ನಿರ್ದೇಶಕ ಗುರು ವಿರುದ್ಧ ಗರಂ ಆದ ಸಂಗೀತಾ ಭಟ್​ ಪತಿ

ಬೆಂಗಳೂರು: ಮೀಟೂ ಆರೋಪದ ಕುರಿತು ನಿರ್ದೇಶಕ ಗುರು ಪ್ರಸಾದ್​ ಪ್ರತಿಕ್ರಿಯೆ ನೀಡಿದ ಬೆನ್ನಲ್ಲೇ ನಟಿ ಸಂಗೀತಾ ಭಟ್​ ಪತಿ ಸುದರ್ಶನ್​ ಅವರು ಗುರು ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಗುರುಪ್ರಸಾದ್​​ಗೆ ಏನ್ ಹುಚ್ಚು ಹಿಡಿದಿದ್ಯಾ ಎಂದಿರುವ ಸುದರ್ಶನ್, ಅವರು ತುಂಬಾ ಚೀಪ್​ ಆಗಿ ಮಾತನಾಡಿದ್ದಾರೆ. ಗಂಡಸರು ಮಾತನಾಡಿದ್ರೆ ಹೆಣ್ಣುಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತೆ ಎಂದೆಲ್ಲಾ ಮಾತನಾಡಿದ್ದಾರೆ. ಅಷ್ಟೇಅಲ್ಲದೆ, ನಟಿಯರು ಅವರು ಪತಿವ್ರತಿಯರು ಎಂದು ಸಾಬೀತು ಪಡಿಸಲು ಈ ರೀತಿ ಆರೋಪ ಮಾಡುತ್ತಿದ್ದಾರೆ ಎಂದು ಕೆಟ್ಟದಾಗಿ ಮಾತನಾಡಿದ್ದಾರೆ. ಈ ರೀತಿ ಮಾತನಾಡುವುದು ಶೋಭೆಯಲ್ಲ ಎಂದರು.

ಸಂಗೀತಾ ಹಾಕಿರುವ ಪೋಸ್ಟ್​ಗೂ ಅವರಿಗೂ ಯಾವುದೇ ಸಂಬಂಧ ಇಲ್ಲ. ನಮಗೆ ಪ್ರಚಾರದ ಅವಶ್ಯಕತೆ ಇಲ್ಲ. ಈ ವಿಷಯದಿಂದ ಸಂಗೀತಾ ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾಳೆ. ಗುರುಪ್ರಸಾದ್ ನಾನ್​​ಸೆನ್ಸ್ ಆಗಿ ಮಾತನಾಡುವುದನ್ನು ನಿಲ್ಲಸಬೇಕು ಎಂದರು.

ಗುರು ಪ್ರಸಾದ್​ ನಿರ್ದೇಶನದ ಎರಡನೇ ಸಲ ಚಿತ್ರದಲ್ಲಿ ಸಂಗೀತಾ ಭಟ್​ ನಾಯಕಿಯಾಗಿ ಅಭಿನಯಿಸಿದ್ದರು. (ದಿಗ್ವಿಜಯ ನ್ಯೂಸ್)