ಐದು ದಿನದ ಪುತ್ರನಿಗೆ ಕ್ರಿಕೆಟ್​ ತೋರಿಸುತ್ತಿರುವ ಸಾನಿಯಾ ಫೋಟೋ ವೈರಲ್​

ನವದೆಹಲಿ: ಭಾರತದ ಟೆನ್ನಿಸ್​ ತಾರೆ ಸಾನಿಯಾ ಮಿರ್ಜಾ ಆರು ದಿನಗಳ ಹಿಂದೆಯಷ್ಟೇ ಗಂಡು ಮಗುವಿಗೆ ಜನ್ಮ ನೀಡಿದ್ದರು. ತಾಯಿಯಾದ ಬಳಿಕ ಟ್ವಿಟರ್​ನಲ್ಲಿ ಇದೇ ಮೊದಲ ಬಾರಿಗೆ ಸರಣಿ ಪೋಸ್ಟ್​ಗಳನ್ನು ಮಾಡಿರುವ ಸಾನಿಯಾ ಈಗಾಗಲೇ ಪುತ್ರನಿಗೆ ಕ್ರಿಕೆಟ್​ ಪಂದ್ಯ ತೋರಿಸುವ ಪೋಟೋವನ್ನು ಹಂಚಿಕೊಂಡಿದ್ದಾರೆ.

ಅಂದ ಹಾಗೆ, ಸಾನಿಯಾ ತನ್ನ ಪುತ್ರನಿಗೆ ಇಝಾನ್​ ಮಿರ್ಜಾ ಮಲಿಕ್​ ಎಂದು ಹೆಸರಿಟ್ಟಿದ್ದು, ಈಗಾಗಲೇ ಮಗನಿಗೆ ಕ್ರಿಕೆಟ್​ ಕಲಿಸಲು ಹೊರಟಿದ್ದಾರೆ ಎಂದೆಣಿಸಬೇಡಿ. ಸಾನಿಯಾ ಟಿವಿಯಲ್ಲಿ ಬರುತ್ತಿರುವ ಪತಿ ಶೋಯೆಬ್​ನನ್ನು ತನ್ನ ಕಂದಮ್ಮನಿಗೆ ತೋರಿಸುತ್ತಿದ್ದಾರೆ.

ಹೌದು, ಸಾನಿಯಾ ಮಾಡಿರುವ ಮೊದಲನೇ ಟ್ವೀಟ್​ನಲ್ಲಿ, ಪುತ್ರ ಇಝಾನ್​ ಟಿವಿಯಲ್ಲಿ ತನ್ನ ತಂದೆಯ ಬ್ಯಾಟಿಂಗ್​ ವೈಖರಿ ನೋಡುತ್ತಿರುವ ಫೋಟೋ ಇದೆ. ಈ ಟ್ವೀಟ್​ನಲ್ಲಿ ಸಾನಿಯಾ, “ನಾನು ತಾಯಿಯಾಗಿ, ಪುಟ್ಟ ಕಂದ ಇಝಾನ್​ ನನ್ನ ಮಗನಾಗಿ ಭೂಮಿಗೆ ಬಂದು ಐದು ದಿನಗಳು ಕಳೆದಿವೆ. ನಾವಿಬ್ಬರೂ ಬಟ್ಟಿಗೆ ಬಾಬಾ (ಶೋಯೆವ್​ ಮಲ್ಲಿಕ್​) ಆಡುತ್ತಿರುವ ಕ್ರಿಕೆಟ್​ ಮ್ಯಾಚ್​ನ್ನು ನೋಡಿದ್ದೇವೆ. ನಿಜವಾಗಿಯೂ ಇದು ಅತಿ ದೊಡ್ಡ ಪಂದ್ಯ” ಎಂದು ಬರೆದುಕೊಂಡಿದ್ದಾರೆ.

ಮತ್ತೊಂದು ಪೋಸ್ಟ್​ನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಶುಭ ಹಾರೈಸಿದ ಎಲ್ಲರಿಗೂ ಸಾನಿಯಾ ಥಾಂಕ್ಯೂ ಹೇಳಿದ್ದಾರೆ.

ಶುಕ್ರವಾರ ಶೋಯೆಬ್​ ದುಬೈನಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್​ ವಿರುದ್ಧದ ಟಿ-20 ಸರಣಿಯಲ್ಲಿ ಪಾಲ್ಗೊಂಡಿದ್ದರು. (ಏಜೆನ್ಸೀಸ್)

ಮುದ್ದಾದ ಮಗುವಿಗೆ ಜನ್ಮ ನೀಡಿದ ಸಾನಿಯಾ, ಚಂದ್ರನ ಮೇಲಿದ್ದಾರಂತೆ ಮಲ್ಲಿಕ್​