ಎರಡನೇ ಸಲ ಸಂಗೀತಾ

ನಟನೆಯ ಜತೆ ನಿರ್ಮಾಣಕ್ಕೂ ಇಳಿದ ಕನ್ನಡತಿ | ಹರ್ಷವರ್ಧನ್​ ಬ್ಯಾಡನೂರು ನಟಿ ಸಂಗೀತಾ ಭಟ್​ ಮತ್ತೆ ವಾಪಸ್ಸಾಗಿದ್ದಾರೆ. ಇದೀಗ ಮೂರು ಚಿತ್ರಗಳಲ್ಲಿ ಬಿಜಿಯಿದ್ದಾರೆ. ಕೆಲವು ವರ್ಷಗಳ ಹಿಂದೆ ತಾವು ಚಿತ್ರರಂಗದಲ್ಲಿ ಎದುರಿಸಿದ ಸಮಸ್ಯೆಗಳ ಬಗ್ಗೆ ಸುದೀರ್ಘವಾಗಿ ಓಪನ್​ ಲೆಟರ್​ ಬರೆದು, ನಟನೆಗೆ ಗುಡ್​ಬೈ ಹೇಳಿದ್ದರು. ಆ ಬಳಿಕವೂ ಅವರಿಗೆ ನಟಿಸಲು ಅವಕಾಶ ಬರುತ್ತಿತ್ತು. ಹೀಗಾಗಿ ಸಾಕಷ್ಟು ಯೋಚಿಸಿ, ಚಿಂತಿಸಿ ಇದೀಗ ಎರಡನೇ ಇನ್ನಿಂಗ್ಸ್​ ಆರಂಭಿಸಿದ್ದಾರೆ. ಇದೇ ಖುಷಿಯಲ್ಲಿ ವಿಜಯವಾಣಿ ಜತೆ ಮಾತಿಗೆ ಸಿಕ್ಕಿದ್ದರು ಸಂಗೀತಾ ಭಟ್​.