blank

ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ: ಭಾರತ ಮಹಿಳೆಯರ ಶುಭಾರಂಭ

blank

ರಾಜ್‌ಗಿರ್ (ಬಿಹಾರ): ಹಾಲಿ ಚಾಂಪಿಯನ್ ಹಾಗೂ ಆತಿಥೇಯ ಭಾರತ ತಂಡ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಮಹಿಳಾ ಹಾಕಿ ಟೂರ್ನಿಯಲ್ಲಿ ಶುಭಾರಂಭ ಕಂಡಿದೆ. ಸಂಗೀತಾ ಕುಮಾರಿ (8, 55ನೇ ನಿಮಿಷ) ಸಿಡಿಸಿ ಅವಳಿ ಗೋಲುಗಳ ನೆರವಿನಿಂದ ಭಾರತ ತಂಡ ತನ್ನ ಮೊದಲ ಪಂದ್ಯದಲ್ಲಿ ಮಲೇಷ್ಯಾ ಎದುರು 4-0 ಅಂತರದಿಂದ ಗೆದ್ದು ಬೀಗಿದೆ.

ಸೋಮವಾರ ಆರಂಭಗೊಂಡ ಟೂರ್ನಿಯ ಪಂದ್ಯದಲ್ಲಿ ಸಲಿಮಾ ಟೆಟೆ ಸಾರಥ್ಯದ ಭಾರತ ತಂಡ ಸಂಪೂರ್ಣ ಪ್ರಾಬಲ್ಯ ಸಾಧಿಸಿತು. ಐದು ನಿಮಿಷದಲ್ಲಿ ಮಲೇಷ್ಯಾ ಪೆನಾಲ್ಟಿ ಕಾರ್ನರ್ ಪಡೆದರೂ, ಗೋಲು ಗಳಿಸಲು ವಿಲವಾಯಿತು. ಬಳಿಕ ಆಕ್ರಮಣಕಾರಿ ಆಟಕ್ಕಿಳಿದ ಭಾರತ ತಂಡ ಮಲೇಷ್ಯಾದ ರಕ್ಷಣಾ ವಿಭಾಗದ ಮೇಲೆ ಒತ್ತಡ ಹೇರಿತು. ಇದರ ಲವಾಗಿ ಭಾರತ ಎರಡು ನಿಮಿಷಗಳ ಅಂತರದಲ್ಲಿ 2 ಪೆನಾಲ್ಟಿ ಕಾರ್ನರ್ ಪಡೆಯಿತು. ಪಂದ್ಯದ 8ನೇ ನಿಮಿಷದಲ್ಲಿ ಸಂಗೀತಾ ಕುಮಾರಿ ಮೊದಲ ಗೋಲು ಸಿಡಿಸಿ ಭಾರತಕ್ಕೆ ಮುನ್ನಡೆ ಒದಗಿಸಿದರು.

ಎರಡನೇ ಕ್ವಾರ್ಟರ್‌ನಲ್ಲಿಯೂ ಮಲೇಷ್ಯಾ ರಕ್ಷಣಾ ವಿಭಾಗಕ್ಕೆ ಒತ್ತಡ ಹೇರಿದ ಭಾರತ 4 ಪೆನಾಲ್ಟಿ ಕಾರ್ನರ್ ಗಿಟ್ಟಿಸಿಕೊಂಡಿತು. ಆದರೆ 4 ಅವಕಾಶಗಳಲ್ಲಿಯೂ ಗೋಲು ದಾಖಲಿಸುವಲ್ಲಿ ಯಶಸ್ವಿಯಾಗಲಿಲ್ಲ. ಮೊದಲಾರ್ಧದಲ್ಲಿ ಭಾರತ 1-0ಯಿಂದ ಮುನ್ನಡೆ ಕಾಯ್ದುಕೊಂಡಿತು.
ದ್ವಿತೀಯಾರ್ಧದಲ್ಲಿ ಪಂದ್ಯದ 2ನೇ ಪೆನಾಲ್ಟಿ ಅವಕಾಶ ಪಡೆದ ಮಲೇಷ್ಯಾ ಸಮಬಲ ಸಾಧಿಸುವ ಅವಕಾಶ ಕೈಚೆಲ್ಲಿತು. ಆಗ ಭಾರತ ಮುನ್ನಡೆಯನ್ನು ಹೆಚ್ಚಿಸಿಕೊಂಡಿತು. 43ನೇ ನಿಮಷದಲ್ಲಿ ಪ್ರೀತಿ ದುಬೆ ಹಾಗೂ ಉದಿತಾ (44) ಸತತ ಗೋಲು ಸಿಡಿಸಿ ಭಾರತದ ಮುನ್ನಡೆಯನ್ನು 3-0ಗೆ ವಿಸ್ತರಿಸಿದರು. ಪಂದ್ಯ ಮುಕ್ತಾಯಕ್ಕೆ ಐದು ನಿಮಿಷ ಬಾಕಿಯಿರುವಾಗ ಆಕರ್ಷಕ ಫೀಲ್ಡ್ ಗೋಲು ಬಾರಿಸಿದ ಸಂಗೀತಾ ಗೆಲುವಿನ ಅಂತರ ಹಿಗ್ಗಿಸಿದರು.

