ಸಂಡೂರು: ಮಕ್ಕಳು ಪೌಷ್ಟಿಕ ಆಹಾರ ಸೇವನೆ ಮಾಡುವುದು ಮುಖ್ಯ, ಸ್ಥಳೀಯವಾಗಿ ದೊರೆಯುವ ತರಕಾರಿ, ಹಣ್ಣುಗಳನ್ನು ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಪ್ರಭಾರ ಮುಖ್ಯ ಶಿಕ್ಷಕ ಶಶಿಧರ್ ತಿಳಿಸಿದರು.
ಜೋಗ ಗ್ರಾಮದ ಸಹಿಪ್ರಾಶಾ ಆವರಣದಲ್ಲಿ ಪೋಷಣ ಮಾಸಾಚರಣೆಯಲ್ಲಿ ಮಂಗಳವಾರ ಮಾತನಾಡಿದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ, ರಕ್ತಹೀನತೆ ಮತ್ತು ಅಪೌಷ್ಟಿಕತೆ ನಿವಾರಣೆಗೆ ಈ ಅಭಿಯಾನದಲ್ಲಿ ಹೆಚ್ಚಿನ ಮಹತ್ವ ಕೊಡಲಾಗಿದೆ. ಸ್ವಚ್ಛವಾಗಿ ಕೈತೊಳೆಯುವ ವಿಧಾನ ಅನುಸರಿಸಬೇಕು. ಉಗುರುಗಳನ್ನು ಟ್ರಿಮ್ ಆಗಿ ಇಡಬೇಕು. ಪ್ರತಿ ಸೋಮವಾರ ಐಎಫ್‌ಎ ಮಾತ್ರೆ ಸೇವನೆ ಮಾಡಬೇಕು ಎಂದರು. ಆರು ಸಾವಿರ ಐಎಫ್‌ಎ ಮಾತ್ರೆಗಳನ್ನು ಶಾಲೆಗೆ ನೀಡಲಾಯಿತು. ಆರ್‌ಕೆಎಸ್‌ಕೆ ಪ್ರಶಾಂತ್ ಕುಮಾರ್, ಶಿಕ್ಷಕಿಯರಾದ ಅನಸೂಯಾ, ಲಕ್ಷ್ಮೀ, ಶಿಲ್ಪಾ, ಪ್ರಮುಖರಾದ ಬಸವರಾಜ, ಯಂಕಪ್ಪ, ಪ್ರಶಾಂತ್ ಕುಮಾರ್, ತಿಪ್ಪೇಸ್ವಾಮಿ ಇತರರಿದ್ದರು.