದಿ ಮಾಡಿವೆ. ಆದರೆ, ಈ ಸುದ್ದಿಗೆ ಸಾನಿಯಾ (Sania) ಆಗಲಿ ಅಥವಾ ಶೋಯೆಬ್ (Shoib)​ ಆಗಲಿ ಇನ್ನೂ ಪ್ರತಿಕ್ರಿಯಿಸಿಲ್ಲ. ಇದೀಗ ಅವರ ಹೇಳಿಕೆಗಳ ಮೇಲೆ ಎಲ್ಲವೂ ನಿರ್ಧಾರವಾಗುತ್ತದೆ. ಹೀಗಾಗಿ ಅಭಿಮಾನಿಗಳು ಇಬ್ಬರ ಹೇಳಿಕೆಗಾಗಿ ಎದುರು ನೋಡುತ್ತಿದ್ದಾರೆ.

ಬ್ರೇಕಪ್​ ಸುದ್ದಿ ಹರಡಲು ಕಾರಣವೇನು?
ಇತ್ತೀಚೆಗೆ Sania Mirza ಇನ್​ಸ್ಟಾಗ್ರಾಂನಲ್ಲಿ ಒಂದು ಪೋಸ್ಟ್​ ಹಾಕಿದ್ದರು. ಅದರಲ್ಲಿ “ಕಠಿಣ ದಿನಗಳು ಮತ್ತು ಒಡೆದ ಹೃದಯಗಳು” ಎಂದು ಬರೆದುಕೊಂಡಿದ್ದರು. ಅಲ್ಲಿಂದಾಚೆಗೆ ಇಬ್ಬರ ಬ್ರೇಕಪ್​ (Breakup) ವದಂತಿ ಹರಡಲು ಆರಂಭವಾಗಿದೆ. ಕಳೆದ ಶುಕ್ರವಾರ ಇಝಾನ್ ಜೊತೆಗಿನ ಮುದ್ದಾದ ಫೋಟೋವನ್ನು ಹಂಚಿಕೊಂಡಿರುವ ಸಾನಿಯಾ, ಕಠಿಣ ದಿನಗಳಲ್ಲಿ ನನ್ನನ್ನು ಪಡೆಯುವ ಕ್ಷಣಗಳು ಎಂದು ಬರೆದಿದ್ದಾರೆ. ಇಷ್ಟೇ ಅಲ್ಲದೆ, ಶೋಯೆಬ್ ಮತ್ತು ಸಾನಿಯಾ ಇತ್ತೀಚೆಗಷ್ಟೇ ದುಬೈನಲ್ಲಿ ಇಜಾನ್‌ನ (Izan Mirza Malik) ನಾಲ್ಕನೇ ಹುಟ್ಟುಹಬ್ಬವನ್ನು ಆಚರಿಸಿದರು. ಬರ್ತಡೇ ಪಾರ್ಟಿಯ ಅನೇಕ ಫೋಟೋಗಳನ್ನು ಶೋಯೆಬ್​ ಹಂಚಿಕೊಂಡರೆ, ಸಾನಿಯಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಯಾವುದನ್ನೂ ಹಂಚಿಕೊಂಡಿಲ್ಲ ಇದು ಅನುಮಾನಗಳಿಗೆ ಕಾರಣವಾಗಿದೆ.

View this post on Instagram

A post shared by Sania Mirza (@mirzasaniar)

ಪಾಕಿಸ್ತಾನಿ ಕ್ರಿಕೆಟ್ ಶೋಗಳಲ್ಲಿ ಒಂದಾದ ‘ಆಸ್ಕ್ ದಿ ಪೆವಿಲಿಯನ್’ ಕಾರ್ಯಮದಲ್ಲಿ ಶೋಯೆಬ್ ಮಲಿಕ್ (Shoib Malik) ಅತಿಥಿಯಾಗಿ ಭಾಗವಹಿಸಿದ್ದರು. ಈ ವೇಳೆ ಅವರಿಗೆ ಸಾನಿಯಾ ಮಿರ್ಜಾ (Sania Mirza) ಅವರ ಟೆನಿಸ್ ಅಕಾಡೆಮಿಗಳು ಮತ್ತು ಅವುಗಳ ಸ್ಥಳಗಳ ಬಗ್ಗೆ ಪ್ರಶ್ನಿಸಲಾಯಿತು. ಇದಕ್ಕೆ ಉತ್ತರಿಸಿದ ಶೋಯೆಬ್​, ನಿಜವಾಗಿಯೂ ನನಗೆ ಸ್ಥಳಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲ ಎಂದರು. ಅಲ್ಲದೆ, ನಾನು ಅಂತಹ ಯಾವುದೇ ಅಕಾಡೆಮಿಗಳಿಗೆ ಹೋಗಿಲ್ಲ ಎಂದು ಶೋಯೆಬ್ ಹೇಳಿದ್ದನ್ನು ಕೇಳಿ ಕಾರ್ಯಕ್ರಮದ ನಿರೂಪಕ ವಾಕರ್​ ಯೂನಸ್​ ಆಘಾತಕ್ಕೊಳಗಾದರು ಮತ್ತು ನೀವು ಯಾವ ರೀತಿಯ ಗಂಡ? ಎಂದು ಪ್ರಶ್ನೆ ಮಾಡಿದರು.

