Thursday, 13th December 2018  

Vijayavani

Breaking News

ಸ್ಯಾಂಡಲ್​ವುಡ್ ಪೋಷಕ ನಟ ಶಂಕರ್ ಅಶ್ವಥ್ ಕ್ಯಾಬ್ ಚಾಲಕ!

Saturday, 30.12.2017, 10:45 AM       No Comments

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಅಜಾತ ಶತ್ರು ಎಂದೇ ಹೆಸರಾಗಿರುವ ಮತ್ತು ಅಪರೂಪದ ಕಲಾವಿದ ಕೆ.ಎಸ್‌.ಅಶ್ವತ್ಥ್ ಅವರ ಪುತ್ರ ಶಂಕರ್‌ ಅಶ್ವತ್ಥ್‌ ಜೀವನ ನಿರ್ವಹಣೆಗಾಗಿ ಕ್ಯಾಬ್‌ ಡ್ರೈವರ್‌ ಆಗಿದ್ದಾರೆ.

ಹಲವು ಕನ್ನಡ ಸಿನಿಮಾ ಮತ್ತು ಧಾರವಾಹಿಗಳಲ್ಲಿ ನಟಿಸಿರುವ ಅಶ್ವಥ್, ಸಿನಿಮಾದಲ್ಲಿ ಅವಕಾಶ ಸಿಗದೆ ಜೀವನ ಸಾಗಿಸಲು ಚಾಲಕ ವೃತ್ತಿಯನ್ನು ಆಯ್ದುಕೊಂಡಿದ್ದಾರೆ.

ಈ ಕುರಿತು ಅವರು ಪ್ರತಿಕ್ರಿಯಿಸಿ, ಇವತ್ತಿನ ದಿನಗಳಲ್ಲಿ ಜೀವನ ನಿರ್ವಹಣೆ ತುಂಬಾ ಕಷ್ಟ. ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳಲು ಮುಂದಾಲೋಚನೆಯಿಂದ ಕ್ಯಾಬ್‌ ಚಾಲಕನಾಗಿದ್ದೇನೆ. ನಾನೆಂದೂ ಇದನ್ನ ಮರ್ಯಾದೆ ಇಲ್ಲದ ಕೆಲಸ ಅಂದುಕೊಂಡಿಲ್ಲ. ಸಿನಿಮಾದಲ್ಲಿ ಅವಕಾಶ ಸಿಗದೆ ನನಗೆ ಜೀವನ ಸಾಗಿಸಲು ಕಷ್ಟವಾಗಿತ್ತು. ಅದೃಷ್ಟ ಬಂದಾಗ ಎಲ್ಲರೂ ರಾಜರಾಗುತ್ತಾರೆ. ಆದರೆ, ನಾನೊಬ್ಬ ನತದೃಷ್ಟ. ಸಿನಿಮಾ ಇಂಡಸ್ಟ್ರಿಯನ್ನು ನಾನು ನಿಂದಿಸಲ್ಲ. ಆಕಸ್ಮಿಕವಾಗಿ ನಾನು ಹೊಟ್ಟೆಪಾಡಿಗೆ ಚಾಲಕನಾದೆ ಎನ್ನುತ್ತಾರೆ. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *

Back To Top