ಸಂಡೂರು: ಸುಶೀಲಾನಗರ ಗ್ರಾಪಂ ವ್ಯಾಪ್ತಿಯ ಹಳ್ಳಿಗಳಾದ ಸಿದ್ದಾಪುರ, ವೆಂಕಟಗಿರಿ, ಜಯಸಿಂಗಪುರಗಳಲ್ಲಿ ಬೇಸಿಗೆ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಂದಾಲ್ ಆಸ್ಪೈರ್ ಇಂಡಿಯಾ ಮ್ಯಾಜಿಕ್ ಬಸ್‌ನ ಪ್ರೋಗ್ರಾಂ ಮ್ಯಾನೇಜರ್ ರೋಷನ್ ಜಮೀರ್ ತಿಳಿಸಿದರು.

ತಾಲೂಕಿನ ಸುಶೀಲಾನಗರದಲ್ಲಿ ಹಮ್ಮಿಕೊಂಡಿದ್ದ ಬೇಸಿಗೆ ಶಿಬಿರದಲ್ಲಿ ಮಂಗಳವಾರ ಮಾತನಾಡಿದರು. ಆಸ್ಪೈರ್ ಮತ್ತು ಮ್ಯಾಜಿಕ್ ಇಂಡಿಯಾ ಫೌಂಡೇಶನ್ ಪಾಲಕರ ಸಭೆ, ಆರೋಗ್ಯ ಜಾಗೃತಿ ಯುವ ಸಭೆ ಮತ್ತು ವಿದ್ಯಾರ್ಥಿಗಳ ಮನೆಗೆ ಹೋಗಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. ಮಕ್ಕಳು ಮತ್ತು ಪಾಲಕರು ಸಹ ಬೇಸಿಗೆ ಅಧಿವೇಶನದಲ್ಲಿ ಭಾಗವಹಿಸಿದ್ದಾರೆ. ಬಾಲ ಕಾರ್ಮಿಕರನ್ನು ಕೆಲಸಕ್ಕೆ ಇಟ್ಟುಕೊಂಡ ಹಾಗೂ ಕೆಲಸಕ್ಕೆ ಸೇರಿಸಿದ ಪಾಲಕರು ಅಪರಾಧಿಗಳು. ಬಾಲ್ಯವಿವಾಹ ಮಾಡುವುದು ಹಾಗೂ ಮಾಡಿಸುವುದು ಎರಡೂ ಅಪರಾಧವಾಗಿದೆ ಎಂದರು.
ಸೃಜನಾತ್ಮಕ ಕಲೆಗಳ ಯೋಜನೆಗಳೊಂದಿಗೆ ಬೇಸಿಗೆ ಶಿಬಿರಗಳು ಉದ್ಯೋಗ ಪಡೆಯಲು ಸಹಾಯ ಮಾಡುತ್ತವೆ. ಶಿಕ್ಷಕ ರಫಿ ಅವರು ಸಾಕ್ಷರತೆ ಮತ್ತು ಸಂಖ್ಯಾಶಾಸ್ತ್ರ ಕಲಿಸಿ ಕೊಡಲಿದ್ದಾರೆ. ಇದು ಹದಿಹರೆಯದವರಿಗೆ ಶೈಕ್ಷಣಿಕ ಕೌಶಲಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಮ್ಯಾಜಿಕ್ ಬಸ್‌ನಲ್ಲಿ ಮೆಹತಾಜ್ ಬೇಗಂ ಅವರು ಲೈಫ್ ಸ್ಕಿಲ್ ಎಜುಕೇಟರಾಗಿ ಜೀವನ ಕೌಶಲ ಮತ್ತು ಉದ್ಯೋಗ ಆಧಾರಿತ ಚಟುವಟಿಕೆಗಳನ್ನು ತಿಳಿಸಿಕೊಡಲಿದ್ದಾರೆ ಎಂದರು.