ಅಂದಹಾಗೆ ಸಾನಿಯಾ ಮಿರ್ಜಾ (Sania Mirza) ಮತ್ತು ಶೋಯೆಬ್ ಮಲಿಕ್ (Shoib Malik) 2010ರ ಏಪ್ರಿಲ್ 12ರಂದು ಹೈದರಾಬಾದ್‌ನಲ್ಲಿರುವ ತಾಜ್ ಕೃಷ್ಣ ಹೋಟೆಲ್‌ನಲ್ಲಿ ಸಾಂಪ್ರದಾಯಿಕ ಹೈದರಾಬಾದಿ ಮುಸ್ಲಿಂ ಸಂಪ್ರದಾಯದಂತೆ ವಿವಾಹವಾದರು. ಇದಾದ ನಂತರ ಪಾಕಿಸ್ತಾನಿ ಪದ್ಧತಿಯಂತೆ ಪಾಕಿಸ್ತಾನದ ಸಿಯಾಲ್‌ಕೋಟ್‌ನಲ್ಲಿ ಮದುವೆ ನಡೆಯಿತು. (ಏಜೆನ್ಸೀಸ್​)

ವಿಜಯವಾಣಿ ಅಚ್ಚಗನ್ನಡ ಅಭಿಯಾನ: ಬನ್ನಿ ಭಾಗವಹಿಸಿ ಬಹುಮಾನ ಗೆಲ್ಲಿ

ರಶ್ಮಿಕಾ ಹಿಂದೆ ವಿಜಯ್; ರಂಜಿತಮೆ ಎಂದು ಹಾಡಿ ಕುಣಿಯುತ್ತಿರುವ ತಮಿಳು ನಟ

ಸಾನಿಯಾ-ಶೋಯೆಬ್​ ದಾಂಪತ್ಯದಲ್ಲಿ ಬಿರುಕು? ಅನುಮಾನಕ್ಕೆ ಕಾರಣವಾದ ಇನ್​ಸ್ಟಾಗ್ರಾಂ ಪೋಸ್ಟ್!​

Share This Article

Vastu Tips : ರಾತ್ರಿ ಮಲಗುವ ಮುನ್ನ ಈ ತಪ್ಪುಗಳನ್ನು ಮಾಡಬೇಡಿ!ಸಾಲದ ಸುಳಿಗೆ ಸಿಲುಕುತ್ತೀರಿ..!

Vastu Tips: ದೃಷ್ಟ ಚೆನ್ನಾಗಿದ್ದರೆ ಕೆಲವರು ರಾತ್ರೋರಾತ್ರಿ ಲಕ್ಷಾಧಿಪತಿಗಳಾಗುತ್ತಾರೆ. ಕೆಲವರು  ಐಷಾರಾಮಿ ಜೀವನ ನಡೆಸಲು ಕಷ್ಟಪಡುತ್ತಾರೆ. ಅವರು…

Health Tips: ನೆಲದ ಮೇಲೆ ಕುಳಿತುಕೊಂಡು ತಿನ್ನಲು ಸಾಧ್ಯವಿಲ್ಲವೇ? ಆದ್ರೆ ಈ ಅದ್ಭುತ ಪ್ರಯೋಜನಗಳೇನು ಗೊತ್ತಾ?

Health Tips: ನಮ್ಮ ಹಿರಿಯರು ಊಟ ಮಾಡುವಾಗ ನೆಲದ ಮೇಲೆ ಕಾಲು ಮಡಚಿ ಕೂರುತ್ತಿದ್ದರು. ಆಧುನಿಕ ಕಾಲದಲ್ಲಿ…

Alcohol In Winter: ಚಳಿಯಲ್ಲಿ ಮದ್ಯ ಸೇವನೆ ಎಷ್ಟು ಅಪಾಯಕಾರಿ ಗೊತ್ತಾ?

Alcohol In Winter: ಚಳಿಗಾಲ ಆರಂಭವಾಗಿದೆ ಮತ್ತು ತಾಪಮಾನವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದಲ್ಲದೆ, ಜ್ವರ…