ಸಂಡೂರು: ನರೇಗಾ ಯೋಜನೆಯ ಕಾರ್ಮಿಕರಿಗೆ ಪಿಎಂಜೆಜೆವೈಯಡಿ 436ರೂ. ಮತ್ತು ಪಿಎಂಬಿಎಸ್‌ವೈಯಡಿ 20 ರೂ.ಗಳ ವಿಮೆ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಲೀಡ್ ಬ್ಯಾಂಕ್ ಅಧಿಕಾರಿ ವಿ.ಗಿರೀಶ್ ತಿಳಿಸಿದರು.

ತಾಲೂಕಿನ ದರೋಜಿ ಗ್ರಾ.ಪಂ.ನಲ್ಲಿ ಜಿಲ್ಲಾ ಲೀಡ್ ಬ್ಯಾಂಕ್, ಕರ್ನಾಟಕ ಗ್ರಾಮೀಣ ಬ್ಯಾಂಕ್ ಹಾಗೂ ದರೋಜಿ ಗ್ರಾ.ಪಂ. ಸಹಯೋಗದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಜೀವವಿಮೆ ಅಭಿಯಾನದಲ್ಲಿ ಮಾತನಾಡಿದರು. ಜೀವವಿಮೆ ಪ್ರತಿಯೊಬ್ಬರಿಗೆ ಅನಿವಾರ್ಯ ಮತ್ತು ಉಪಯುಕ್ತವಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಮಾಡಿಸಬೇಕು ಎಂದರು.
ಲೀಡ್ ಬ್ಯಾಂಕ್ ವ್ಯವಸ್ಥಾಪಕ ರಮೇಶ್, ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕ ಆಂಜನೇಯ, ಉಪನ್ಯಾಸಕ ಜಿ.ದಿನೇಶ್ ಕುಮಾರ್, ಗ್ರಾಪಂ ಕಾರ್ಯದರ್ಶಿ ಕಲ್ಲಪ್ಪ, ತಾಲೂಕು ಸಂಯೋಜಕ ಯಂಕಪ್ಪ, ಗ್ರಾಮ ಕಾಯಕ ಮಿತ್ರ ಮಂಜುಳಾ ಇತರರಿದ್ದರು.