ದಿನ ಇತರ ಪಂದ್ಯಗಳಲ್ಲಿ ಜಪಾನ್-ಕೊರಿಯಾ 2-2 ರಿಂದ ಡ್ರಾ ಸಾಧಿಸಿದರೆ, ಒಲಿಂಪಿಕ್ಸ್ ರಜತ ವಿಜೇತ ಚೀನಾ 15-0 ಅಂತರದಿಂದ ಥಾಯ್ಲೆಂಡ್ ಎದುರು ಬೃಹತ್ ಗೆಲುವು ಒಲಿಸಿಕೊಂಡಿತು.

ಭಾರತಕ್ಕೆ ಇಂದಿನ ಪಂದ್ಯ
ಎದುರಾಳಿ: ಕೊರಿಯಾ
ಆರಂಭ: ಸಂಜೆ 4.45
ನೇರಪ್ರಸಾರ: ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್

 

Share This Article

ಉಡುಗೆಗೆ ಮ್ಯಾಚ್​ ಆಗುವ ಲಿಪ್​ಸ್ಟಿಕ್​​​ ಆಯ್ಕೆ ಮಾಡುವುದೇಗೆ?; ಇಲ್ಲಿದೆ ಸಿಂಪಲ್​ ಟಿಪ್ಸ್​​ | Beauty Tips

ನಾವು ಮದುವೆಗೆ ಚೆಂದದ ಬಟ್ಟೆಗಳನ್ನು ಆಯ್ಕೆ ಮಾಡುತ್ತೇವೆ. ಆದ್ದರಿಂದ ಯಾರೂ ನಮಗಿಂತ ಹೆಚ್ಚು ಸುಂದರವಾಗಿ ಕಾಣುವುದಿಲ್ಲ.…

ಚಳಿಗಾಲದಲ್ಲಿ ವಿಟಮಿನ್​​ ಡಿ ಕೊರತೆಯೇ?; ನಿಮ್ಮ ದೈನಂದಿನ ಆಹಾರ ಕ್ರಮದಲ್ಲಿ ಈ ಬದಲಾವಣೆ ಮಾಡಿ | Health Tips

ಚಳಿಗಾಲದಲ್ಲಿ ಸೂರ್ಯನ ಬೆಳಕಿನ ಕೊರತೆಯಿಂದ ವಿಟಮಿನ್ ಡಿ ಕೊರತೆ ಉಂಟಾಗುತ್ತದೆ. ಆದರೆ ಈ ಪೋಷಕಾಂಶವು ಅನೇಕ…

Mushrooms for Cancer: ಅಣಬೆ ತಿಂದರೆ ಯಾವುದೇ ಕ್ಯಾನ್ಸರ್ ಇದ್ರು ಕಂಟ್ರೋಲ್…!

Mushrooms for Cancer : ಕ್ಯಾನ್ಸರ್ ರೋಗ ಅಪಾಯಕಾರಿ. ಕ್ಯಾನ್ಸರ್ ಚಿಕಿತ್ಸೆಯು ತುಂಬಾ ದುಬಾರಿಯಾಗಿದೆ. ಕ್ಯಾನ್ಸರ್​​ನಲ್ಲಿ…