ಸಂಗೀತಾ ಭಟ್​ ಪರ ಬ್ಯಾಟ್​ ಬೀಸಿದ ಡಾಲಿ ಧನಂಜಯ್​

ಬೆಂಗಳೂರು: ‘ಎರಡನೇ ಸಲ’ ನಟಿ ಸಂಗೀತಾ ಭಟ್ ಪರ ಡಾಲಿ ಧನಂಜಯ್​ ಬ್ಯಾಟ್​ ಬೀಸಿದ್ದಾರೆ.

ಸ್ಯಾಂಡಲ್ ವುಡ್ ನಟಿಯರೆಲ್ಲಾ ಹಾಗೆ ಎಂದು ಗುರು ಪ್ರಸಾದ್​ ಹೇಗಂದ್ರು? ನಾನೊಬ್ಬ ನಟನಾಗಿ ಈ ಹೇಳಿಕೆ ಕೇಳಿ ಸುಮ್ಮನಿರೋಕಾಗುವುದಿಲ್ಲ. ಸಂಗೀತಾ ಭಟ್​ ನನಗೆ ಗೊತ್ತಿರುವ ಹೆಣ್ಣು ಮಗು ಎಂದು ಗುರುಪ್ರಸಾದ್​ ವಿರುದ್ಧ ಕಿಡಿಕಾರಿದ್ದಾರೆ.

ಈ ಹಿಂದೆ ಸಂಗೀತಾ ಭಟ್​ ತಮಗೆ ಇಂಡಸ್ಟ್ರಿಯಲ್ಲಾಗಿದ್ದ ಕಿರುಕುಳಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದರು. ಆದರೆ, ನಿನ್ನೆ ಇದನ್ನೂ ಸೇರಿ ಮೀಟೂ ಆರೋಪಗಳ ಬಗ್ಗೆ ಒಟ್ಟಾರೆಯಾಗಿ ನಿರ್ದೇಶಕ ಗುರುಪ್ರಸಾದ್​ ತೀಕ್ಷ್ಣವಾಗಿ ಪ್ರತಿಕ್ರಿಯಿಸಿ, ಸ್ವತಃ ಗುರುಪ್ರಸಾದ್ ಪತ್ನಿಯೇ ಅವರು ಎಂತಹವರು ಅಂತ ಹೇಳಿದ್ದಾರಲ್ವಾ ಎಂದಿದ್ದಾರೆ.

ಇದೇ ವಿಷಯದ ಕುರಿತು ಸದ್ಯ ಫಿಲಂ ಛೇಂಬರ್​​ನಲ್ಲಿ ಪದಾಧಿಕಾರಿಗಳ ಸಭೆ ನಡೆಯುತ್ತಿದೆ. (ದಿಗ್ವಿಜಯ ನ್ಯೂಸ್)