Friday, 16th November 2018  

Vijayavani

Breaking News

ನಟ ಕಾಶೀನಾಥ್ ಅಂತಿಮ ಸಂಸ್ಕಾರ ಇಂದು ಸಂಜೆ

Thursday, 18.01.2018, 12:25 PM       No Comments

ಬೆಂಗಳೂರು: ಹೃದಯಾಘಾತದಿಂದ ಇಹಲೋಕ ತ್ಯಜಿಸಿರುವ ಹಿರಿಯ ನಟ ಕಾಶೀನಾಥ್​ ಅವರ ಅಂತಿಮ ಸಂಸ್ಕಾರ ಇಂದು ಸಂಜೆ ವೇಳೆಗೆ ಚಾಮರಾಜಪೇಟೆಯಲ್ಲಿ ನೆರವೇರಲಿದೆ.

ಮಧ್ಯಾಹ್ನ ಒಂದೂವರೆ ಗಂಟೆಗೆ ಎಪಿಎಸ್ ಕಾಲೇಜು ಮೈದಾನದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, 4 ಗಂಟೆಗೆ ಮನೆಯಲ್ಲಿ ಅಂತಿಮ ವಿಧಿವಿಧಾನ ಹಿಂದು ಬ್ರಾಹ್ಮಣ ಸಂಪ್ರದಾಯದಂತೆ ನಡೆಯಲಿದೆ.

ದುಬೈನಲ್ಲಿರುವ ಕಾಶೀನಾಥ್​ ಅವರ ಪುತ್ರಿ ವರ್ಷಿಣಿ ಸಂಜೆ 5 ಗಂಟೆಗೆ ವಾಪಸಾಗಲಿದ್ದು, ಆರು ಗಂಟೆಗೆ ಚಾಮರಾಜಪೇಟೆಯಲ್ಲಿರುವ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *

Back To Top