ಡಾ. ರಾಜಕುಮಾರ್ ಮೊಮ್ಮಗ ಯುವ ರಾಜಕುಮಾರ್ ಅಭಿನಯದ ಮೊದಲ ಚಿತ್ರದ ಪೋಸ್ಟರ್, ಶುಕ್ರವಾರವಷ್ಟೇ ಅವರ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆಯಾಗಿದ್ದು ಎಲ್ಲರಿಗೂ ಗೊತ್ತೇ ಇದೆ. ಈಗ ಯುವ ರಾಜಕುಮಾರ್‌ಗೆ ಕನ್ನಡ ಚಿತ್ರರಂಗದಿಂದ ಗ್ರಾಂಡ್ ವೆಲ್ಕಮ್ ಸಿಕ್ಕಿದೆ.
ಡಾ. ರಾಜಕುಮಾರ್ ಹುಟ್ಟುಹಬ್ಬದಂದು ಸಂಜೆ 5 ಗಂಟೆಗೆ ಚಿತ್ರದ ಮೊದಲ ಲುಕ್ ಪೋಸ್ಟರ್ ಬಿಡುಗಡೆಯಾಗುತ್ತದೆ ಎಂದು ಹೇಳಲಾಗಿತ್ತು. ಅದರಂತೆ ಸಂಜೆ 5ಕ್ಕೆ ಪೋಸ್ಟರ್ ಬಿಡುಗಡೆಯಾಗಿದೆ. ಆ ನಂತರ ಸ್ಯಾಂಡಲ್‌ವುಡ್‌ನ ಹಲವು ಸ್ಟಾರ್‌ಗಳು, ಯುವ ರಾಜಕುಮಾರ್‌ಗೆ ಶುಭಾಶಯ ತಿಳಿಸಿದ್ದಾರೆ.
ಸ್ಯಾಂಡಲ್‌ವುಡ್ ಸ್ಟಾರ್‌ಗಳಾದ ಶಿವರಾಜಕುಮಾರ್, ಸುದೀಪ್, ಪುನೀತ್, ಜಗ್ಗೇಶ್, ಧನಂಜಯ, ನಿರ್ದೇಶಕರಾದ ಸಿಂಪಲ್ ಸುನಿ ಸೇರಿದಂತೆ ಹಲವರು ಯುವ ರಾಜಕುಮಾರ್‌ಗೆ ಚಿತ್ರರಂಗಕ್ಕೆ ವೆಲ್ಕಮ್ ಮಾಡುವುದರ ಜತೆಗೆ, ಯುವ ಯಶಸ್ವಿಯಾಗಲಿ ಎಂದು ಹಾರೈಸಿದ್ದಾರೆ. ಅದರಲ್ಲೂ ನಟ ಜಗ್ಗೇಶ್, ‘ಈ ಯುದ್ಧದಲ್ಲಿ ನೀನು ನಿನ್ನ ದೊಡ್ಡಪ್ಪ-ಚಿಕ್ಕಪ್ಪನ ತರಹ ಜಯಶಾಲಿಯಾಗಿ, ರಾಜವಂಶದ ಕಿರೀಟಕ್ಕೆ ಮತ್ತೊಂದು ನವಿಲುಗರಿ ಆಗು’ ಎಂದು ಹಾರೈಸಿದ್ದಾರೆ.
‘ವೈಆರ್ 01’ ಎಂಬ ವರ್ಕಿಂಗ್ ಟೈಟಲ್‌ನಲ್ಲಿ ಪ್ರಾರಂಭವಾಗಲಿರುವ ಯುವ ರಾಜಕುಮಾರ್ ಅಭಿನಯದ ಮೊದಲ ಚಿತ್ರವನ್ನು ಪುನೀತ್ ರುದ್ರನಾಗ್ ಎನ್ನುವವರು ಈ ಚಿತ್ರದ ನಿರ್ದೇಶನ ಮಾಡುತ್ತಿದ್ದು, ರವಿ ಬಸ್ರೂರು ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಸದ್ಯಕ್ಕೆ ಸ್ಟ್ ಲುಕ್ ಪೋಸ್ಟರ್ ಮಾತ್ರ ಬಿಡುಗಡೆಯಾಗಿದ್ದು, ಲಾಕ್‌ಡೌನ್ ಮುಗಿದ ನಂತರ ಚಿತ್ರ ಪ್ರಾರಂಭವಾಗಲಿದೆ.
ಹರ್ಷಿಕಾ ಪೂಣಚ್ಚ ಹೀಗೊಂದು ಚಾಲೆಂಜ್ ಹಾಕಿದ್ದಾರೆ; ಇಷ್ಟ ಆದ್ರೆ ನೀವೂ ಸ್ವೀಕರಿಸಿ; ಇದು ಫ್ಯಾಮಿಲಿಗೆ ಸಂಬಂಧಿಸಿದ್ದು
ಇಂದು ಅಪ್ಪಾಜ್ಜಿ ಹುಟ್ಟುಹಬ್ಬ..
ಇಂದೇ ಅವರ ಮೊಮ್ಮಗ ಯುವ ರಾಜಕುಮಾರ್ ಕಲಾವಿದನಾಗಿ ಚಿತ್ರರಂಗದಲ್ಲಿ ಹುಟ್ಟೋ ಹಬ್ಬ.. all the best @yuva_rajkumar pic.twitter.com/ezIFFIr8pk— DrShivaRajkumar (@NimmaShivanna) April 24, 2020