ಸ್ಯಾಂಡಲ್​ವುಡ್​​ನ ಕ್ವಾಟ್ಲೆ ಸತೀಶನ ಹೊಸ ಸಿನಿಮಾ ಟೀಸರ್​​ ರೀಲಿಸ್​​​

ಬೆಂಗಳೂರು: ಸ್ಯಾಂಡಲ್​ವುಡ್​​ನ ನಟ ನೀನಾಸಂ ಸತೀಶ್​​ ಅವರ ಹೊಸ ಸಿನಿಮಾ ಬ್ರಹ್ಮಚಾರಿ ಚಿತ್ರದ ಟೀಸರ್​​​ ಗುರುವಾರ ಬಿಡುಗಡೆಯಾಗಿದೆ.

’100% ವರ್ಜಿನ್’ ಎಂಬ ಟ್ಯಾಗ್ ಲೈನ್ ಹೊಂದಿರುವುದಲ್ಲದೆ, ಮದುವೆಯಾಗಿಯೂ ಬ್ರಹ್ಮಚಾರಿ ಹೇಗೆ? ಎಂಬ ಕುತೂಹಲವನ್ನು ’ಬ್ರಹ್ಮಚಾರಿ’ ಹುಟ್ಟುಹಾಕಿದೆ. ಟೀಸರ್ ಕೂಡ ರಸವತ್ತಾಗಿದ್ದು, ಪ್ರಸ್ತದ ದಿನ ತನ್ನ ವೀಕ್ ನೆಸ್ ನಿಂದಾಗಿ ಕಂಗೆಡುವ ಗಂಡನಾಗಿ ಸತೀಶ್ ನಟಿಸಿದ್ದಾರೆ. ಈತನ ಮಾನಸಿಕ ಸಮಸ್ಯೆಗೆ ಮದ್ದು ಕೊಡುವ ವೈದ್ಯರಾಗಿ ಹಿರಿಯ ನಟ ದತ್ತಣ್ಣ ಎಂದಿನಂತೆ ಲವಲವಿಕೆಯಿಂದ ಅಭಿನಯಿಸಿದ್ದಾರೆ.

ನೀನಾಸಂ ಸತೀಶ್ ಗೆ ಜೋಡಿಯಾಗಿ ಅದಿತಿ ಪ್ರಭುದೇವ, ಗೆಳೆಯರ ಪಾತ್ರದಲ್ಲಿ ಶಿವರಾಜ್ ಕೆ. ಆರ್. ಪೇಟೆ, ಅಶೋಕ್ ನಟಿಸಿದ್ದಾರೆ. ಉದಯ್ ಕೆ ಮೆಹ್ತಾ ಬಂಡವಾಳ ಹೂಡಿದ್ದು, ಧರ್ಮ ಸಂಗೀತ ಸಂಯೋಜಿಸಿದ್ದಾರೆ. ಸೆಪ್ಟೆಂಬರ್‌ಗೆ ’ಬ್ರಹ್ಮಚಾರಿ’ ಬಿಡುಗಡೆಯಾಗುವುದಾಗಿ ಚಿತ್ರತಂಡ ತಿಳಿಸಿದೆ.

ಕಳೆದ ವರ್ಷ ಬಿಡುಗಡೆಯಾಗಿದ್ದ ಅಯೋಗ್ಯ ಸಿನಿಮಾ ಉತ್ತಮ ಪ್ರದರ್ಶನ ಕಂಡಿತ್ತು. (ಏಜನ್ಸೀಸ್​)

Leave a Reply

Your email address will not be published. Required fields are marked *