
ಸಂಡೂರು: ತಾಲೂಕಿನ ಬಂಡ್ರಿ, ಚೋರನೂರು, ಬನ್ನಿಹಟ್ಟಿ ಕೋವಿಡ್ ಕೇರ್ ಸೆಂಟರ್‌ಗಳಿಗೆ ಜಿಲ್ಲಾಧಿಕಾರಿ ಪವನ್‌ಕುಮಾರ್ ಮಾಲಪಾಟಿ, ಜಿಪಂ ಸಿಇಒ ಕೆ.ಆರ್.ನಂದಿನಿ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು. ತಪಾಸಣೆ, ಚಿಕಿತ್ಸೆ, ಊಟೋಪಾಹಾರ ಕುರಿತು ಸೋಂಕಿತರಿಂದ ಮಾಹಿತಿ ಪಡೆದರು. ಇದೇವೇಳೆ ಬಂಡ್ರಿ ಕೇರ್ ಸೆಂಟರ್‌ನ ಸೋಂಕಿತರು ಬೆಳಗ್ಗೆ, ಸಂಜೆ ಟೀ ಅಥವಾ ಕಷಾಯ ಕೊಡಲು ಮನವಿ ಮಾಡಿದರು. ಅದಕ್ಕೆ ಡಿಸಿ, ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ನಂತರ ತೋರಣಗಲ್‌ನ ಕರೊನಾ ಆಕ್ಸಿಜನ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು. ತಹಸೀಲ್ದಾರ್ ಎಚ್.ಜೆ.ರಶ್ಮಿ, ತಾಪಂ ಪ್ರೊಬೇಷನರಿ ಇಒ ಪರಿಣಿಕಾ, ಪ್ರಭಾರ ಆರ್‌ಐ ಕೆ.ಮಂಜುನಾಥ ಇತರರಿದ್ದರು.
ಮುಸ್ಲಿಂ ಯುವಕರ ತಂಡದಿಂದ ಅತ್ಯಕ್ರಿಯೆ: ಪಟ್ಟಣದ ಸರ್ಕಾರಿ ಆಸ್ಪತ್ರೆಯ ಕರೊನಾ ವಾರ್ಡ್‌ನಲ್ಲಿ ಇಬ್ಬರು ಮತ್ತು ಸಂಜೀವಿನಿ ಆಸ್ಪತ್ರೆಯಲ್ಲಿ ಒಬ್ಬರು ಬುಧವಾರ ಕರೊನಾದಿಂದ ಮೃತಪಟ್ಟಿದ್ದಾರೆ. ಪಟ್ಟಣದ ಸರ್ಕಾರಿ ಕರೊನಾ ಆಸ್ಪತ್ರೆಯ ಇನ್‌ಚಾರ್ಜ್ ಡಾ.ಸತೀಶ್ ಅವರ ಸೋದರ (65), ದೇವಗಿರಿಯ ಯುವಕ (28) ಭುವನಹಳ್ಳಿಯ ವ್ಯಕ್ತಿ (45) ಸೋಂಕಿಗೆ ಬಲಿಯಾಗಿದ್ದಾರೆ. ಸಂಡೂರು ಆಸ್ಪತ್ರೆಯಲ್ಲಿ ಮೃತಪಟ್ಟ ಇಬ್ಬರ ಅಂತ್ಯಕ್ರಿಯೆಯನ್ನು ಮುಸ್ಲಿಂ ಯುವಕರ ತಂಡ ನೆರವೇರಿಸಿತು.